spot_img
Saturday, February 14, 2026
spot_img

ಪ್ರಿಯಾಂಕ್‌ ಖರ್ಗೆ ಮನೆಗೆ ಮುತ್ತಿಗೆ : ರಾಜೀನಾಮೆ ನೀಡಿ ತನಿಖೆ ಎದರುರಿಸಿ : ಬಿಜೆಪಿ ನಾಯಕರ ಆಗ್ರಹ

ಜನಪ್ರತಿನಿದಿ (ಕಲಬುರಗಿ) : ಗುತ್ತಿಗೆದಾರ ಸಚಿನ್‌ ಪಾಂಚಾಳ್‌ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ, ಸಚಿವ ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಒತ್ತಾಯಿಸಿ ಇಲ್ಲಿನ ಜಗತ್‌ ವೃತ್ತದಲ್ಲಿ ಇಂದು(ಶನಿವಾರ) ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.

ವಿಧಾನಸಭಾ ಪ್ರತಿಪಕ್ಷದ ನಾಯಕ ಆರ್.‌ ಅಶೋಕ್‌, ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪರಿಷತ್‌ ಸದಸ್ಯರಾದ ಸಿ. ಟಿ ರವಿ, ಎನ್‌ ರವಿಕುಮಾರ್‌, ಸುನೀಲ್‌ ವಲ್ಯಾಪುರೆ, ಶಶೀಲ್‌ ಜಿ. ನಮೋಶಿ, ಬಿಜೆಇ ರಾಜ್ಯ ಉಪಾಧ್ಯಕ್ಷ ಎನ್.‌ ಮಹೇಶ್‌, ಶಾಸಕರಾದ ಬಸವರಾಜ್‌ ಮತ್ತಿಮಡು, ಶರಣು ಸಲಗಾರ, ಮಾಜಿ ಸಂಸದ ಡಾ. ಉಮೇಶ್‌ ಜಾದವ್‌, ನಾಯಕರಾದ ಪಿ. ರಾಜೀವ್‌, ರಾಜಕುಮಾರ್‌ ಪಾಟೀಲ್‌ ತೇಲ್ಕೂರ, ದತ್ತಾತ್ರೇಯ ಪಾಟೀಲ್‌ ರೇವೂರ ಒಳಗೊಂಡು ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಡೆತ್‌ನೋಟ್ ಓದಿ ಮಾತನಾಡಿದ ಎನ್ ಮಹೇಶ್, ‘ಡೆತ್ ನೋಟ್‌ನಲ್ಲಿ ಪ್ರಿಯಾಂಕ್ ಅವರ ಹೆಸರು ಬಂದಿದೆ. ನೈತಿಕತೆ ಇದ್ದರೆ ರಾಜೀನಾಮೆ ಕೊಡಲಿ’ ಎಂದು ಸವಾಲು ಹಾಕಿದರು.

‘ಪಾಂಚಾಳ್‌ ಕುಟುಂಬಸ್ಥರನ್ನು ನಿಮ್ಮ ಮನೆ ಮುಂದೆ ನಿಲ್ಲಿಸುತ್ತೇವೆ ಅವರಿಗೆ ಎಳನೀರು, ಚಹಾ ಕೊಡ್ತೀರಾ?

ಬಿಜೆಪಿಗೆ ಸಂಸ್ಕಾರವಿದೆ, ನೈತಿಕವಾಗಿ ಜನ ಕೇಳುತ್ತಿದ್ದಾರೆ ಎಂದು ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದರು. ನಿಮ್ಮದೇ ಪಕ್ಷದ ನಾಗೇಂದ್ರ ಅವರು ರಾಜೀನಾಮೆ ಕೊಟ್ಟು ಜೈಲಿಗೆ ಹೋಗಲಿಲ್ಲವಾ? ಅವರ ಹಿಂದೆ ರಾಜಕೀಯ ಒತ್ತಡ ಇಲ್ಲ ಎಂದು ರಾಜೀನಾಮೆ ಕೊಡಿಸಿದ್ದೀರಾ? ಖರ್ಗೆ ಮತ್ತು ಕುಟುಂಬಸ್ಥರ ನಿಜಾಮರಾಗಿ, ಇಲ್ಲಿನ ಪೊಲೀಸರು ರಜಾಕಾರರಾ’ ಎಂದು ಪ್ರಶ್ನಿಸಿದರು.

‘ಅಂಬೇಡ್ಕ‌ರ್ ಅವರು ಕೊಟ್ಟಿರುವಂತ ಸಂವಿಧಾನದಿಂದ ಬಿಜೆಪಿ ನಡೆಯುತ್ತಿದೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಶಾಶ್ವತವಲ್ಲ. ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ, ತಪ್ಪಿತಸ್ಥ ತಿಳಿದು ಮೇಲೆ ತೀರ್ಮನವಾಗಲಿ’ ಎಂದರು.

‘ಕುಟುಂಬಕ್ಕೆ ಆರ್ಥಿಕ ಶಕ್ತಿ ನೀಡಲು ₹1 ಕೋಟಿ ಪರಿಹಾರ ನೀಡಲಿ. ಅಂತ‌ರ್ ರಾಜ್ಯ ಪ್ರಕರಣವಾಗಿದ್ದು, ಈ ಪ್ರಕರಣವನ್ನು ಸಿಬಿಐಗೆ ವಹಿಸಲಿ ಮತ್ತು ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಲಿ’ ಎಂದು ಆಗ್ರಹಿಸಿದರು.

ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ‘ಸಚಿನ್‌ ಪಾಂಚಾಳ್ ಕುಟುಂಬಕ್ಕೆ ನ್ಯಾಯ ಕೊಡಿಸಿದ್ದರೆ ನಾವ್ಯಾಕೆ ಹೋರಾಟ ಮಾಡುತ್ತಿದ್ದೆವು’ ಎಂದು ಪ್ರಶ್ನಿಸಿದರು.

ಪೊಲೀಸ್‌ ಇನ್‌ಸ್ಪೆಕ್ಟರ್ ಅವರನ್ನು ಅಮಾನತು ಮಾಡಬೇಕಿತ್ತು. ಅದನ್ನ ಬಿಟ್ಟು ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಿದ್ದಾರೆ. ಪ್ರಿಯಾಂಕ್ ಅವರು ರಾಜೀನಾಮೆ ಕೊಟ್ಟು ತನಿಖೆ ನಡೆಸಿ, ಆಮೇಲೆ ಮುಖ್ಯಮಂತ್ರಿಯಾದರೂ ಆಗಿ’ ಎಂದರು.

ಬಸವರಾಜ್‌ ಮತ್ತಿಮಡು ಮಾತನಾಡಿ, ‘ನಾಲ್ವರಿಗೆ ಸುಪಾರಿ ಕೊಟ್ಟಿರುವುದು ಈಗಾಗಲೇ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ನಮಗೆ ನ್ಯಾಯ ಸಿಗುತ್ತೋ ಇಲ್ಲವೋ ನಮಗೆ ಗೊತ್ತಿಲ್ಲ. ಅದರೆ, ನಾನು ಸತ್ತು ಹೋದರೂ ಪರವಾಗಿಲ್ಲ, ಆದರೆ ಸಚನ್‌ ಪಾಂಚಾಳ್ ಅವರಿಗೆ ನ್ಯಾಯ ಕೊಡಿಸುತ್ತೇವೆ’ ಎಂದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!