spot_img
Sunday, February 15, 2026
spot_img

ಸಮುದ್ರದಲ್ಲಿ ಕೃತಕ ಬಂಡೆ ಯೋಜನೆಯಿಂದ ಮತ್ಸ್ಯ ಸಂಪತ್ತು ವೃದ್ಧಿ-ಸಂಸದ ಕೋಟ

ತೆಕ್ಕಟ್ಟೆಯಲ್ಲಿ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ನಾಲ್ಕನೇ ಶಾಖೆ ಉದ್ಘಾಟನೆ
ಜನಪ್ರತಿನಿಧಿ ವಾರ್ತೆ] ಕುಂದಾಪುರ, ಜ.23: ಪ್ರಸ್ತುತ ಮೀನುಗಾರಿಕೆ ಭವಿಷ್ಯದ ಚಿಂತನೆ ಅವಶ್ಯಕ. ಮುಂದಿನ 25 ವರ್ಷಗಳ ಭವಿಷ್ಯದ ಚರ್ಚೆ ಆಗಬೇಕು. ಮೀನು ಮರಿ ಸಂರಕ್ಷಣೆ ದೃಷ್ಟಿಯಲ್ಲಿ ಕೃತಕ ಬಂಡೆ ಯೋಜನೆ ರೂಪಿಸಲಾಗುತ್ತಿದೆ. ಗುಜರಾತ್ ಮಾದರಿಯಲ್ಲಿ ಈ ಯೋಜನೆ ಅನುಷ್ಟಾನವಾದರೆ ಕರಾವಳಿ ಭಾಗದಲ್ಲಿ ನಾಡದೋಣಿ ಮೀನುಗಾರರು ಹಾಗೂ ಇತರ ಮೀನುಗಾರರಿಗೆ ಅನುಕೂಲವಾಗುತ್ತದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ತೆಕ್ಕಟ್ಟೆ ರಾ.ಹೆ.66ರ ಸಮೀಪದ ನಿರೂಪಮಾ ಕಾಂಪ್ಲೆಕ್ಸ್‌ನಲ್ಲಿ ಮೀನುಗಾರರ ಸಹಕಾರಿ ಸಂಘ ನಿಯಮಿತ ಬೀಜಾಡಿ ಇದರ 4ನೇ ಶಾಖೆಯ ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ಪ್ರದೇಶದಲ್ಲಿ ಮೀನುಗಾರರ ಶ್ರೇಯೋಭಿವೃದ್ಧಿಯಿಂದ ಆರಂಭವಾದ ಈ ಸಂಘ ಸಹಕಾರ ಕ್ಷೇತ್ರದಲ್ಲಿ ಪ್ರಬಲವಾಗಿ ಬೆಳೆದಿದೆ. ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳನ್ನು ಆರ್ಹ ಮೀನುಗಾರರಿಗೆ ತಲುಪಿಸುವ ಮೂಲಕ ಸದಸ್ಯರ ವಿಶ್ವಾಸಗಳಿಸಿದೆ. ಮೀನುಗಾರಿಕೆ ಆಧಾರಿತ ಉದ್ಯೋಗ ವಲಯಗಳಿಗೂ ಸಹಕಾರಿಯಾಗಿ ನಿಂತಿದೆ. ಮೀನುಗಾರಿಕ ಕ್ಷೇತ್ರ ವಿಸ್ತಾರವಾಗುವುದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ನಿರುದ್ಯೋಗ ಸಮಸ್ಯೆ ಸ್ವಲ್ಪ ನೀಗುತ್ತದೆ, ಆ ನಿಟ್ಟಿನಲ್ಲಿ ಮೀನುಗಾರಿಕಾ ಸಹಕಾರ ಸಂಘಗಳ ಪಾತ್ರ ಮಹತ್ತರವಾದುದು ಎಂದರು.
ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಬಿ.ಮಂಜುನಾಥ ಕುಂದರ್ ಚಾತ್ರಬೆಟ್ಟು ಅಧ್ಯಕ್ಷತೆ ವಹಿಸಿ, ಬೀಜಾಡಿ ಮೀನುಗಾರರ ಸಹಕಾರಿ ಸಂಘ ಏಳು ದಶಕಗಳ ಇತಿಹಾಸ ಹೊಂದಿದ್ದು 16821 ಸದಸ್ಯರನ್ನು ಹೊಂದಿದೆ. ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಈ ಭಾಗದ ಸದಸ್ಯರ ಅನುಕೂಲಕ್ಕಾಗಿ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಶಾಖೆ ಆರಂಭಿಸಲಾಗಿದೆ ಎಂದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು, ಮಾಜಿ ಮೀನುಗಾರಿಕಾ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಬೀಜಾಡಿಯ ಹುತಾತ್ಮ ಯೋಧ ಅನೂಪ್ ಪೂಜಾರಿಯವರ ಸ್ಮರಣಾರ್ಥ ಹುತಾತ್ಮ ಯೋಧನ ತಾಯಿ ಮತ್ತು ಪತ್ನಿಗೆ ಸಾಧನಾ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಈ ಸಂದರ್ಭ ಮಾತನಾಡಿದ ಅವರು, ಮೀನುಗಾರಿಕೆ ಇವತ್ತು ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಸಮುದಾಯದವರು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವ್ಯವಹಾರ ಬೆಳೆಯಬೇಕು, ಅದಕ್ಕೆ ಪೂರಕವಾದ ಸವಲತ್ತುಗಳನ್ನು ಕಲ್ಪಿಸಿಕೊಡುವ ಕೆಲಸ ಆಗಬೇಕು. ಮೀನುಗಾರಿಕೆ ಉಳಿಸುವ ನಿಟ್ಟಿನಲ್ಲಿ ಸರಕಾರ ಸರಿಯಾದ ತೀರ್ಮಾನ ತಗೆದುಕೊಳ್ಳಬೇಕು. ಭವಿಷ್ಯದಲ್ಲಿ ಮೀನಿನ ಕೊರತೆಯಾಗದಂತೆ ದೂರದೃಷ್ಟಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಹುತಾತ್ಮ ಯೋಧ ಅನೂಫ್ ದೇಶಕ್ಕಾಗಿ ಮಡಿದಿದ್ದಾರೆ. ಅವರು ಜೀವಂತ ಇರುವಾಗಲೇ ಗುರುತಿಸುವ ಕೆಲಸ ಆಗಬೇಕಿತ್ತು. ಇನ್ನಾದರೂ ಯೋಧರನ್ನು ಗುರುತಿಸುವ ಕೆಲಸವಾಗಲಿ ಎಂದು ಹೇಳಿದ ಅವರು ಹುತಾತ್ಮ ಯೋಧ ಅನೂಫ್ ಅವರಿಗೆ ಸರಕಾರದ ಪರಿಹಾರ, ಹಾಗೂ ಮಡದಿಗೆ ಸೂಕ್ತ ಕೆಲಸ ನೀಡುವ ಬಗ್ಗೆ ಸರಕಾರ ಮಟ್ಟದಲ್ಲಿ ಚರ್ಚೆ ಮಾಡಲಾಗಿದ್ದು ಈಗಾಗಲೆ ಇಲಾಖೆಯಿಂದ ಸಂದೇಶ ಬಂದಿದೆ ಎಂದರು.
ಶಾಸಕ ಎ.ಕಿರಣ್ ಕುಮಾರ್ ಕೊಡ್ಲಿ ಅವರು ಗಣಕಯಂತ್ರ ಉದ್ಘಾಟಿಸಿ, ದೈನಂದಿನ ವ್ಯವಹಾರಕ್ಕೆ ಅನುಕೂಲ ಮಾಡುವ ಕೆಲಸವನ್ನು ಎಲ್ಲಾ ಸಹಕಾರ ಸಂಸ್ಥೆಗಳು ಮಾಡುತ್ತಿವೆ. ಆದರೆ ಕೇಂದ್ರ, ರಾಜ್ಯ ಸರ್ಕಾರಗಳು ನೀಡುವ ಸವಲತ್ತುಗಳನ್ನು ಮೀನುಗಾರರಿಗೆ ನೀಡುವ ಕೆಲಸ ಮಾಡುತ್ತಿವೆ ಎಂದರು.
ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಅವರು ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿ ಮೀನುಗಾರಿಕೆಯ ಭವಿಷ್ಯದ ದೃಷ್ಟಿಯಿಂದ ಶಾಸನವೊಂದನ್ನು ತರುವ ಅಗತ್ಯತೆ ಇದೆ. ಮೀನು ಮರಿಗಳನ್ನು ಹಿಡಿಯುವುದರಿಂದ ಮುಂದೊಂದು ದಿನ ಮತ್ಸ್ಯಕ್ಷಾಮ ತಲೆದೊರುವುದು ಖಂಡಿತ. ಅದಕ್ಕಾಗಿ ಈಗಾಗಲೇ ಮೀನುಗಾರರು ಎಚ್ಚೆತ್ತುಕೊಂಡು ಮೀನುಗಾರಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬೇರೆ ಬೇರೆ ದೇಶಗಳನ್ನು ಅನುಸರಿಸುವ ವಿಧಾನಗಳನ್ನು ಅನುಸರಿಸಬೇಕು. ಅರಭಿ ಸಮುದ್ರ, ಬಂಗಾಳಕೊಲ್ಲಿಯಲ್ಲಿ ಮೀನುಗಾರಿಕೆ ಮಾಡುವ ಮೀನುಗಾರರಿಗೆ ಹಾಗೂ ಈ ಭಾಗದ ರಾಜ್ಯಗಳ ಮೀನುಗಾರರಿಗೆ ಏಕರೂಪದ ನೀತಿ ಅನುಷ್ಟಾನಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಠೇವಣಿ ಪತ್ರ ವಿತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಎಂ.ದಿನೇಶ್ ಹೆಗ್ಡೆ ಮೊಳಹಳ್ಳಿ, ಉದ್ಯಮಿ ಸಂತೋಷ್ ನಾಯಕ್, ಕಟ್ಟಡ ಮಾಲಿಕ ಟಿ.ರಾಮದಾಸ ಪ್ರಭು. ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಜಯಂತ ಅಮೀನ್ ಕೋಡಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಮೀನುಗಾರರು, ಮಹಿಳಾ ಮೀನುಗಾರರನ್ನು ಸನ್ಮಾನಿಸಲಾಯಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಬಿ.ಮಂಜುನಾಥ ಕುಂದರ್ ಚಾತ್ರಬೆಟ್ಟು, ಉಪಾಧ್ಯಕ್ಷ ರಾಜು ತೋಟದಬೆಟ್ಟು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರಮೇಶ್ ಕಾಂಚನ್, ಕಟ್ಟಡ ಮಾಲಿಕರಾದ ಟಿ.ರಾಮದಾಸ ಪ್ರಭು ಅವರನ್ನು ಸನ್ಮಾನಿಸಲಾಯಿತು.
ಸಂಘದ ನಿರ್ದೇಶಕರಾದ ಅಶೋಕ್ ಪೂಜಾರಿ ಬೀಜಾಡಿ, ಬಿ.ಶಿವರಾಮ ಅಮೀನ್ ಬೀಜಾಡಿ, ಬಿ.ಶೇಖರ ಮೊಗವೀರ ಅಂಕದಕಟ್ಟೆ, ದಿನೇಶ ಮೆಂಡನ್ ಗೋಪಾಡಿ, ಅಣ್ಣಯ್ಯ ಪುತ್ರನ್ ಕುಂಭಾಶಿ, ಜಾನಕಿ ಹಳೆ ಅಳಿವೆ, ಅನುಷಾ ಕೊರವಡಿ, ಶ್ರೀನಿವಾಸ ಮರಕಾಲ ಗೋಪಾಡಿ, ಜ್ಯೋತಿ ಡಿಮೆಲ್ಲ್ಲೊ ಕುಂದಾಪುರ, ನಾಗೇಶ ಬೀಜಾಡಿ, ಸಹ ನಿರ್ದೇಶಕರಾದ ವೆಂಕಟೇಶ್ ಕುಮಾರ್ ಬೀಜಾಡಿ, ಸುನೀಲ್ ಜಿ ನಾಯ್ಕ್ ಬೀಜಾಡಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರಮೇಶ್ ಕಾಂಚನ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಈ ಸಂಘ 1960ರಲ್ಲಿ ಸ್ಥಾಪನೆಯಾಯಿತು. ಅಂದಿನಿಂದ ಮೀನುಗಾರರ ಹಿತದೃಷ್ಟಿಯಿಂದ ಶ್ರಮಿಸುತ್ತಿದೆ. ಸಂಸ್ಥೆಯ ಸಾಧನೆಗೆ ಅತ್ಯುತ್ತಮ ಮೀನುಗಾರರ ಸಹಕಾರ ಸಂಘ ಪ್ರಶಸ್ತಿ, ಉತ್ತಮ ಮೀನುಗಾರರ ಸಹಕಾರಿ ಸಂಘ ಪ್ರಶಸ್ತಿ, ನ್ಯಾಷನಲ್ ಅವಾರ್ಡ್, ಸಾಧನಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದೆ ಎಂದರು.
ದಿನೇಶ ಸುವರ್ಣ ಪ್ರಾರ್ಥನೆ ಮಾಡಿದರು. ಸಂಘದ ಉಪಾಧ್ಯಕ್ಷ ರಾಜು ತೋಟದಬೆಟ್ಟು ಕೊಮೆ ಸ್ವಾಗತಿಸಿದರು. ನಿರ್ದೇಶಕ ಅಣ್ಣಯ್ಯ ಪುತ್ರನ್ ಕುಂಭಾಶಿ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!