spot_img
Thursday, April 2, 2026
spot_img

ಫೆ. 27 ರಿಂದ ಮಾರ್ಚ್ 3ರವರೆಗೆ ವಿಧಾನಸೌಧದ ಆವರಣದಲ್ಲಿ ಪುಸ್ತಕ, ಸಾಂಸ್ಕೃತಿಕ ಮತ್ತು ಆಹಾರ ಮೇಳ : ಯು.ಟಿ. ಖಾದರ್

ಜನಪ್ರತಿನಿಧಿ (ಮಂಗಳೂರು) : ರಾಜ್ಯದ ವಿಧಾನಸಭೆಯ ಸಚಿವಾಲಯದ ವತಿಯಿಂದ ಇದೇ ಮೊದಲ ಬಾರಿಗೆ ವಿಧಾನಸೌಧದಲ್ಲಿ ಪುಸ್ತಕ, ಸಾಂಸ್ಕೃತಿಕ ಮತ್ತು ಆಹಾರ ಮೇಳ ನಡೆಯಲಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಮಾಹಿತಿ ನೀಡಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಖಾದರ್‌, ಫೆ. 27 ರಿಂದ ಮಾರ್ಚ್ ಮೂರರವರೆಗೆ ನಡೆಯಲಿರುವ ಈ ಮೇಳ ನಡೆಯಲಿದೆ. ವಿಧಾನಸೌಧದ ಆವರಣದಲ್ಲಿ ಮೊತ್ತ ಮೊದಲ ಬಾರಿಗೆ ಫೆಸ್ಟಿವಲ್ ನಡೆಯಲಿದೆ ಎಂದು ತಿಳಿಸಿದರು.

ಬರಹಗಾರರನ್ನು ವಿಧಾನಸೌಧದ ಹತ್ತಿರ ತರುವ ಪ್ರಯತ್ನವಿದು. ವಿಧಾನಸೌಧದ ಸುತ್ತ 150ಕ್ಕೂ ಅಧಿಕ ಸ್ಟಾಲ್ಸ್ ಬರಲಿದೆ. ಫೆಸ್ಟಿವಲ್ ನಲ್ಲಿ ಶೇ. 80 ಕನ್ನಡ ಪುಸ್ತಕ, ಶೇ. 20 ಇತರ ಪುಸ್ತಕಗಳು ಇರಲಿದೆ. ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಯ ಮೂಲಕ ಬರಹಗಾರರಿಗೆ ಅವಕಾಶವಿರಲಿದೆ. ಸಂಜೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.

ಶಾಸಕರ ನಿಧಿಯಿಂದ 2 ರಿಂದ 5 ಲಕ್ಷದ ಹಣದಿಂದ ಪುಸ್ತಕ ಖರೀದಿಗೆ ಅವಕಾಶವಿದೆ. ಅದನ್ನು ತಮ್ಮ ಕ್ಷೇತ್ರದ ಶಾಲಾ ಕಾಲೇಜುಗಳಿಗೆ ನೀಡಲು ಅವಕಾಶವಿದೆ ಎಂದು ಖಾದ‌ರ್ ಮಾಹಿತಿ ನೀಡಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!