spot_img
Friday, March 21, 2025
spot_img

ಉಪ್ಪುಂದ ಶ್ರೀ ಉಮಾಮಹೇಶ್ವರ ದೇವಸ್ಥಾನ: ನೂತನ ಶಿಲಾಮಯ ದೇವಸ್ಥಾನ ಲೋಕಾರ್ಪಣೆ, ಪುನರ್ ಪ್ರತಿಷ್ಠಾಪನೆ, ಅಷ್ಟಬಂಧ ಬ್ರಹ್ಮಕಲಶಾಭಿಷೇಕ

ಜನಪ್ರತಿನಿಧಿ ವಾರ್ತೆ] ಬೈಂದೂರು: ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾದಯ್ಯ ಶೆಟ್ರಮನೆ ಮೂಲಸ್ಥಾನ, ಉಪ್ಪುಂದ ಇಲ್ಲಿ ನೂತನವಾಗಿ ನಿರ್ಮಾಣಗೊಂಡ ಶಿಲಾಮಯ ಮಂದಿರದಲ್ಲಿ ಸಪರಿವಾರ ಶ್ರೀ ಉಮಾಮಹೇಶ್ವರ, ಶ್ರೀ ನಂದಿಕೇಶ್ವರ ಹಾಗೂ ಪರಿವಾರ ದೇವತೆಗಳ ಪುನರ್ ಪ್ರತಿಷ್ಠಾಪನೆ, ಅಷ್ಟಬಂಧ, ಬ್ರಹ್ಮಕಲಶಾಭಿಷೇಕ, ರಾಜಗೋಪುರ ಸಮರ್ಪಣೆ ಹಾಗೂ ಶ್ರೀ ಮನ್ಮಹಾರಥೋತ್ಸವ ಫೆ.21-2025ರಿಂದ ಫೆ.27-2025 ಗುರುವಾರದ ಪರ್ಯಂತ ನಡೆಯಲಿದೆ.

ಫೆ.21 ಶುಕ್ರವಾರ ಸಾಯಂಕಾಲ 4-30ಕ್ಕೆ ನೂತನ ಬ್ರಹ್ಮರಥವನ್ನು ಅಂಬಾಗಿಲು ಮುಖ್ಯ ರಸ್ತೆಯಿಂದ ವಾದ್ಯಘೋಷ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ದೇವಸ್ಥಾನದ ಪ್ರಾಂಗಣಕ್ಕೆ ಮೆರವಣಿಗೆಯಲ್ಲಿ ತರಲಾಗುವುದು.

ಫೆ.22 ಶನಿವಾರ ಬೆಳಿಗ್ಗೆ ಶ್ರೀ ದೇವತಾ ಪ್ರಾರ್ಥನೆ, ಶುದ್ದಿಕರ್ಮ, ಪಂಚಗವ್ಯ, ಹವನ, ಸ್ವಸ್ತಿ ಪುಣ್ಯಾಹ, ದೇವನಾಂದಿ, ಕೌತುಕ ಬಂಧನ, ಮಧುಪರ್ಕ, ಪ್ರಧಾನ ಸಂಕಲ್ಪ, ಸಪ್ತಶತಿ ಪಾರಾಯಣ ಶ್ರೀರುದ್ರ ಪಠಣ, ಅಷ್ಟದ್ರವ್ಯಾತ್ಮಕ ಗಣಹವನ , ಸಾಯಂಕಾಲ : ಭೂತಶುದ್ದಿ, ನೂತನ ದೇವಾಲಯ ಪರಿಗ್ರಹ, ವಾಸ್ತುರಾಕ್ಷೇಘ್ನ ವಿಧಾನಗಳು, ಬಲಿಪ್ರಧಾನ ಪೂಜೆ ನಡೆಯಲಿದೆ.

ಫೆ.23 ರವಿವಾರ ಬೆಳಿಗ್ಗೆ ಪ್ರಾಸಾದ ದೇವತಾಹೋಮ, ಕುಂಡಮಂಟಪ ಸಂಸ್ಕಾರ, ನವಗ್ರಹ ಶಾಂತಿ, ಚತುರ್ ದ್ರವ್ಯಾತ್ಮಕ ಶ್ರೀ ಗಣಪತಿ ಉಪನಿಷತ್ ಹವನ, ಅಗ್ನಿ ಗ್ರಹಣ, ಪೂಜಾ ಇತ್ಯಾದಿ. ಸಾಯಂಕಾಲ ಯಾಗಶಾಲಾ ಪ್ರವೇಶ, ಮಂಟಪ ಕಲಶ ಸ್ಥಾಪನೆ, ಅಗ್ನಿಜನನ, ಪ್ರಥಮಾಧಿವಾಸ ಹೋಮ, ಕಲಾಸಂಕೋಚಾಂಗ ಪ್ರಕ್ರಿಯೆಗಳು, ಅಧಿವಾಸಪೂಜೆ ಇತ್ಯಾದಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ.

ಫೆ. 24 ಸೋಮವಾರ ಬೆಳಿಗ್ಗೆ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಪೂರ್ವಾಹ್ನ ಸುಮುಹೂರ್ತದಲ್ಲಿ ನೂತನವಾಗಿ ನಿರ್ಮಿಸಿರುವ ಶಿಲಾಮಯ ದೇವಸ್ಥಾನದಲ್ಲಿ ಸಪರಿವಾರ ಶ್ರೀ ಉಮಾಮಹೇಶ್ವರ ದೇವರಿಗೆ ಶ್ರೀಗಳು ಕುಂಭಾಭಿಷೇಕವನ್ನು ಮತ್ತು ಶಿಖರಕಲಶಸ್ಥಾಪನೆ ಮತ್ತು ಅಭಿಷೇಕ ಹಾಗೂ ಜ್ಞಾನಮಂಟಪವನ್ನೊಳಗೊಂಡ ನೂತನ ರಾಜಗೋಪುರ ಲೋಕಾರ್ಪಣೆ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. ಬಳಿಕ ಬಂಧಶುದ್ಧಿ ಹೋಮ, ರತ್ನನ್ಯಾಸ ಹೋಮ, ಪ್ರತಿಷ್ಠಾಹೋಮ, ಸುಮುಹೂರ್ತದಲ್ಲಿ ಪ್ರತಿಷ್ಠೆ, ಶಿಖರ ಕಲಶ ಪ್ರತಿಷ್ಠೆ, ಪೂರ್ಣಾಷ್ಟಬಂಧ, ಪ್ರಾಣಪ್ರತಿಷ್ಠಾ ಹೋಮ, ತತ್ವಕಲಾನ್ಯಾಸ, ಪವಮಾನ ಹೋಮ, ಸುಬ್ರಹ್ಮಣ್ಯ ಹೋಮ, ಧ್ವಜಾರೋಹಣ, ಬಲಿಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಫೆ.25ಮಂಗಳವಾರ ಬೆಳಿಗ್ಗೆ : ಪಂಚಕುಂಡಗಳಲ್ಲಿ ಅಧಿವಾಸಹೊಮ, ತತ್ವಹೋಮ, ಪೂರ್ಣಕಲಾವೃದ್ಧಿ, ವಿಶೇಷ ಚಂಡಿಕಾ ಹವನ, ಮಧ್ಯಾಹ್ನ ಬಲಿ, ಪೂಜೆ, ಪ್ರಸಾದ ವಿತರಣೆ, ಸಾಯಂಕಾಲ : ದಿಶಾ ಹೋಮ, ದಂಡಬಲಿ, ಕಟ್ಟೆ ಉತ್ಸವ, ಅಷ್ಟಾವಧಾನ ಸೇವೆ ನಡೆಯಲಿದೆ.

ಫೆ.26ರಂದು ಬೆಳಿಗ್ಗೆ : ಪಂಚಕುಂಡಗಳಲ್ಲಿ ಅಧಿವಾಸ ಹೋಮ, ನೂತನ ರಥ ಶುದ್ದಿ ಹೋಮ, ನೂತನ ರಥಾ ಪೂಜಾ, ಅಶ್ವತ್ಥ ಕಟ್ಟೆಯಲ್ಲಿಯ ಅಶ್ವತ್ಥರಾಮಧ್ಯಾನ ಮಂಟಪದಲ್ಲಿ ರಾಮತಾರಕ ಹೋಮ, ಮಧ್ಯಾಹ್ನ ಪೂಜಾ ಬಲಿ, ಶ್ರೀ ಉಮಾಮಹೇಶ್ವರ ದೇವರ ರಥಾರೋಹಣ ರಥೋತ್ಸವ ನಡೆಯಲಿದೆ.

ಸಾಯಂಕಾಲ: ದೇವಸ್ಥಾನದ ಪ್ರಾಂಗಣದಿಂದ ಮೂಲಸ್ಥಾನದ ಅಶ್ವತ್ಥಕಟ್ಟೆಯವರೆಗೆ ನಿರ್ಮಿಸಿದ ರಥಬೀದಿಯಲ್ಲಿ ನೂತನ ರಥಯಾತ್ರೆ ಜರುಗಲಿರುವುದು, ರಾಜೋಪಚಾರ ಸೇವಾ, ಮೃಗಪೇಟೆ, ಭೂತಬಲಿ, ಮಂಡಲದರ್ಶನ, ಬ್ರಹಕಲಶ ಸ್ಥಾಪನೆ, ಕುಲದೇವತೆ ಶ್ರೀ ದುರ್ಗಾಪರಮೇಶ್ವರಿಯ ಹಣಬಿನಕಟ್ಟೆಯಲ್ಲಿ ನೇಮದಂತೆ ಪೂಜಾಕಾರ್ಯ, ಅಹೊರಾತ್ರಿ ಭಜನಾ ಕಾರ್ಯಕ್ರಮ ಹಾಗೂ ಪ್ರತಿದಿನ ಸಂಜೆ 4-30ರಿಂದ 5-30ರವರಗೆ ಭಜನಾ ಕಾರ್ಯಕ್ರಮ ನಡೆಯಲಿದೆ.

ಫೆ. 27ರಂದು ಬೆಳಿಗ್ಗೆ : ಪಂಚಕುಂಡಗಳಲ್ಲಿ ಹೋಮ, ಬೃಹಕಲಶಾಭಿಷೇಕ, ಶ್ರೀ ಮಹಾರುದ್ರಯಾಗ, ಅವನೃತೋತ್ಸವ, ಮಹಾಪೂರ್ಣಹುತಿ, ಧ್ವಜಾವರೋಹಣ, ಅಂಕುರಾರ್ಪಣ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ. “ಮಹಾಅನ್ನಸಂತರ್ಪಣೆ” ವೈದಿಕಮಂತ್ರ ಆರ್ಶೀವಚನ, ಮಂಗಲ ಸಮಾರಂಭ ನಡೆಯಲಿದೆ.
ಸಂಜೆ 4-30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ವೇ.ಮೂ. ಆಗಮಶ್ರೇಷ್ಠ ಶಂಕರ ಪರಮೇಶ್ವರ ಭಟ್ ಕಟ್ಟೆ ನವಿಲಗೋಣ, ಹೊನ್ನಾವರ ಇವರು ಆಶೀರ್ವಚನ ನೀಡಲಿದ್ದಾರೆ.

ಧಾರ್ಮಿಕ ಉಪನ್ಯಾಸವನ್ನು ಶ್ರೀ ಶಾರದಾಪೀಠಂ, ಶೃಂಗೇರಿ ಇಲ್ಲಿನ ಪ್ರಾಂತೀಯ ಧರ್ಮಾಧಿಕಾರಿ ವೇ.ಮೂ. ಲೋಕೇಶ ಅಡಿಗ ಬಡಾಕೆರೆ ಇವರು ನೀಡಲಿದ್ದಾರೆ. ಸಭಾಧ್ಯಕ್ಷತೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರು ಇಲ್ಲಿನ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ, ನಾಗಪುರ ಇಲ್ಲಿನ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೆಂಡೆ ನೆರವೇರಿಸುವರು.

ಮುಖ್ಯ ಅತಿಥಿಗಳಾಗಿ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ಮಾಜಿ ಶಾಸಕರಾದ ಬಿ.ಎಮ್. ಸುಕುಮಾರ ಶೆಟ್ಟಿ, ಕೆ. ಗೋಪಾಲ ಪೂಜಾರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ಬಾಬು ಶೆಟ್ಟಿ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರಾದ ಧನಂಜಯ ಶೆಟ್ಟಿ, ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಯು. ಸತೀಶ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನಚಂದ್ರ ಉಪ್ಪುಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪತ್ರಕರ್ತ ಕೆ.ಸಿ. ರಾಜೇಶ ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ಸಂಜೆ 7.30ರಿಂದ ಯಕ್ಷಗಾನ ತಾಳಮದ್ದಳೆ ‘ಶ್ರೀರಾಮಾಂಜನೇಯ’ ನಡೆಯಲಿದೆ.

ಈ ಎಲ್ಲ ಕಾರ್ಯಕ್ರಮಗಳಿಗೂ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಲಜಾಕ್ಷಿ ಎಂ ಶೆಟ್ಟಿ, ಯು.ಸೀತಾರಾಮ ಶೆಟ್ಟಿ, ನಾರಾಯಣ ಎಂ.ಶೆಟ್ಟಿ, ಕೆ.ವಸಂತ ಭಂಡಾರಿ, ಯು.ಬಿ.ಶೆಟ್ಟಿ, ಭುಜಂಗ ಎಂ.ಶೆಟ್ಟಿ, ರತ್ನಾಕರ ಟಿ.ಶೆಟ್ಟಿ, ಹರೀಶ್ ಕುಮಾರ್ ಶೆಟ್ಟಿ ಹಾಗೂ ಶ್ರೀಮತಿ ಸಿದ್ಧಮ್ಮ ಮಾದಯ್ಯ ಶೆಟ್ಟಿ ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್ ಮಾದಯ್ಯ ಶೆಟ್ರಮನೆ ಮೂಲಸ್ಥಾನ ಉಪ್ಪುಂದ ಹಾಗೂ ಮಾದಯ್ಯ ಶೆಟ್ರಮನೆ ಕುಟುಂಬಿಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!