spot_img
Wednesday, April 1, 2026
spot_img

ತಾಲೂಕು ಕೆಡಿಪಿ ಸಭೆ ನಡೆದು ಈಗಾಗಲೇ ಐದು ತಿಂಗಳು | ಜನ ಸಾಮಾನ್ಯರ ಗೋಳು ಹೇಳತೀರದು : ರಮೇಶ್‌ ಶೆಟ್ಟಿ ವಕ್ವಾಡಿ ಆಕ್ರೋಶ

ಜನಪ್ರತಿನಿಧಿ (ಕುಂದಾಪುರ/ಉಡುಪಿ) : ಜಿಲ್ಲೆಯಲ್ಲಿ ಜನಸಾಮಾನ್ಯರ ಬದುಕು ತೀರಾ ಹದಗೆಟ್ಟಿದೆ. ಕಟ್ಟಡ ಕಾರ್ಮಿಕರು ಮತ್ತು ರೈತರ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ.  ತಾಲ್ಲೂಕು ಕಛೇರಿಗಳಲ್ಲಿ ಜನ ಸಾಮಾನ್ಯರ ಗೋಳು ಹೇಳತೀರದು ಎಂದು ಕುಂದಾಪುರ ತಾಲೂಕು ಕೆಡಿಪಿ ಸದಸ್ಯರಾದ ರಮೇಶ್‌ ಶೆಟ್ಟಿ, ವಕ್ವಾಡಿ ಆಕ್ರೋಶ ಹೊರ ಹಾಕಿದ್ದಾರೆ.

ಜನಪ್ರತಿನಿಧಿ ಪತ್ರಿಕೆಯೊಂದಿಗೆ ಮಾತನಾಡಿದ ರಮೇಶ್‌ ಶೆಟ್ಟಿ, ವಕ್ವಾಡಿ ಅವರು, ಹೆದ್ದಾರಿ ಅವ್ಯವಸ್ಥೆ, ವರಾಹಿ ನೀರಿನ ಸಮಸ್ಯೆ, ಗ್ರಾಮ ಪಂಚಾಯತ್ ಗಳಲ್ಲಿ 9 & 11 ಇ ವಿನ್ಯಾಸ ನಕ್ಷೆ ಪಡೆಯಲು ಅಲೆದಾಡುವ ಪರಿಸ್ಥಿತಿ ಹೀಗೆ ಹಲವಾರು ಜನರ ದಿನನಿತ್ಯದ ಸಮಸ್ಯೆ ಗಳ ಪರಿಹಾರಕ್ಕೆ ಶಾಸಕರು ಪ್ರತಿ ಮೂರು ತಿಂಗಳಿಗೊಮ್ಮೆ ಕೆಡಿಪಿ ಸಭೆ ನಡೆಸಿ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ ಮತ್ತು ಜನರ ಸಮಸ್ಯೆ ಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮುಂದಿನ ಮೂರು ತಿಂಗಳೊಳಗೆ ಅದರ ಪರಿಹಾರ ಕಂಡುಕೊಂಡ ಬಗ್ಗೆ ಇಲಾಖೆ ಅಧಿಕಾರಿಗಳು ಕೆಡಿಪಿ ಸಬೆಯಲ್ಲಿ ಮಾಹಿತಿ ನೀಡಬೇಕು. ಕುಂದಾಪುರ ತಾಲೂಕು ಕೆಡಿಪಿ ಸಭೆ ಇಷ್ಟರಲ್ಲಿ ಒಂದೇ ಬಾರಿ ಆಗಿದ್ದು, ಸಭೆ ನಡೆದು ಈಗಾಗಲೇ ಐದು ತಿಂಗಳು ಕಳೆದುಹೋಗಿದೆ. ಇದರ ಬಗ್ಗೆ ಶಾಸಕರು ಗಮನ ಹರಿಸುತ್ತಿಲ್ಲ, ಕೆಡಿಪಿ ಕಾರ್ಯದರ್ಶಿಗಳಾದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೆ ರೀತಿ ಮುಂದುವರಿದರೆ ಎಲ್ಲಾ ಕುಂದಾಪುರ ತಾಲೂಕು ಕೆಡಿಪಿ ಸದಸ್ಯರು ಮುಂದಿನ ದಿನಗಳಲ್ಲಿ ತಾಲೂಕು ಕಛೇರಿಯ ಮುಂದೆ ಧರಣಿ ಮಾಡಲಿದ್ದೇವೆ ಹಾಗೂ ಇದನ್ನು ಮಾನ್ಯ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಯವರಲ್ಲಿ ದೂರು ನೀಡಲಿದ್ದೇವೆ. ಪ್ರತಿ ಮೂರು ತಿಂಗಳಿಗೊಮ್ಮೆ ಪರಿಣಾಮಕಾರಿಯಾಗಿ ಕೆಡಿಪಿ ಸಭೆ ನಡೆಸುವಂತೆ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!