spot_img
Thursday, April 2, 2026
spot_img

ಜ.24, 25 : ಬಂಟ್ವಾಡಿ: ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಮೃತ ಮಹೋತ್ಸವ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಕುಂದಾಪುರ ತಾಲೂಕು ಸೇನಾಪುರ ಗ್ರಾಮದ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಂಟ್ವಾಡಿ ಇಲ್ಲಿನ ಅಮೃತ ಮಹೋತ್ಸವ ಜ.24 ಮತ್ತು 25ರಂದು ನಡೆಯಲಿದೆ.
ಜ.24ರಂದು ಅಮೃತ ಸಿಂಚನ ನಡೆಯಲಿದ್ದು, ಬೆಳಿಗ್ಗೆ 8.30ಕ್ಕೆ ಗುಡ್ಡಮ್ಮಾಡಿ ಸುಬ್ರಹ್ಮಣ್ಯ ದೇವಸ್ಥಾನದಿಂದ ಬಂಟ್ವಾಡಿ ಶಾಲೆಯವರೆಗೆ ಮೆರವಣಿಗೆ ನಡೆಯಲಿದೆ. 9.30ಕ್ಕೆ ಅಮೃತ ಮಹೋತ್ಸವದ ಸ್ವಾಗತ ಗೋಪುರದ ಉದ್ಘಾಟನೆ ಮತ್ತು ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ.

10.30ಕ್ಕೆ ಅಮೃತ ಮಹೋತ್ಸವ ಉದ್ಘಾಟನೆ ನಡೆಯಲಿದ್ದು, ನಾರಾಯಣ ಸುಬ್ಬಣ್ಣ ಶೆಟ್ಟಿ ಆತ್ರಾಡಿ ಉದ್ಘಾಟಿಸಲಿದ್ದಾರೆ. ಶಾಲಾ ಸಂಚಾಲಕರು ಹಾಗೂ ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷರಾದ ಬಿ.ಅರುಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿನ ಉಪನ್ಯಾಸಕರಾದ ಗಣೇಶ ಹೆಬ್ಬಾರ್ ಕೆಳಾಕಳಿ ಶುಭಾಶಂಸನೆಗೈಯಲಿದ್ದಾರೆ.

ಕುಂದಾಪುರ ಶಿವಪ್ರಸಾದ್ ಗ್ರ್ಯಾಂಡ್‍ನ ಅಭಿನಂದನ್ ಎ.ಶೆಟ್ಟಿ, ಮುಂಬೈ ಮನೀಷಾ ಕ್ಯಾಟರರ್ಸ್ ನಾರಾಯಣ ಎಮ್ ಚಂದನ್, ಸೈಂಟ್ ಮೇರಿಸ್ ಹಿ.ಪ್ರಾ.ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಡೋರಾ ಸುವಾರಿಸ್ ಭಾಗವಹಿಸಲಿದ್ದಾರೆ.

ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಜಗದೀಶ್ ಶೆಟ್ಟಿ ಗುಡ್ಡಮ್ಮಾಡಿ ಬಹುಮಾನ ವಿತರಿಸಲಿದ್ದಾರೆ. ಮಧ್ಯಾಹ್ನ 12.30ರಿಂದ ಸ್ಥಳೀಯ ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಸಂಜೆ 6ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ ರಾಘವೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಶಬರಿ ಸ್ಟೀಲ್ಸ್ ಪ್ರೈ. ಬೆಂಗಳೂರು ಇದರ ಅಜಿತ್ ಪ್ರಸಾದ್ ಶೆಟ್ಟಿ, ಉದ್ಯಮಿ ಚಿತ್ತರಂಜನ್ ಹೆಗ್ಡೆ ಕಟ್ಟಿನಮಕ್ಕಿ-ಹರ್ಕೂರು ಭಾಗವಹಿಸಲಿದ್ದಾರೆ. ಮೊಳಹಳ್ಳಿ ಸ,ಹಿ.ಪ್ರಾ.ಶಾಲೆಯ ಶಿಕ್ಷಕ ಆದರ್ಶ ದೇವಾಡಿಗ ಸ್ವಸ್ತಿ ವಾಚನ ಮಾಡುವರು. ಶಾಲೆಯಲ್ಲಿ ವಿದ್ಯೆ ನೀಡಿದ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ. ‘ನಮ್ಮ ಶಾಲೆ ನಮ್ಮ ಹೆಮ್ಮೆ’ ಅಭೀಯಾನಕ್ಕೆ ಕೈ ಜೋಡಿಸಿದ ವಿದ್ಯಾಭಿಮಾನಿಗಳಿಗೆ ಗೌರವ ಸಮರ್ಪಣೆ ನಡೆಯಲಿದೆ.

ರಾತ್ರಿ 8 ಗಂಟೆಗೆ ಕೆ.ಪಿಎಸ್ ಸರಕಾರಿ ಪ್ರೌಢಶಾಲೆ ಹಕ್ಲಾಡಿ ವಿದ್ಯಾರ್ಥಿಗಳಿಂದ ಜನಪದ ನೃತ್ಯ ವೈಭವ ನಡೆಯಲಿದೆ. ರಾತ್ರಿ 9ರಿಂದ ಶಾಲಾ ವಿದ್ಯಾರ್ಥಿಗಳಿಂದ ಯಕ್ಷಸಿಂಚನ -ವೀರ ಅಭಿಮನ್ಯು ಪ್ರದರ್ಶನಗೊಳ್ಳಲಿದೆ.

ಜ.25ರಂದು ಬೆಳಿಗ್ಗೆ 10 ಗಂಟೆಗೆ ಹಳೆ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿ ಪೋಷಕರಿಗೆ, ಸ್ಥಳೀಯರಿಗೆ ವಿವಿಧ ಮನೋರಂಜನಾ ಸ್ಪರ್ಧೆಗಳು ನಡೆಯಲಿದೆ. ಸಂಜೆ 6ಗಂಟೆಗೆ ಸಭಾ ಕಾರ್ಯಕ್ರಮ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀಕಾಂತ್ ಶ್ಯಾನುಭಾಗ್ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ನಾಗೇಶ ಶ್ಯಾನುಭಾಗ್ ಅವರಿಂದ ಶಾಲಾ ಇತಿಹಾಸದ ಮೆಲುಕು, 1950-51ರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸನ್ಮಾನ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಅಬಿನಂದನ್ ಎ ಶೆಟ್ಟಿ ಅವರಿಗೆ ಅಭಿನಂದನಾ ಕಾರ್ಯಕ್ರಮ, ವಿಶೇಷ ಸಾಧಕ ಹಳೆ ವಿದ್ಯಾರ್ಥಿಗಳಿಗೆ ಸನ್ಮಾನ, 75ರ ಸಂಭ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ 75 ಹಳೆ ವಿದ್ಯಾರ್ಥಿಗಳಿಗೆ ಗೌರವದ ಗುರುತಿಸುವಿಕೆ ನಡೆಯಲಿದೆ. ರಾತ್ರಿ9 ಗಂಟೆಯಿಂದ ಮನು ಹಂದಾಡಿ ತಂಡದವರಿಂದ ಹಾಸ್ಯಾಮೃತ ನಗೆ ಹಬ್ಬ ನಡೆಯಲಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!