spot_img
Sunday, February 15, 2026
spot_img

ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಅಯೋಧ್ಯೆಯ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಯ ವಾರ್ಷಿಕೋತ್ಸವ| ಶ್ರೀರಾಮ ಪಟ್ಟಾಭಿಷೇಕೋತ್ಸವ

ಕುಂದಾಪುರ: ಶ್ರೀ ಧರ್ಮಸ್ಥಳ ಮೇಳದಲ್ಲಿ ಕಳೆದ ವರ್ಷ ಅಯೋಧ್ಯೆ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಮೂರು ದಿವಸವು ಶ್ರೀರಾಮ ಪಟ್ಟಾಭಿಷೇಕೋತ್ಸವವನ್ನು ಯಕ್ಷಗಾನ ರಂಗದಲ್ಲಿ ಉತ್ಸವವಾಗಿ ಆಚರಿಸಿ, ವಿಜೃಂಭಿಸಿದ್ದು, ಈ ವರ್ಷ ಪ್ರಥಮ ವಾರ್ಷಿಕೋತ್ಸವವನ್ನು ಜ. 22ರಂದು ಕುಂದಾಪುರ ಹಂಗ್ಲೂರು ವೆಂಕಟಲಕ್ಷ್ಮಿ ಸಭಾಗೃಹದ ಆವರಣದಲ್ಲಿ ಹೇಮಾವತಿ ಮತ್ತು ಚಂದ್ರಶೇಖರ ಐತಾಳರ ಸೇವೆ ಬಯಲಾಟವಾಗಿ ಕಾರುಣ್ಯಾಂಬುಧಿ ಶ್ರೀರಾಮ ಪ್ರಸಂಗದೊಂದಿಗೆ ಶ್ರೀರಾಮ ಪಟ್ಟಾಭಿಷೇಕವನ್ನು ವಿಜೃಂಭಣೆಯಿಂದ ಉತ್ಸವವಾಗಿ ಆಚರಿಸಿದರು.

ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ಮೇಳದ ಯಜಮಾನರಾದ ಡಿ. ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಮೇಳದ ಮೆನೇಜರ್‌ರಾದ ಗಿರೀಶ ಹೆಗ್ಡೆ ಮತ್ತು ಪುಷ್ಪರಾಜ ಶೆಟ್ಟಿ ಅವರ ಸಲಹೆಯಂತೆ, ಪ್ರಧಾನ ಭಾಗವತರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು ಇವರು ಪ್ರಸಂಗ ಸಂಯೋಜಿಸಿ, ವಿಶೇಷವಾಗಿ ಪಟ್ಟಾಭಿಷೇಕ ಪ್ರದರ್ಶನ ಸಂಯೋಜಿಸಿದರು.

ಶ್ರೀರಾಮನ ಪಾತ್ರ ನಿರ್ವಹಿಸಿದ ಹಿರಿಯ ಕಲಾವಿದ, ಸಂಘಟಕ ವಿದ್ವಾಂಸರಾದ ಉಜಿರೆ ಅಶೋಕ ಭಟ್ ಅವರು ಶ್ರೀರಾಮಚಂದ್ರನ ಆದರ್ಶ, ರಾಮರಾಜ್ಯ ಕಲ್ಪನೆ, ಸಮಾಜದ ಉದ್ದಾರ, ಮುಂತಾದ ವಿಷಯಗಳನ್ನು ಪ್ರಧಾನವಾಗಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು. ಮೇಳದ ಹಿತೈಷಿಗಳಾದ ದಾಮೋದರ್ ಶರ್ಮ ಬಾರ್ಕೂರು, ಕೃಷ್ಣಮೂರ್ತಿ ನಾವಡ ಕಟ್ಕೆರೆ ಮುಂತಾದವರು ವಿವಿಧ ಪಾತ್ರದಲ್ಲಿ ರಂಗದಲ್ಲಿ ಕಾಣಿಸಿಕೊಂಡರು.

ಮೇಳದ ಮೆನೇಜರ್ ಗಿರೀಶ್ ಹೆಗಡೆ ಪುಷ್ಪರಾಜ ಶೆಟ್ಟಿ ವಿಶೇಷವಾಗಿ ಭರತ, ಲಕ್ಷ್ಮಣನ ಪಾತ್ರ ನಿರ್ವಹಿಸಿದರು, ಅಲ್ಲದೆ ಮೇಳದ ಹಿರಿಯ, ಕಿರಿಯ ಎಲ್ಲಾ ಕಲಾವಿದರು , ಸಿಬ್ಬಂದಿಗಳು ಉತ್ಸಾಹದಲ್ಲಿ ಭಾಗಿಯಾದರು. ಯಕ್ಷಗಾನ ಬಯಲಾಟದಲ್ಲಿ ಇದೊಂದು ಉತ್ಸವವಾಗಿ ಪ್ರೇಕ್ಷಕರನ್ನು ಬೆರಗುಗೊಳಿಸಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!