spot_img
Wednesday, January 22, 2025
spot_img

ಮಹಾಕುಂಭ ಮೇಳ : ಇಟೆಲಿ ನಿಯೋಗ ಪವಿತ್ರ ಸ್ನಾನ | ಭಾರತೀಯ ಸಂಸ್ಕೃತಿ , ಸಂಪ್ರದಾಯಕ್ಕೆ ತಲೆ ಬಾಗಿದ ಇಟೇಲಿಗರು !

ಜನಪ್ರತಿನಿಧಿ (ಲಖನೌ / ಪ್ರಯಾಗ್‌ರಾಜ್ ) : ಉತ್ತರ ಪ್ರದೇಶದ ಪ್ರಯಾಗರಾಜ್ ನಡೆಯುತ್ತಿರುವ ಮಹಾಕುಂಭ ಮೇಳದ ಆರನೇ ದಿನವಾದ ಭಾನುವಾರ ಇಟಲಿಯ ನಿಯೋಗವೊಂದು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದೆ. ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದು, ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದೆ.

ಇಟಲಿಯ ಧ್ಯಾನ ಮತ್ತು ಯೋಗ ಕೇಂದ್ರದ ಸಂಸ್ಥಾಪಕ ಮತ್ತು ತರಬೇತುದಾರರಾದ ಮಹಿ ಗುರು ನೇತೃತ್ವದಲ್ಲಿನ ನಿಯೋಗದಲ್ಲಿ ಅನೇಕ ಮಹಿಳೆಯರು ಭಾಗವಹಿಸಿದ್ದರು.

ಈ ಗುಂಪಿನ ಸದಸ್ಯರು ಮಹಾ ಕುಂಭ ಮೇಳದಲ್ಲಿನ ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಹಂಚಿಕೊಂಡಿದ್ದು, ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ನೇರ ಪ್ರದರ್ಶನವಾಗಿದೆ ಎಂದು ಕೊಂಡಾಡಿರುವುದಾಗಿ ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ಆದಿತ್ಯನಾಥ್ ಅವರ ಅಧಿಕೃತ ನಿವಾಸದಲ್ಲಿ ನಡೆದ ಸಭೆಯಲ್ಲಿ ನಿಯೋಗದ ಸದಸ್ಯರು ರಾಮಾಯಣ, ಶಿವ ತಾಂಡವದಿಂದ ಚೌಪಾಯಿ (ಶ್ಲೋಕ) ಪಠಿಸಿದ್ದು, ಭಜನೆಗಳನ್ನು ಹಾಡಿದರು.

ನಾಗಾ ಸಾಧುಗಳ ಆಚರಣೆಗಳು, ‘ಭಜನೆ-ಕೀರ್ತನೆ’ ಮತ್ತಿತರ ಧಾರ್ಮಿಕ ಆಚರಣೆಗಳು, ಭಾರತೀಯ ಸಂಪ್ರದಾಯಗಳು ತಮ್ಮನ್ನು ಹೇಗೆ ಪ್ರಭಾವಿಸಿತು ಎಂಬುದನ್ನು ಅವರು ಮುಖ್ಯಮಂತ್ರಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮಹಾಕುಂಭ ಮೇಳದಲ್ಲಿನ ಅನುಭವಗಳು ತಮ್ಮನ್ನು ಆಳವಾಗಿ ಪ್ರಭಾವಿಸಿವೆ ಎಂದು ಮಹಿಳಾ ಸದಸ್ಯರು ಹೇಳಿದ್ದಾರೆ.

ಭೇಟಿಯ ಸಮಯದಲ್ಲಿ ಅವರ ಅನುಭವ ಮತ್ತು ಆತಿಥ್ಯವನ್ನು ಶ್ಲಾಘಿಸಿದ್ದು, ಮಹಾ ಕುಂಭ ಮೇಳ ಆಧ್ಯಾತ್ಮಿಕತೆ ಹಾಗೂ ವೈವಿಧ್ಯತೆಯಲ್ಲಿ ಏಕತೆಯ ಮಹತ್ವವನ್ನು ಹೇಗೆ ಬಲಪಡಿಸಿತು ಎಂಬುದನ್ನು ಇಟಲಿ ನಿಯೋಗ ತಿಳಿಸಿದೆ.

ಆದಿತ್ಯನಾಥ್ ನಿಯೋಗಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಭಾರತ ಮತ್ತು ಇಟಲಿ ನಡುವಿನ ಸಂಬಂಧಗಳನ್ನು ಬಲಪಡಿಸಲು ಮತ್ತಷ್ಟು ವಿನಿಮಯವನ್ನು ಪ್ರೋತ್ಸಾಹಿಸಿದರು ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!