spot_img
Tuesday, February 18, 2025
spot_img

ಬ್ಯಾಂಕ್‌ ಆಫ್‌ ಬರೋಡಾ ವಿವಿಧ ಶಾಖೆಗಳಲ್ಲಿ ಉದ್ಯೋಗವಕಾಶ : ಬರೋಬ್ಬರಿ 1267 ಹುದ್ದೆಗಳಿಗೆ ಅರ್ಜಿ ಆಹ್ವಾನ

ಜನಪ್ರತಿನಿಧಿ ( ಮಾಹಿತಿ) : ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ದೇಶಾದ್ಯಂತ ವಿವಿಧ ಶಾಖೆಳಿಗೆ ಬೇಕಾಗಿ ವಿವಿಧ ವಿಭಾಗಗಳಲ್ಲಿ ನಿಯಮಿತ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉದ್ಯೋಗವಕಾಶವನ್ನು ಅರಸುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶ.

ಅರ್ಹ ಅಭ್ಯರ್ಥಿಗಳು 17ನೇ ಜನವರಿಯೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಅಧಿಸೂಚನೆಯ ಅಡಿಯಲ್ಲಿ ಒಟ್ಟು 1267 ತಜ್ಞ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಗ್ರಾಮೀಣ ಮತ್ತು ಕೃಷಿ ಬ್ಯಾಂಕಿಂಗ್, ರಿಟೇಲ್ ಹೊಣೆಗಾರಿಕೆಗಳು, ಎಂಎಸ್‌ಎಂಇ ಬ್ಯಾಂಕಿಂಗ್, ಮಾಹಿತಿ ಭದ್ರತೆ, ಸೌಲಭ್ಯ ನಿರ್ವಹಣೆ, ಕಾರ್ಪೊರೇಟ್ ಮತ್ತು ಸಾಂಸ್ಥಿಕ ಕ್ರೆಡಿಟ್, ಹಣಕಾಸು, ಮಾಹಿತಿ ತಂತ್ರಜ್ಞಾನ, ಎಂಟರ್‌ಪ್ರೈಸ್ ಡೇಟಾ ಮ್ಯಾನೇಜ್‌ಮೆಂಟ್ ಆಫೀಸ್‌ನಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಹುದ್ದೆಗಳ ವಿವರ ಇಂತಿದೆ:

ಕೃಷಿ ಮಾರುಕಟ್ಟೆ ಅಧಿಕಾರಿ, ಕೃಷಿ ಮಾರುಕಟ್ಟೆ ವ್ಯವಸ್ಥಾಪಕ, ವ್ಯವಸ್ಥಾಪಕ – ಮಾರಾಟ, ವ್ಯವಸ್ಥಾಪಕ – ಕ್ರೆಡಿಟ್ ವಿಶ್ಲೇಷಕ, ಹಿರಿಯ ವ್ಯವಸ್ಥಾಪಕ – ಕ್ರೆಡಿಟ್ ವಿಶ್ಲೇಷಕ, ಹಿರಿಯ ವ್ಯವಸ್ಥಾಪಕ – ಎಂಎಸ್‌ಎಂಇ ಸಂಬಂಧ, ಮುಖ್ಯಸ್ಥ –  ಎಸ್‌ಎಂಇ ಸೆಲ್, ಅಧಿಕಾರಿ – ಭದ್ರತಾ ವಿಶ್ಲೇಷಕ, ವ್ಯವಸ್ಥಾಪಕ – ಭದ್ರತಾ ವಿಶ್ಲೇಷಕ, ಹಿರಿಯ ವ್ಯವಸ್ಥಾಪಕ, ಭದ್ರತೆ – ಟೆಕ್ನಿಕಲ್ ಆಫೀಸರ್ ಸಿವಿಲ್ ಇಂಜಿನಿಯರ್, ಟೆಕ್ನಿಕಲ್ ಮ್ಯಾನೇಜರ್- ಸಿವಿಲ್ ಇಂಜಿನಿಯರ್, ಟೆಕ್ನಿಕಲ್ ಸೀನಿಯರ್ ಮ್ಯಾನೇಜರ್- ಸಿವಿಲ್ ಇಂಜಿನಿಯರ್, ಟೆಕ್ನಿಕಲ್ ಆಫೀಸರ್ ಎಲೆಕ್ಟ್ರಿಕಲ್ ಇಂಜಿನಿಯರ್, ಟೆಕ್ನಿಕಲ್ ಮ್ಯಾನೇಜರ್ ಎಲೆಕ್ಟ್ರಿಕಲ್ ಇಂಜಿನಿಯರ್, ಟೆಕ್ನಿಕಲ್ ಸೀನಿಯರ್ ಮ್ಯಾನೇಜರ್ ಎಲೆಕ್ಟ್ರಿಕಲ್ ಇಂಜಿನಿಯರ್, ಟೆಕ್ನಿಕಲ್ ಮ್ಯಾನೇಜರ್ ಆರ್ಕಿಟೆಕ್ಟ್, ಸೀನಿಯರ್ ಮ್ಯಾನೇಜರ್ – ಸಿ & ಐಸಿ ರಿಲೇಶನ್‌ಶಿಪ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ – ಸಿ & ಐಸಿ ಕ್ರೆಡಿಟ್ ಅನಾಲಿಸ್ಟ್ ಇತ್ಯಾದಿ.

ಶೈಕ್ಷಣಿಕ ಅರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪದವಿ, ಪಿಜಿ ಪದವಿ, ಡಿಪ್ಲೊಮಾ, ಪಿಎಚ್‌ಡಿ, ಸಿಎ/ ಸಿಎಂಎ/ ಸಿಎಸ್/ ಸಿಎಫ್‌ಎ ಅಥವಾ ಹುದ್ದೆಗೆ ಅನುಗುಣವಾಗಿ ಸಂಬಂಧಿತ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ ಸಂಬಂಧಪಟ್ಟ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು ಜನವರಿ 17 ರ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಶುಲ್ಕ ಸಾಮಾನ್ಯ/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳಿಗೆ ರೂ.600 ಮತ್ತು ಎಸ್‌ಸಿ/ಎಸ್‌ಟಿ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ ರೂ.100. ಅಂತಿಮ ಆಯ್ಕೆಯು ಆನ್‌ಲೈನ್ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ, ಗುಂಪು ಚರ್ಚೆ, ಸಂದರ್ಶನ ಇತ್ಯಾದಿಗಳನ್ನು ಆಧರಿಸಿರುತ್ತದೆ.

ಲಿಖಿತ ಪರೀಕ್ಷೆಯ ವಿಧಾನ:

ರೀಸನಿಂಗ್ ವಿಭಾಗವು 25 ಪ್ರಶ್ನೆಗಳಿಗೆ 25 ಅಂಕಗಳನ್ನು ಹೊಂದಿರುತ್ತದೆ, ಇಂಗ್ಲಿಷ್ ಭಾಷಾ ವಿಭಾಗವು 25 ಪ್ರಶ್ನೆಗಳಿಗೆ 25 ಅಂಕಗಳನ್ನು ಹೊಂದಿರುತ್ತದೆ, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ವಿಭಾಗವು 25 ಪ್ರಶ್ನೆಗಳಿಗೆ 25 ಅಂಕಗಳನ್ನು ಹೊಂದಿರುತ್ತದೆ ಮತ್ತು ವೃತ್ತಿಪರ ಜ್ಞಾನ ವಿಭಾಗವು 75 ಪ್ರಶ್ನೆಗಳಿಗೆ 150 ಅಂಕಗಳನ್ನು ಹೊಂದಿರುತ್ತದೆ. ಒಟ್ಟು ಪ್ರಶ್ನೆಗಳ ಸಂಖ್ಯೆ 150. ಪರೀಕ್ಷೆಯು 150 ನಿಮಿಷಗಳಲ್ಲಿ 225 ಅಂಕಗಳಿಗೆ ನಡೆಯುತ್ತದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!