spot_img
Thursday, April 2, 2026
spot_img

ಕುವೆಂಪು ಅವರ ವ್ಯಕ್ತಿತ್ವದಂತೆಯೇ ಸಾಹಿತ್ಯ ಕೂಡ ಬಹುಮುಖಿ : ಡಾ. ರೇಖಾ ಬನ್ನಾಡಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು : ʼರಸಋಷಿ ಕುವೆಂಪು ಜನ್ಮ ದಿನಾಚರಣೆʼ ವಿಶೇಷ ಉಪನ್ಯಾಸ

ಜನಪ್ರತಿನಿಧಿ (ಉಡುಪಿ) : ಕುವೆಂಪು ಅವರ ವ್ಯಕ್ತಿತ್ವದಂತೆಯೇ ಸಾಹಿತ್ಯ ಕೂಡ ಬಹುಮುಖಿಯಾದದ್ದು. ಬದುಕಿನ ಎಲ್ಲಾ ಮಗ್ಗಲುಗಳನ್ನು ಸ್ಪರ್ಶಿಸಿ ಕನ್ನಡ ಸಾಹಿತ್ಯದ ಮೇರೆಯನ್ನು ವಿಸ್ತರಿಸಿದ ಕವಿ ಅವರು. ಸಮಕಾಲೀನ ಘಟನೆಗಳಿಗೆ ತೀಕ್ಷ್ಣವಾಗಿ ಸ್ಪಂದಿಸಿ, ಪ್ರತಿಕ್ರಿಯಿಸಿದ ಆಧುನಿಕ ಕನ್ನಡದ ಮೊದಲ ದನಿ ಕುವೆಂಪು ಅವರೆಂದು ನಿವೃತ್ತ ಉಪನ್ಯಾಸಕಿ ಡಾ. ರೇಖಾ ಬನ್ನಾಡಿ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿನ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಂಯಕ್ತ ಆಶ್ರಯದಲ್ಲಿ ಆಯೋಜಿಸಿದ ʼರಸಋಷಿ ಕುವೆಂಪು ಜನ್ಮ ದಿನಾಚರಣೆ : ವಿಶೇಷ ಉಪನ್ಯಾಸವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಧರ್ಮ ಮತ್ತು ದೇವರುಗಳ ಬಗ್ಗೆ ಕುವೆಂಪು ಒಳಗಿನ ವಿಮರ್ಶಕರಾಗಿಯೇ ಮುಖಾಮುಖಿಯಾಗುತ್ತಾ ಬಂದವರು. ʼಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು ಸೇರಿರೈ ಮನುಜಮತಕೆ ಓ, ಬನ್ನಿ, ಸೋದರರೆ, ವಿಶ್ವಪಥಕೆ!’ʼ ಎಂದು ಕರೆಯುವ ಅವರ ಮತಾತೀತವಾದ ಆಧ್ಯಾತ್ಮ. ತಮ್ಮ ಧ್ಯೆಯ ಧೋರಣೆಗಳಿಗೆ ತಾವೇ ಮೇಲ್ಪಂಕ್ತಿಯಾಗಿ ಅವರು ಬದುಕಿರುತ್ತಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೋ. ನಿತ್ಯಾನಂದ ವಿ. ಗಾಂವಕರ, ಈ ನಾಡನ್ನು ವೈಚಾರಿಕವಾಗಿ, ವೈಜ್ಞಾನಿಕವಾಗಿ ಪ್ರಭಾವಿಸಿದ ಕುವೆಂಪು ಅವರ ಕೃತಿಗಳನ್ನು ವಿದ್ಯಾರ್ಥಿಗಳು ಹೆಚ್ಚಾಗಿ ಅಭ್ಯಸಿಸಬೇಕು. ಆ ಮೂಲಕ ಅವರು ಬಯಸಿದ್ದ ಸಮಾನತೆಯ ನಾಡು ರೂಪುಗಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಕನ್ನಡ ವಿಭಾಗದ ಮುಖ್ಯಸ್ಥೆ ರತ್ನಮಾಲಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಾದ ವಿಠಲ ಹಾಗೂ ಕೀರ್ತನಾ ಕುವೆಂಪು ಕೃತಿಗಳ ಬಗ್ಗೆ ಅನಿಸಿಕೆ ಹಂಚಿಕೊಂಡರು. ಕಾಲೇಜಿನ ಗ್ರಂಥಪಾಲಕ ಶ್ರೀಕೃಷ್ಣ ಸಾಸ್ತಾನ ಕುವೆಂಪು ಗೀತೆಗಳ ಗಾಯನ ಮಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ ರಘು ನಾಯ್ಕ್‌, ಐಕ್ಯೂಎಸಿ ಸಂಚಾಲಕ ಡಾ. ಮೇವಿ ಮಿರಾಂಡ ಹಾಗೂ ಕನ್ನಡ ವಿಭಾಗದ ಉಪನ್ಯಾಸಕರು ಈ ಸಂದರ್ಭ ಉಪಸ್ಥಿತರಿದ್ದರು. ಉಪನ್ಯಾಸನಕಿ ಶಾಲಿನಿ ಯು. ಬಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!