spot_img
Tuesday, March 17, 2026
spot_img

ಡೀಮ್ಡ್ ಫಾರೆಸ್ಟ್ ಪಟ್ಟಿಯಲ್ಲಿರುವ ಅಕ್ರಮ ಸಕ್ರಮ ಅರ್ಜಿಗಳ ಜಂಟಿ ಸರ್ವೇ ಚುರುಕುಗೊಳಿಸಿ-ಅಧಿಕಾರಿಗಳಿಗೆ ಶಾಸಕ ಗುರುರಾಜ ಗಂಟಿಹೊಳೆ ಸೂಚನೆ

ಬೈಂದೂರು: ಬೈಂದೂರು ಹೋಬಳಿಯ ಬಗರ್ ಹುಕುಂ (ಅಕ್ರಮ ಸಕ್ರಮ) ಹಾಗೂ 94ಸಿ ಬಾಕಿ ಕಡತಗಳ ವಿಲೇವಾರಿ ಸಂಬಂಧ ಬೈಂದೂರು ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖಾ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿ ಹೊಳೆಯವರು ಮಾತನಾಡಿ ಪ್ರಸ್ತುತ ಬೈಂದೂರು ಹೋಬಳಿಯಲ್ಲಿ ಸಮಸ್ಯಾತ್ಮಕವಲ್ಲದ ಎಲ್ಲಾ ಅಕ್ರಮ ಸಕ್ರಮ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 35 ಕಡತಗಳು ತಾಂತ್ರಿಕ ಕಾರಣದಿಂದ ಮಂಜೂರಾತಿಗೆ ಬಾಕಿ ಇದ್ದು, ಅದನ್ನು ಶೀಘ್ರ ವಿಲೇವಾರಿ ಮಾಡಲಾಗುವುದು. ಡೀಮ್ಡ್ ಫಾರೆಸ್ಟ್ ಪಟ್ಟಿಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣದ ಸಾಕಷ್ಟು ಅರ್ಜಿಗಳು ವಿಲೇವಾರಿಗೆ ಬಾಕಿ ಇದೆ. ಅರಣ್ಯ, ಸರ್ವೇ ಹಾಗೂ ಕಂದಾಯ ಇಲಾಖೆಯ ಜಂಟಿ ಸರ್ವೇಗೆ ಈಗಾಗಲೇ ಅದರಂತೆ ನಿಗದಿ ಪಡಿಸಿದ ಕಾಲ ಮಿತಿಯೊಳಗೆ ಡೀಮ್ಡ್ ಫಾರೆಸ್ಟ್‌ನ ಸರ್ವೇ ನಡೆಸಿ ಮೂರು ಇಲಾಖೆಗಳ ಅಗತ್ಯ ಸಮನ್ವಯದೊಂದಿಗೆ ಬಗರ್ ಹುಕುಂ ಕಡತಗಳ ವಿಲೇವಾರಿಗೆ ಪೂರಕ ಕ್ರಮವಾಗ ಬೇಕು ಎಂದರು. ಬಾಕಿ ಉಳಿದ 94 ಸಿ ಅರ್ಜಿಗಳು ಸಹಾ ವಿಲೇವಾರಿ ಆಗಬೇಕು ಎಂದು ತಿಳಿಸಿದರು.

ಕುಮ್ಕಿ ಹಕ್ಕು: ಅಧಿವೇಶನದಲ್ಲಿ ಚರ್ಚೆ:
ಕ್ಷೇತ್ರದ ಬೈಂದೂರು ಹಾಗೂ ವಂಡ್ಸೆ ಹೋಬಳಿಯಲ್ಲಿ ಕುಮ್ಕಿ ಮಿತಿಯಲ್ಲಿ ಸುಮಾರು ನಮೂನೆ 50, 53 ಹಾಗೂ 57 ರಲ್ಲಿ 14,968 ಅರ್ಜಿ ಗಳು ಇದ್ದು, ಈ ಅರ್ಜಿಗಳ ಪೈಕಿ ಅರ್ಹ ರೈತರಿಗೆ ಭೂ ಮಂಜೂರಾತಿ ಮಾಡಲು ಇದೇ ತಿಂಗಳು ಮಾರ್ಚ್ 3 ರಿಂದ ನಡೆಯುವ ವಿಧಾನ ಮಂಡಲದ ಅಧಿವೇಶನದಲ್ಲಿ ಮುಖ್ಯ ಮಂತ್ರಿಗಳು ಹಾಗೂ ಸಚಿವರ ಗಮನ ಸೆಳೆಯಲಾಗುವುದು ಆ ಮೂಲಕ ನೈಜ ರೈತಾಪಿ ವರ್ಗದ ಹಿತ ಕಾಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಇದೆ ಸಂದರ್ಭದಲ್ಲಿ ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕಿನ ತಹಸೀಲ್ದಾರ್, ಉಪ ತಹಸೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!