spot_img
Wednesday, April 1, 2026
spot_img

ಕೆಡಿಪಿ ಸಭೆ ವಿಳಂಬ : ಕುಂದಾಪುರ ತಾಲೂಕು ಕೆಡಿಪಿ ಸದಸ್ಯರಿಂದ ಸಿಎಂಗೆ ಪತ್ರ | ಸಭೆ ಕರೆಯದಿದ್ದಲ್ಲಿ ಧರಣಿ ಕೂರುವುದಾಗಿ ಎಚ್ಚರಿಕೆ

ಜನಪ್ರತಿನಿಧಿ (ಕುಂದಾಪುರ) : ತಾಲೂಕು ಕೆಡಿಪಿ ಸಭೆ ನಡೆದು ಈಗಾಗಲೇ ಐದು ತಿಂಗಳಾಯಿತು. ಮೂರು ತಿಂಗಳಿಗೊಮ್ಮೆ ಅಗತ್ಯವಾಗಿ ಕೆಡಿಪಿ ಸಭೆ ನಡೆಸುವಂತೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಸೂಚಿಸಬೇಕು ಎಂದು ಕುಂದಾಪುರ ತಾಲೂಕು ಕೆಡಿಪಿ ಸದಸ್ಯರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ವಿನಂತಿಸಿಕೊಂಡಿದ್ದಾರೆ.

ರಾಜ್ಯ ಸರಕಾರವು ರಾಜ್ಯದ ಪ್ರಗತಿಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರ ಅನುಷ್ಠಾನ ಹಾಗೂ ತಾಲೂಕು ಮಟ್ಟದಲ್ಲಿ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಮಾಡಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮೂರು ತಿಂಗಳಿಗೊಮ್ಮೆ ಕೆಡಿಪಿ ಸಭೆ ನಡೆಸುವ ಬಗ್ಗೆ ಸ್ಪಷ್ಟ ನಿರ್ದೇಶನವಿದೆ. ಆದರೆ ಕುಂದಾಪುರ ತಾಲೂಕಿನಲ್ಲಿ ಸರಿಯಾಗಿ ಸಭೆಯನ್ನು ಕರೆಯದೆ ಜನರ ಸಂಕಷ್ಟಗಳಿಗೆ ಪರಿಹಾರ ದೊರೆಯುತ್ತಿಲ್ಲ. ತಾಲೂಕು ಪಂಚಾಯತ್ ಚುನಾವಣೆಗಳು ನಡೆಯದೇ ಇರುವುದರಿಂದ ಕೆಡಿಪಿ ಸದಸ್ಯರ ಸಭೆಯನ್ನು ಕಾಲಕ್ಕೆ ಸರಿಯಾಗಿ ನಡೆಸಿದರೆ ಒಂದಿಷ್ಟು ಅನೂಕೂಲ ಆಗಲಿದೆ ಎಂದು ಪತ್ರದ ಮೂಲಕ ಹೇಳಿದ್ದಾರೆ.

ಕೆಡಿಪಿ ಸಭೆಗೆ ಸ್ಥಳೀಯ ಶಾಸಕರು ಅಧ್ಯಕ್ಷರಾಗಿದ್ದು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕಾರ್ಯದರ್ಶಿಯಾಗಿದ್ದು, ಪದೇ ಪದೇ ಕೆಡಿಪಿ ಸದಸ್ಯರು ಸಭೆ ಕರೆಯುವಂತೆ ಒತ್ತಾಯಿಸಿದ್ದರೂ ಸಭೆ ಕರೆಯುತ್ತಿಲ್ಲ ಎಂದು ಪತ್ರದಲ್ಲಿ ಆಕ್ರೋಶ ಹೊರಹಾಕಿದ್ದಲ್ಲದೇ, ಈಗಾಗಲೇ ಒಂದು ಕೆಡಿಪಿ ಸಭೆ ನಡೆದು ಐದು ತಿಂಗಳು ಕಳೆದಿದೆ. ಸಭೆಯಲ್ಲಿ ನಡೆದ ವಿಷಯಗಳ ಅನುಷ್ಠಾನವೂ ಆಗಿಲ್ಲ. ಸರ್ಕಾರದ ಉದ್ದೇಶ ಹಾಗೂ ಯೋಜನೆಗಳು ಜನರಿಗೆ ಸರಿಯಾಗಿ ತಲುಪಲು ಮತ್ತು ಜನರ ಸಮಸ್ಯೆಗಳಿಗೆ ತುರ್ತು ಪರಿಹಾರ ಒದಗಿಸುವ ಸರ್ಕಾರದ ಕಾರ್ಯಸೂಚಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ತಾವುಗಳು ಸೂಕ್ತ ಮಾರ್ಗದರ್ಶನವನ್ನು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಕ್ಕೆ ಸೂಚಿಸುವಂತೆ ವಿನಂತಿಸಿಕೊಂಡಿದ್ದಾರೆ.

ಸೋಮವಾರ ತಾಲೂಕು ಪಂಚಾಯತ್‌ನಲ್ಲಿ ತಾಲೂಕು ಕಾರ್ಯನಿರ್ವಹಣಾ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ತಾಲೂಕು ಪಂಚಾಯತ್‌ ಮ್ಯಾನೇಜರ್‌ಗೆ ಮನವಿ ಪತ್ರವನ್ನು ಹಸ್ತಾಂತರಿಸುವ ಮೂಲಕ ಮೂರು ತಿಂಗಳಿಗೊಮ್ಮೆ ಕೆಡಿಪಿ ಸಭೆ ನಡೆಸುವಂತೆ ತಾಲೂಕು ಕೆಡಿಪಿ ಸಮಿತಿಯ ಸದಸ್ಯರಾದ ಶರತ್‌ ಕುಮಾರ್‌ ಶೆಟ್ಟಿ ಬಾಳಿಕೆರೆ, ರಮೇಶ್‌ ಶೆಟ್ಟಿ ವಕ್ವಾಡಿ, ಜ್ಯೋತಿ ಪುತ್ರನ್‌, ವಿಜಯಾಧರ್‌ ಬಸ್ರೂರು ಒತ್ತಾಯಿಸಿದರು. ಮಾತ್ರವಲ್ಲದೇ, ಕೆಡಿಪಿ ಸಭೆಯನ್ನು ಶೀಘ್ರವಾಗಿ ಕರೆಯದೇ ಇದ್ದಲ್ಲಿ ತಾಲೂಕು ಪಂಚಾಯತ್‌ನ ಮುಂದೆ ಧರಣಿ ಕೂರುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!