spot_img
Saturday, February 14, 2026
spot_img

ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಮಾತೃವಂದನಾ ಭಾವನಾತ್ಮಕ ಕ್ಷಣ | ಹೆತ್ತವರ ಪಾದಪೂಜೆ ಮಾಡಿದ ವಿದ್ಯಾರ್ಥಿಗಳು

ಜನಪ್ರತಿನಿಧಿ ವಾರ್ತೆ] ಕುಂದಾಪುರ, ಫೆ.1: ಎಂ.ಎಂ. ಹೆಗ್ಡೆ ಎಜುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಕುಂದಾಪುರ ಪ್ರವರ್ತಿತ ಕುಂದಾಪುರದ ಸುಣ್ಣಾರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲು ಇವರ ವತಿಯಿಂದ ಶನಿವಾರ ಮಾತೃವಂದನಾ ಕಾರ್ಯಕ್ರಮ ಜರಗಿತು. ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಈ ದಿನಗಳ ತಂದೆ-ತಾಯಿಯ ಮಹತ್ವ, ಬಾಂಧವ್ಯದ ವಿಶೇಷತೆಯನ್ನು ವಿದ್ಯಾರ್ಥಿಗಳಿಗೆ ತಿಳಿಯ ಪಡಿಸುವ ಸಲುವಾಗಿ ಆಯೋಜಿಸಿದ ಈ ಭಾವನಾತ್ಮಕ ಕಾರ್ಯಕ್ರಮ ಮೌಲ್ಯ, ಭಾವನೆಗಳನ್ನು ಜಾಗೃತಗೊಳಿಸಿತು. ಮಾತೃ ಪಿತೃಗಳ ಪಾದಪೂಜೆ ಮಾಡಿದ ವಿದ್ಯಾರ್ಥಿಗಳು ಎಂದೂ ಅನುಭವಿಸದ ಅನುಭವ ಅನುಭವಿಸಿ, ಭಾವನಾತ್ಮಕ ಕ್ಷಣದಲ್ಲಿ ಪುಳಕಿತರಾದರು.

ಈ ಸಂದರ್ಭದಲ್ಲಿ ವಿಶೇಷ ಭಾಷಣ ಮಾಡಿದ ಪ್ರಸಿದ್ಧ ವಾಗ್ಮಿ, ದಾಮೋದರ ಶರ್ಮ ಬಾರಕೂರು ಅವರು ಮಾತನಾಡಿ, ಭಾರತದಂತಹ ಪುಣ್ಯ ಭೂಮಿಯಲ್ಲಿ ನಾವು ಬದುಕುತ್ತಿದ್ದೇವೆ ಎನ್ನುವುದು ಹೆಮ್ಮೆ. ಜ್ಞಾನದ ಬೆಳಕಿನಿಂದ ಬೆಳಗುವ ಎಲ್ಲಾ ಜೀವ ರಾಶಿಗಳಲ್ಲಿ ಒಂದು ಸಂತೋಷವನ್ನು ಜಾಗೃತವಾಗಿರಿಸಬಹುದಾದ ಪವಿತ್ರ ನದಿಗಳ ಅವತರಣಕ್ಕೆ ಆಶ್ರಯವಾದ ಈ ಭೂಮಿಯಲ್ಲಿ ತಂದೆ ತಾಯಿಗಳಿಗೆ ದೇವರ ಸ್ಥಾನ ಕೊಟ್ಟಿದ್ದು ಭಾರತೀಯ ಪರಂಪರೆ ಎಂದು ಹೇಳಿದರು.

ಇನ್ನೊಬ್ಬರ ಹೋಲಿಕೆ ಮಾಡಿ ನಾವು ಮಾನಸಿಕವಾಗಿ ದೌರ್ಬಲ್ಯ ಹೊಂದಬಾರದು. ಒಗ್ಗಟ್ಟಿನಿಂದ ನಾವು ಗಟ್ಟಿಯಾಗಬೇಕು. ಸಾಮಾಜಿಕ ಬದುಕಿನಲ್ಲಿ ಈ ತಾರತಮ್ಯಗಳನ್ನು ಮರೆತು ಒಳ್ಳೆಯ ಭಾವನೆಯಿಂದ ಒಟ್ಟಾದಾಗ ನಮ್ಮ ಬದುಕು. ಸಾಮಾಜಿಕ ಕರ್ತವ್ಯ ಅರ್ಥಪೂರ್ಣವಾಗುತ್ತದೆ, ನಮ್ಮ ಪುರಾಣ ಗ್ರಂಥಗಳು ತಂದೆ ತಾಯಿಯ ಮಹತ್ವವನ್ನು ತಿಳಿಸಿವೆ. ಅದನ್ನು ಸದಾ ನಾವು ನೆನಪಿಸಿಕೊಳ್ಳಬೇಕು. ತಂದೆತಾಯಿಗಳನ್ನು ಎಂದೆದಿಂಗೂ ಮರೆಯಬಾರದು ಎಂದು ಅವರು, ಈ ಜೀವನದಲ್ಲಿ ಅಪ್ಪ ಅಮ್ಮನನ್ನು ಬದಲಾವಣೆ ಮಾಡಲು ಸಾಧ್ಯವೇ ಇಲ್ಲ. ಬದುಕಿನ ಸರ್ವಶ್ರೇಷ್ಠ ತಾಯಿಯನ್ನು ವರ್ಣಿಸಲು ಸಾಧ್ಯವಿಲ್ಲ. ಇಂತಹ ತಾಯಿಯನ್ನು ಪ್ರತಿನಿತ್ಯ ಪೂಜಿಸಬೇಕು. ಅವರ ಆಶೀರ್ವಾದದಿಂದಲೇ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.

ಎಂ.ಎಂ. ಹೆಗ್ಡೆ ಎಜುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಮಹೇಶ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭ ಆರ್. ದಾಮೋದರ ಶರ್ಮಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗರಾಜ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಉಪನ್ಯಾಸಕಿ ದಿವ್ಯಾ ಶೆಟ್ಟಿ ಅತಿಥಿಯನ್ನು ಪರಿಚಯಿಸಿದರು. ಶ್ರೀನಿವಾಸ ವೈದ್ಯ ಕಾರ್ಯಕ್ರಮ ನಿರ್ವಹಿಸಿದರು. ಹೈಸ್ಕೂಲು ವಿಭಾಗದ ಮುಖ್ಯೋಪಾಧ್ಯಾಯಿನಿ ಸರೋಜಿನಿ ಪಿ.ಆಚಾರ್ಯ ವಂದಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!