spot_img
Saturday, February 14, 2026
spot_img

ಮುಂದಿನ ತಲೆಮಾರಿಗೆ ಇತಿಹಾಸವನ್ನು ಯಥಾವತ್ತಾಗಿ ತಲುಪಿಸಬೇಕಿದೆ : ಸಂಸದ ಕೋಟ

ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾ ಅಧಿವೇಶನ

ಜನಪ್ರತಿನಿಧಿ (ಕುಂದಾಪುರ) :  ನಮ್ಮ ದೇಶದ ಪುರಾತನ ಇತಿಹಾಸ ಇಡೀ ಜಗತ್ತನ್ನು ಸೆಳೆದಿದೆ. ಇತಿಹಾಸವನ್ನು ತಿಳಿಯುವುದು, ಅದನ್ನು ಅರ್ಥ ಮಾಡಿಕೊಳ್ಳುವುದು, ಅದನ್ನು ಅನುಭವಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಅದನ್ನು ಯಥಾವತ್ತಾಗಿ ದಾಟಿಸುವುದನ್ನು ನಾವು ಮರೆಯುತ್ತಿದ್ದೇವೆ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು, ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜು, ಕುಂದಾಪುರ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ಧಾರವಾಡ ವಲಯ, ಧಾರವಾಡ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಾಪಕರ ಸಂಘದ ಸಹಯೋಗದಲ್ಲಿ ಆರ್. ಎನ್. ಶೆಟ್ಟಿ ಸಭಾಂಗಣ ಭಂಡಾರ್ಕಾರ್ಸ್ ಕಾಲೇಜು ಕುಂದಾಪುರದಲ್ಲಿ ನಡೆದ ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.

ಇತಿಹಾಸ ಹೇಗಿದೆಯೋ ಹಾಗೆಯೇ ಮುಂದಿನ ತಲೆಮಾರಿಗೆ ತಲುಪಿಸಬೇಕಿರುವ ಅಗತ್ಯತೆ ಇದೆ. ಇತಿಹಾಸದ ಸಂಸ್ಕೃತಿಯನ್ನು ಮರೆಯುವ ಹಂತಕ್ಕೆ ಈ ದೇಶ ಬಂದು ತಲುವಿದೆ ಎನ್ನುವುದು ದುರಂತ. ಇತಿಹಾಸವನ್ನು ಉಳಿಸುವ ಮತ್ತು ಆ ಬಗ್ಗೆ ತಿಳಿದು ನಮ್ಮ ಇತಿಹಾಸವನ್ನು ಸಂರಕ್ಷಿಸುವುದರ ಬಗ್ಗೆ ಜನಜಾಗೃತಿ ಮೂಡಿಸಬೇಕಿದೆ. ಇಂತಹ ಕಾರ್ಯಕ್ರಮಗಳು ಕೂಡ ಅದಕ್ಕೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಬಳಿಕ, ಅಧಿವೇಶನದ ಸರ್ವಾಧ್ಯಕ್ಷ ಡಾ. ಕೇಶವನ್‌ ವೇಳುತಾಟ್‌ ಅವರಿಗೆ 34ನೇ ಅಧಿವೇಶನದ ಸರ್ವಾಧ್ಯಕ್ಷ ಡಾ. ಅಶ್ವಥ್‌ ನಾರಾಯಣ ಅವರು ಪುಷ್ಪ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.

ನಂತರ, ಅಧಿವೇಶನದ ಸರ್ವಾಧ್ಯಕ್ಷ ಡಾ. ಕೇಶವನ್‌ ವೇಳುತಾಟ್‌ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ, ಪ್ರಾದೇಶಿಕ ಹಿರಿಮೆಯ ಗುರುತಿಸುವಿಕೆಯಲ್ಲಿ ಇತಿಹಾಸಶಾಸ್ತ್ರದ ಬಗ್ಗೆ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

34ನೇ ಮಹಾ ಅಧಿವೇಶನದ ಜರ್ನಲ್‌ ಬಿಡುಗಡೆಗೊಳಿಸುವುದರೊಂದಿಗೆ ಜರ್ನಲ್‌ನ ಸಂಪಾದಕ ಮಂಡಳಿಯ ಸದಸ್ಯರುಗಳಾದ ಡಾ. ಈರಣ್ಣ ಪತ್ತಾರ, ಡಾ. ವಾಸುದೇವ ಬಡಿಗೇರ, ಡಾ. ಎನ್.ವಿ ಅಸ್ಕಿ ಹಾಗೂ ಡಾ. ಟಿ. ಶ್ರೀನಿವಾಸ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು.

ಡಾ. ವಾಸುದೇವ ಬಡಿಗೇರ ಮತ್ತು ಡಾ. ಗಂಗಾಧರ ದೈವಜ್ಞ ಅವರ ಶಿರಸಂಗಿ ಕಾಳಮ್ಮ ಚಾರಿತ್ರಿಕ ಅಧ್ಯಯನ ಹಾಗೂ ಆರಾಧನಾ ಪರಂಪರೆ ಎಂಬ ಅಧ್ಯಯನ ಗ್ರಂಥ, ಡಾ. ಶಿವಾನಂದ್‌ ಆರ್‌ ನಾಗಣ್ಣವರ ಅವರ ಕರ್ನಾಟಕದಲ್ಲಿ ಶೈವ ಧರ್ಮದ ಬೆಳವಣಿಗೆ ಮತ್ತು ಶೈವಾವಲೋಕನ ಎಂಬ ಗ್ರಂಥಗಳು, ಡಾ. ಮೋಹನ್‌ ಅವರ ಬಸವಣ್ಣ ಮತ್ತು ನಾರಾಯಣಗುರು ಸಾಮಾಜಿಕ ದರ್ಶನ – ಒಂದು ತೌಲನಿಕ ಅಧ್ಯಯನ  ಗ್ರಂಥ, ಪ್ರೊ. ಎಸ್.‌ ನಾಗರತ್ನಮ್ಮ ಅವರ ಕೋಲಾರ ಜಿಲ್ಲೆ-ಸ್ವಾತಂತ್ರ್ಯ ಚಳುವಳಿ ಮತ್ತು ಸೃಜನಿ ಎಂಬ ಗ್ರಂಥಗಳು ಹಾಗೂ ಡಾ. ಅನಿತಾ ಅವರ ಜೀವಜಲ ಎಂಬ ಗ್ರಂಥಗಳನ್ನು ಅನಾವರಣಗೊಳಿಸಲಾಯಿತು.

ನಂತರ ರಾಜರ್ಷಿ ಡಾ. ಡಿ. ವಿರೇಂದ್ರ ಹೆಗ್ಗಡೆ ಪ್ರಶಸ್ತಿಯನ್ನು ಡಾ. ಆರ್.‌ ಎನ್.ಷಡಕ್ಷರಯ್ಯ ಹಾಗೂ ಡಾ. ವಾಸುದೇವ ಬಡೀಗೇರ್‌ ಅವರಿಗೆ, ಡಾ.ಬಿ. ಷೇಕ್‌ ಅಲಿ ಪ್ರಶಸ್ತಿಯನ್ನು ಡಾ.ಎಸ್‌. ಕೆ ಅರುಣಿ ಅವರಿಗೆ, ಒನಕೆ ಓಬವ್ವ ಪ್ರಶಸ್ತಿಯನ್ನು ಡಾ. ಎಂ. ಎಸ್‌. ಅನಿತಾ ಅವರಿಗೆ, ಡಾ. ಮುಸ್ತಾಕ್‌ ಇನಾಮ್ದಾರ್‌ ಅವರಿಗೆ ಕುಂದಣ ಪ್ರಶಸ್ತಿಯನ್ನು ಹಾಗೂ ವಿನಯ್‌ ಕುಮಾರ್‌ ಡಿ. ಅವರಿಗೆ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಮ್.ಎಸ್.‌ ಜಯಕರ ಶೆಟ್ಟಿ ಅವರು ಪ್ರಧಾನ ಮಾಡಿದರು.

ಭಂಡಾರ್‌ಕಾರ್ಸ್‌ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯ ಶಾಂತಾರಾಮ ಪ್ರಭು ಸೇರಿ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ಇತಿಹಾಸ ಪರಿಷತ್ತು ಬೆಂಗಳೂರು ಇದರ ಅಧ್ಯಕ್ಷ ಪ್ರೊ. ಆರ್.‌ ರಾಜಣ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭಂಡಾರ್‌ಕಾರ್ಸ್‌ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಶುಭಕರಾಚಾರಿ ಸ್ವಾಗತಿಸಿದರು, ಭಂಡಾರ್ಕಾರ್ಸ್‌ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಂ. ಗೊಂಡ ವಂದಿಸಿ, ಉಪನ್ಯಾಸಕಿ ರೋಹಿಣಿ ಶರಣ್‌ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!