spot_img
Wednesday, April 1, 2026
spot_img

ಬೆಲೆ ಏರಿಕೆ ಮತ್ತು ಆರ್ಥಿಕ ದುಸ್ಥಿತಿಯಿಂದ ರಾಜ್ಯ ದಿವಾಳಿ : ವಿಜಯೇಂದ್ರ ಯಡಿಯೂರಪ್ಪ

ಜನಪ್ರತಿನಿಧಿ (ಬೆಂಗಳೂರು) : ಬೆಲೆ ಏರಿಕೆ ಮತ್ತು ಆರ್ಥಿಕ ದುಸ್ಥಿತಿಯಿಂದ ರಾಜ್ಯ ದಿವಾಳಿ ಅಂಚಿಗೆ ಬಂದು ತಲುಪಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು. ಸತತವಾಗಿ ಬೆಲೆ ಏರಿಕೆ ಮೂಲಕ ಸರ್ಕಾರ ಬಡವರ ಮೇಲೆ ಬರೆ ಎಳೆಯುತ್ತಿದೆ ಎಂದ ಅವರು, ರಾಜ್ಯದಲ್ಲಿ ಬೆಲೆ ಏರಿಕೆ ಎಷ್ಟಾಗಿದೆ ಎಂಬ ವಿವರ ನೀಡಿದರು.

ಆಸ್ತಿ ನೋಂದಣಿ ಶುಲ್ಕ – ಶೇ 60, ಆಸ್ತಿ ಮಾರ್ಗದರ್ಶನ ಮೌಲ್ಯಗಳು ಶೇ 30, ವಾಹನ ನೋಂದಣಿ ಶುಲ್ಕ ಶೇ 10, ಆಸ್ಪತ್ರೆ ಸೇವಾ ಶುಲ್ಕಗಳು ಶೇ 5, ಸರ್ಕಾರಿ ಕಾಲೇಜು ಶುಲ್ಕಗಳು ಶೇ 10, ಬೆಂಗಳೂರು ಮೆಟ್ರೋ ದರಗಳು ಶೇ 50, ಎಲೆಕ್ನಿಕ್ ವಾಹನ ತೆರಿಗೆ ಶೇ 10, ವಿದ್ಯುತ್ ದರಗಳು ಶೇ 14.5, ನೀರಿನ ಸುಂಕಗಳು ಶೇ 30, ಆಸ್ತಿ ತೆರಿಗೆ ಶೇ 25, ಬೀಜ ಬೆಲೆಗಳು ಶೇ 60, ಬಿಯರ್ ಬೆಲೆಗಳು ಶೇ 45, ಹಾಲಿನ ಬೆಲೆಗಳು ಶೇ 15, ಬಸ್ ದರಗಳು ಶೇ 15, ಜನನ ಮತ್ತು ಮರಣ ಪ್ರಮಾಣ ಪತ್ರಗಳ ಶುಲ್ಕ ಶೇ 100 (₹5 ರಿಂದ ₹50 ವರೆಗೆ ಏರಿಸಿದೆ).

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ರಾಜ್ಯ ಸರ್ಕಾರ ₹ 7,000 ಕೋಟಿ ನೀಡಬೇಕಿದ್ದು ಇನ್ನೂ ಕೊಟ್ಟಿಲ್ಲ. ಸಾರಿಗೆ ಸಂಸ್ಥೆ ಮುಚ್ಚುವ ಸಿತಿಗೆ ತಲುಪಿದೆ ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!