spot_img
Sunday, February 15, 2026
spot_img

ಕುಂದಾಪುರ : ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ

ಕೊಲ್ಲೂರು- ಮೈಸೂರು ಬಸ್‌ ಸಂಚಾರ ಪುನರಾರಂಭಿಸಲು ಸಭೆ ಸೂಚನೆ | ತಾಲೂಕು ಅಧಿಕಾರಿಗಳ ಅನುಪಸ್ಥಿತಿಗೆ ಅಧ್ಯಕ್ಷರು, ಇಓ ತರಾಟೆ 

 ಜನಪ್ರತಿನಿಧಿ (ಕುಂದಾಪುರ) : ಕುಂದಾಪುರ ತಾಲೂಕಿನ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ  ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್. ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ ಅವರ ಅಧ್ಯಕ್ಷತೆಯಲ್ಲಿ ಗ್ಯಾರೆಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಡಿಸೆಂಬರ್ ತಿಂಗಳಿನಲ್ಲಿ 5 ಗ್ಯಾರಂಟಿಗಳಿಗಾಗಿ ತಾಲೂಕಿಗೆ 20 ಕೋಟಿ 52 ಲಕ್ಷದ 51 ಸಾವಿರದ‌ 816 ರೂ. ಮೊತ್ತ ಬಿಡುಗಡೆಯಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಕುಂದಾಪುರ ತಾಲೂಕಿನಲ್ಲಿ ಶಕ್ತಿ ಯೋಜನೆಯಡಿ ಡಿಸೆಂಬರ್‌ವರೆಗೆ ಒಟ್ಟು 11099961 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಒಟ್ಟು 383002325 ರೂ. ಮೊತ್ತ ಈ ಯೋಜನೆಗಾಗಿ ಒಳಕೆಯಾಗಿದೆ.

ಗೃಹ ಜ್ಯೋತಿ ಯೋಜನೆಯಡಿ ಶಂಕರನಾರಾಯಣ ಘಟಕದಲ್ಲಿ ಡಿಸೆಂಬರ್ ತನಕ ಒಟ್ಟು 19491 ಫಲಾನುಭವಿಗಳಿಗೆ 1577923774 ರೂ. ವ್ಯಯ ಮಾಡಲಾಗಿದೆ. ತಲ್ಲೂರು ಘಟಕದಲ್ಲಿ 20225 ಫಲಾನುಭವಿಗಳಿಗೆ 213035130 ರೂ. ಮತ್ತು ಕುಂದಾಪುರ ಘಟಕದಲ್ಲಿ 25499 ಫಲಾನುಭವಿಗಳಿಗೆ ಗೃಹಜ್ಯೋತಿ ಯೋಜನೆಯಡಿ 302067542 ರೂ.ಗಳನ್ನು ವ್ಯಯಮಾಡಲಾಗಿದೆ.

ಗೃಹಲಕ್ಷ್ಮಿ ಯೋಜನೆಯಡಿ 50588 ಫಲಾನುಭವಿಗಳ ಖಾತೆಗೆ ನೇರವಾಗಿ 1468620000 ರೂಪಾಯಿ ಜಮೆಯಾಗಿರುತ್ತದೆ.

ಅನ್ನಭಾಗ್ಯ ಯೋಜನೆಯಡಿ ಆಗಸ್ಟ್ ವರೆ 43939 ಪಡಿತರ ಚೀಟಿಗಳಿಗೆ 34068000 ರೂಪಾಯಿ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗಿರುತ್ತದೆ. ಕಳೆದ ವರ್ಷ ಡಿಸೆಂಬ‌ರ್ ನಿಂದ ಈವರ್ಷದ ನವೆಂಬರ್ ವರೆಗೆ ಯುವನಿಧಿ ಯೋಜನೆಯಡಿ 685 ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆಯಾಗಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ 7551 ಆದಾಯ ತೆರಿಗೆ ಪಾವತಿದಾರರು & ವಾರ್ಷಿಕ ಅವಧಿ ಹೆಚ್ಚುವರಿ ಆದಾಯದಾರರು ಪರಿಶೀಲನೆಗೆ ಬಂದಿದ್ದು, ಇದರಲ್ಲಿ ಎಲ್ಲಾ ಕಾರ್ಡುಗಳನ್ನು ಪರಿಶೀಲಸಲಾಗಿದೆ. ಇದರಲ್ಲಿ 71311 ಪಡಿತರದಾರರು ಅರ್ಹರೆಂದು ಕಂಡು ಬಂದಿದ್ದು ಮತ್ತು 415 ಪಡಿತರದಾರರು ಅನರ್ಹರೆಂದು ಕಂಡು ಬಂದಿರುತ್ತದೆ ಎಂದು ಉಪಸ್ಥಿತರಿದ್ದ ಇಲಾಖೆಯ ತಾಲೂಕು ಮಟ್ಟದ ಪ್ರತಿನಿಧಿ ವಿವರಿಸಿದರು.

ಕೊಲ್ಲೂರು- ಮೈಸೂರು ಬಸ್‌ ಸಂಚಾರ ಪುನರಾರಂಭಿಸಲು ಸಭೆ ಸೂಚನೆ  :

ಹುಣಸೂರು ಡಿಪೋ ಇಂದ ಹೊರಡುತ್ತಿದ್ದ ಕೊಲ್ಲೂರು- ಮೈಸೂರು ಸಂಚರಿಸುತ್ತಿದ್ದ ಸರ್ಕಾರಿ ಬಸ್ಸು ಕೋವಿಡ್‌ ನಂತರದಲ್ಲಿ ಸ್ಥಗಿತಗೊಂಡಿದ್ದು, ಆ ಬಸ್ಸನ್ನು ಪುನರಾರಂಭಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ ಸೂಚಿಸಿದರು.

ಮೈಸೂರಿನಿಂದ ಕೊಲ್ಲೂರಿಗೆ, ಕೊಲ್ಲೂರಿನಿಂದ ಮೈಸೂರಿಗೆ ಬಸ್‌ ಪ್ರಯಾಣ ನಿತ್ಯ ಇದ್ದಿತ್ತು. ಸಿಬ್ಬಂದಿಗಳ ಕೊರತೆಯ ನೆಪ ಹೇಳಿಕ ಆ ಬಸ್ಸನ್ನು ಕೋವಿಡ್‌ ಬಳಿಕ ಸ್ಥಗಿತಗೊಳಿಸಲಾಗಿದೆ. ಸದ್ಯ, ಆ ಬಸ್ಸು ಮಂಗಳೂರಿನಿಂದ ಮೈಸೂರಿಗೆ ಸಂಚರಿಸುತ್ತಿದ್ದು, ಆ ಬಸ್ಸಿನ ಸಂಚಾರವನ್ನು ಕೊಲ್ಲೂರಿನವರೆಗೆ ವಿಸ್ತಿರಿಸುವಂತಾದಲ್ಲಿ ಪುಣ್ಯಕ್ಷೇತ್ರ ಕೊಲ್ಲೂರಿನ ಪ್ರವಾಸಕ್ಕೆ ಯಾತ್ರಾರ್ಥಿಗಳಿಗೆ ಅನುಕೂಲವಾದಂತಾಗುತ್ತದೆ. ಅತಿ ಶೀಘ್ರದಲ್ಲಿ ಬಸ್ಸು ಸಂಚಾರವನ್ನು ಪುನರಾರಂಭಿಸುವಂತೆ ನಿರ್ದೇಶಿಸಿದರು.

ಇನ್ನು, ಕೆಲವೆಡೆ ಸರ್ಕಾರಿ ಬಸ್ಸುಗಳ ನಿರ್ವಾಹಕರು ಮಹಿಳಾ ಪ್ರಯಾಣಿಕರಿಂದಲೂ ಟಿಕೇಟ್‌ ದರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿರುವುದನ್ನು ವಿಚಾರಿಸಿದ ಅಧ್ಯಕ್ಷರು, ಅಂತಹ ಪ್ರಕರಣಗಳಲ್ಲಿ ಬಸ್‌ ನಿರ್ವಾಹಕರಾಗಲಿ ಅಥವಾ ಚಾಲಕರು ತೊಡಗಿಕೊಂಡಿರುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.

ಗೃಹ ಲಕ್ಷ್ಮೀ ಯೋಜನೆ : ತಾಲೂಕು ಅಧಿಕಾರಿಯ ಅನುಪಸ್ಥಿತಿಗೆ ಅಧ್ಯಕ್ಷರು, ಇಓ ತರಾಟೆ

ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಯ ಅನುಪಸ್ಥಿತಿಗೆ ಸಮಿತಿಯ ಅಧ್ಯಕ್ಷರು ಹಾಗೂ ತಾಲೂಕು ಪಂಚಾಯತ್‌ ನ ಇ.ಒ ಉಪಸ್ಥಿತರಿದ್ದ ಇಲಾಖಾ ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡರು. ನಿಗದಿತ ಸಭೆಗೆ ಪದೆ ಪದೆ ಗೈರಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಯೋಜನೆಗೆ ಸಂಬಂಧಿಸಿದಂತೆ ಉಪಸ್ಥಿತರಿದ್ದ ಇಲಾಖೆಯ ಪ್ರತಿನಿಧಿಗಳನ್ನು ಹಲವು ಪ್ರಶ್ನೆಗಳ ಮೂಲಕ ಇಕ್ಕಟ್ಟಿಗೆ ಸಿಲುಕಿಸಿದ ಪ್ರಸಂಗವೂ ನಡೆಯಿತು.

ಹೆಂಗವಳ್ಳಿ : ಹೊಸ ವೈಯರ್‌ ವಿಸ್ತರಣೆ !

ಕಳೆದ ಸಭೆಯಲ್ಲಿ ಗೋಳಿಯಂಗಡಿಯಿಂದ ಹೆಂಗವಳ್ಳಿಗೆ ಹೋಗುವ ರಸ್ತೆಯಲ್ಲಿ ಹೊಸದಾಗಿ ವೈಯರ್‌ ಅಳವಡಿಸುವ ಬಗ್ಗೆ ಕ್ರಮ ವಹಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಈ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು, ಗೋಳಿಯಂಗಡಿಯಿಂದ ಹೆಂಗವಳ್ಳಿಗೆ ತೆರಳುವ ರಸ್ತೆಯಲ್ಲಿ ಹೊಸದಾಗಿ ವೈಯರ್‌ ಎಳೆಯುವ ಕಾಮಗಾರಿ ಗ್ಯಾರಂಟಿ ಯೋಜನೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಆದಾಗ್ಯೂ ಬಜೇಟ್‌ ಅನುದಾನದ ಲಭ್ಯತೆಗೆ ಅನುಗುಣವಾಗಿ ಅಗತ್ಯ ಕಾಮಗಾರಿಯನ್ನು ನಿರ್ವಹಿಸಲಾಗುವುದು ಎಂದು ಹೇಳಿದರು.

ಯುವನಿಧಿ ವಿಶೇಷ ನೊಂದಣಿ ಅಭಿಯಾನ :

ಪದವಿ ಕಾಲೇಜು ಹಾಗೂ ಡಿಪ್ಲೋಮಾ ಮತ್ತು ಗ್ರಾಮ ಪಂಚಾಯತ್, ತಾಲ್ಲೂಕು ,ಪಂಚಾಯತ್ ಗಳಲ್ಲಿ E,O & P.D.O ಅಧಿಖಾರಿಗಳ ಮೂಲಕ “ಯುವನಿದಿ,” ಯೋಜನೆಯ ಮಾಹಿತಿಯನ್ನು ತಿಳಿಸಲಾಗಿದೆ. 06-01-2025 ರಿಂದ 20-01-2025 ರವರೆಗೆ ಎಲ್ಲಾ ಪದವಿ ಕಾಲೇಜುಗಳಲ್ಲಿ ವಿಶೇಷ ನೋಂದಣೆ ಅಭಿಯಾನವನ್ನು ಏರ್ಪಡಿಸಲಾಗಿದೆ. ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಲ್ಲಿಯೂ ವಿಶೇಷ ನೋಂದಣಿ ಅಭಿಯಾನವನ್ನು “ಯುವನಿಧಿ” ಯೋಜನೆಯಡಿ ಹೆಚ್ಚು ಅಭ್ಯರ್ಥಿಗಳನ್ನು ನೋಂದಣಿ ಮಾಡಲು ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ ತಾಲೂಕು ಮಟ್ಟದ ನೋಂದಣಿ ಅಭಿಯಾನ ಆರಂಭದ ಬಗ್ಗೆ ಪೋಸ್ಟರ್‌ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ರವಿಕುಮಾ‌ರ್ ಹುಕ್ಕೇರಿ, ಸಮಿತಿಯ ಸದಸ್ಯರುಗಳಾದ ಗಣೇಶ್‌, ಕೆ. ಪ್ರದೀಪ್‌ ಕುಮಾರ್‌ ಶೆಟ್ಟಿ, ಅರುಣ್‌, ಹರ್ಷ ಶೆಟ್ಟಿ, ಸವಿತಾ ಪೂಜಾರಿ, ಮಂಜು ಕೊಠಾರಿ, ಜಹೀರ್‌ ಅಹಮದ್‌ ಸೇರಿ ವಿವಿಧ ಇಲಾಖೆಯ ಮುಖ್ಯಸ್ಥರು ಹಾಜರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!