spot_img
Tuesday, March 31, 2026
spot_img

ಯಕ್ಷಗಾನ ಕಲೆ-ಕಲಾವಿದರ ಸಂಕಷ್ಟ: ಕಾಸರಗೋಡು ಜಿಲ್ಲಾಧಿಕಾರಿಗಳಿಂದ ಸಭೆ

ಜನಪ್ರತಿನಿಧಿ ವಾರ್ತೆ (ಕುಂದಾಪುರ) ಜ.30: ಕಾಸರಗೋಡು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜ.30ರಂದು ಗಡಿನಾಡು ಕಾಸರಗೋಡಿನಲ್ಲಿ ಯಕ್ಷಗಾನ ಕಲಾವಿದರ ಸಂಕಷ್ಟ ಕುರಿತಾದ ಸಮಾಲೋಚನಾ ಸಭೆಯು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಕೇರಳ ಸರ್ಕಾರದಿಂದ ಯಕ್ಷಗಾನಕ್ಕೆ ಪ್ರತ್ಯೇಕ ಆಕಾಡಮಿ ರಚಿಸುವ ಕುರಿತಾದ ಸಲಹೆಗಳು ಬಂದು ಜಿಲ್ಲಾಧಿಕಾರಿಗಳು ಕೂಡಲೇ ಸ್ಪಂದಿಸಿದ್ದಾರೆ. ಧರ್ಮಸ್ಥಳ ಮೇಳದ ಯಕ್ಷಗಾನ ಭಾಗವತ, ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು, ವಾಮನ ಆಚಾರ್ಯ, ರಾಕೇಶ್ ಗೋಳಿಯಡ್ಕ, ಕಲಾವಿದ ಸುರೇಶ್ ಬೇಕಲ್, ಚಂದ್ರ ಮೋಹನ್ ಕೂಡ್ಲು ಮುಂತಾದವರು ಭಾಗವಹಿಸಿದರು.

ಯಕ್ಷಗಾನದ ತವರೂರು, ಪ್ರಾರ್ಥಿಸುಬ್ಬನ ಜನ್ಮನಾಡು ಕುಂಬಳೆ ಸೀಮೆಯ ಕಾಸರಗೋಡು. ಹಿಂದಿನ ಕಾಲದಲ್ಲಿ ಕಲಾವಿದರಿಂದ ತುಂಬಿದ ಈ ಕ್ಷೇತ್ರದಲ್ಲಿ ಯಕ್ಷಗಾನ ಮೆರೆಯುತ್ತಿತ್ತು. ಮನೆ ಮನೆಯಲ್ಲೂ ಯಕ್ಷಗಾನದ ವಾತಾವರಣ ವಿತ್ತು. 22ಕ್ಕೂ ಹೆಚ್ಚು ವೃತ್ತಿಪರ ಮೇಳಗಳು ಕಾಸರಗೋಡಿನಲ್ಲಿದ್ದು ಬೆರಳೆಣಿಕೆಯ ಮೂರು ಮೇಳ ಇಂದು ಇದ್ದು, ಉಳಿದ ಮೇಳಗಳು ಇಂದು ಸಂಪೂರ್ಣ ನಾಮಾವಶೇಷವಾಗಿದೆ. ಯಕ್ಷಗಾನಕ್ಕಾಗಿ ಹಿಂದಿನ ಸರಕಾರ ಆಯೋಜಿಸಿದ ಪ್ರಾರ್ಥಿಸುಬ್ಬ ಕಲಾಕ್ಷೇತ್ರವು ಯಾವುದೇ ಚಟುವಟಿಕೆಗಳಿಲ್ಲದೆ ಹೆಸರಿಗೆ ಮಾತ್ರ ವಾಗಿರುತ್ತದೆ. ಕಾಸರಗೋಡಿನ ಕಲಾವಿದರು ಸೌಲಭ್ಯ ವಂಚಿತರಾಗಿದ್ದಾರೆ. ಕರ್ನಾಟಕ ಸರಕಾರದವರು ಕೇರಳದವರೆಂದು, ಕಾಸರಗೋಡಿನ ಕನ್ನಡಿಗರಾದ ನಮಗೆ ಕೇರಳದಿಂದಲೂ ಯಾವುದೇ ಸೌಲಭ್ಯಗಳಿಲ್ಲದೆ ಪರಿತಪಿಸುವಂತಾಗಿದೆ. ಪ್ರದರ್ಶನ ಹಾಗೂ ಇನ್ನಿತರ ವಿಚಾರದಲ್ಲಿ ಕರ್ನಾಟಕವನ್ನೇ ಅವಲಂಬಿಸಬೇಕಾಗಿದೆ.
ಯಕ್ಷಗಾನವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಆ ದೃಷ್ಟಿಕೋನದಿಂದ ಕರ್ನಾಟಕ ಸರಕಾರದಂತೆಯೇ ,ಕೇರಳ ಸರಕಾರವು ಯಕ್ಷಗಾನ ಅಕಾಡೆಮಿಯನ್ನು ಸ್ಥಾಪಿಸಿ ,ಹಿರಿಯ ಅನುಭವಿ ಕಲಾವಿದರೊಳಗಂಡ ಅದ್ಯಕ್ಷರನ್ನು, ಸದಸ್ಯರನ್ನು ಆಯ್ಕೆ, ಮಾಡಿ ಕಾರ್ಯ ಚಟುವಟಿಕೆ ಆರಂಭಿಸಬೇಕಾಗಿದೆ. ಯಕ್ಷಗಾನವನ್ನು ಮಲಯಾಳಂ ಭಾಷೆಗೂ ಭಾಷಾಂತರಿಸಿ ಕೇರಳದಾದ್ಯಂತ ಪಸರಿಸಬೇಕು. ಈ ಕುರಿತಾಗಿ ಜಿಲ್ಲಾಧಿಕಾರಿಗಳು ಕೇರಳ ಸರಕಾರಕ್ಕೆ ಮನವಿ ಮಾಡಿ ಕೂಡಲೇ ಸ್ಪಂದಿಸಬೇಕಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ ವಿನಂತಿಸಿದರು.

ಕಲಾವಿದರಿಗೆ ವಿಮಾ ಸೌಲಭ್ಯ ಪೆನ್ಷನ್ ಸೌಲಭ್ಯ ಮುಂತಾದ ಆರ್ಥಿಕ ಸಹಕಾರವನ್ನು ಸರಕಾರ ಬರಿಸಬೇಕಾಗಿದೆ. ಎಂದು ಸುರೇಶ್ ಬೇಕಲ್ ವಿನಂತಿಸಿದರು. ಯಕ್ಷಗಾನ ಅಕಾಡೆಮಿ ಅತೀ ಅಗತ್ಯ ಎಂದು ವಾಮನ ಆಚಾರ್ಯರು ತಿಳಿಸಿದರು. ರಾಕೇಶ್ ಗೋಳಿಯಡ್ಕ ಅವರು ಇಂದಿನ ಪ್ರದರ್ಶನಗಳ ಗುಣಮಟ್ಟ 10,000ಕ್ಕೂ ಹೆಚ್ಚು ಕಾಸರಗೋಡಿನ ಕಲಾವಿದರಿದ್ದಾರೆ. ಸೌಲಭ್ಯ ವಂಚಿತರಾಗಿದ್ದಾರೆ. ಅಕಾಡೆಮಿ ಅತಿ ಅಗತ್ಯ ಎಂದು ವಿವರಿಸಿದರು.

ಕಾಸರಗೋಡು ಜಿಲ್ಲಾಧಿಕಾರಿಗಳು ಈ ಕುರಿತು ಕೂಡಲೆ ಸರಕಾರದೊಂದಿಗೆ ಸಮಾಲೋಚಿಸಿ ಮುಂದಿನ ಹಂತದಲ್ಲಿ ಎಲ್ಲಾ ಕಲಾವಿದರ ಒಳಗೊಂಡ ಸಮಾಲೋಚನ ಸಭೆ ನಡೆಸುವುದಾಗಿ ತಿಳಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!