spot_img
Sunday, February 15, 2026
spot_img

ಕುಂಭಮೇಳದ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪತ್ತೆ ! : ನೀರು ಕುಡಿಯದಂತೆ ವೈದ್ಯರ ಎಚ್ಚರಿಕೆ

ಜನಪ್ರತಿನಿಧಿ (ಪ್ರಯಾಗರಾಜ್) : ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಆಗಮಿಸಿ ಪವಿತ್ರ ಸ್ನಾನ ಮಾಡುತ್ತಿರುವ ಭಕ್ತರಿಗೆ ವೈದ್ಯರು ಎಚ್ಚರಿಕೆ ನೀಡಿದ್ದು, ಕುಂಭಮೇಳದ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಆ ನೀರನ್ನು ಕುಡಿಯಬೇಡಿ ಎಂದು ಎಚ್ಚರಿಕೆ ನೀಡಿರುವುದಾಗಿ  ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಕುಂಭಮೇಳದ ಗಂಗಾ ನದಿಯಲ್ಲಿ ಮಲ ಬ್ಯಾಕ್ಟೀರಿಯಾದ ಬಗ್ಗೆ, ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದು, ಈ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್‌ನ ಹಿರಿಯ ಸಲಹೆಗಾರರೊಬ್ಬರು, “ಕುಂಭದಿಂದ ಹಿಂತಿರುಗುತ್ತಿರುವ ಸಾಕಷ್ಟು ಜನರಲ್ಲಿ ನಾವು ಹಲವು ವೈದ್ಯಕೀಯ ಸಮಸ್ಯೆಗಳಿರುವುದನ್ನು ಗಮನಿಸುತ್ತಿದ್ದೇವೆ. ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಕುಂಭಮೇಳದಲ್ಲಿ ಈವರೆಗೂ 52 ಕೋಟಿಗೂ ಅಧಿಕ ಮಂದಿ ಸ್ನಾನ ಮಾಡಿದ್ದಾರೆ. ಇಷ್ಟು ಮಂದಿ ಸ್ನಾನ ಮಾಡುವ ಜಾಗದಲ್ಲಿ ಇದು ಸಂಭವಿಸುತ್ತದೆ ಎಂದು ನಾವು ಮೊದಲೇ ನಿರೀಕ್ಷಿಸಿದ್ದೆವು ಎಂದು ಅವರು ಹೇಳಿದ್ದಾರೆ.

ಸಮಸ್ಯೆ ಇರುವ ಜನರ ಸಂಖ್ಯೆ ಕಡಿಮೆ ಇದೆ

ಇನ್ನು ಇದೇ ವೇಳೆ ಕುಂಭಮೇಳಕ್ಕೆ ಆಗಮಿಸಿದ ಜನರ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಅಲ್ಲಿ ವೈದ್ಯಕೀಯ ಸಮಸ್ಯೆಗಳೊಂದಿಗೆ ಬರುವ ಜನರ ಸಂಖ್ಯೆ ತುಂಬಾ ಕಡಿಮೆ. ಆ ರೀತಿಯಲ್ಲಿ, ನಿಯಂತ್ರಣವು ತುಂಬಾ ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಜನರು ಗ್ಯಾಸ್ಟ್ರೋಎಂಟರೈಟಿ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಅಲ್ಲಿ ಅವರಿಗೆ ಬೇದಿ, ವಾಂತಿಯಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.

“ಬಹುಶಃ, ಅವು ವೈರಾಣು ಜ್ವರಗಳಾಗಿರಬಹುದು. ಕೆಲವು ಜನರು ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದಾರೆ, ಉದಾಹರಣೆಗೆ ಮೂಗು ಸೋರುವುದು, ಸೀನುವುದು, ಕೆಮ್ಮು ಮತ್ತು ಶೀತ, ಇದು ತುಂಬಾ ಸಾಮಾನ್ಯವಾಗಿದೆ. ನೀವು ಅಂತಹ ಜನದಟ್ಟಣೆಯ ಸ್ಥಳಕ್ಕೆ ಹೋಗಿ, ನಂತರ ನೀವು ಸ್ನಾನ ಮಾಡಿದಾಗ ಅಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯವಾಗಿರುತ್ತದೆ.  ಹೀಗಾಗಿ ಜನರು ತಮ್ಮದೇ ಆದ ನೀರನ್ನು, ಬಹುಶಃ ಮನೆಯಿಂದ ನೀರು ಕೊಂಡೊಯ್ಯಬೇಕು ಎಂದು ಸಲಹೆ ನೀಡಿದ್ದಾರೆ.

“ಎರಡನೆಯ ವಿಷಯವೆಂದರೆ ಆರೋಗ್ಯಕರ ಸ್ಥಳದಿಂದ ಆಹಾರವನ್ನು ಸೇವಿಸುವುದು ಮತ್ತು ಹಸಿ ಆಹಾರಕ್ಕಿಂತ ಬೇಯಿಸಿದ ಆಹಾರವನ್ನು ಸೇವಿಸುವುದು ಉತ್ತಮ. ಜನದಟ್ಟಣೆ ಹೆಚ್ಚು ಇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಆದಷ್ಟೂ ಜನಸಮೂಹದಿಂದ ದೂರವಿರಲು ಪ್ರಯತ್ನಿಸಿ. ನದಿಯಲ್ಲಿ ಸ್ನಾನ ಮಾಡುವಾಗ ನೀರನ್ನು ಕುಡಿಯಬೇಡಿ.” ಎಂದು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!