spot_img
Sunday, February 15, 2026
spot_img

ಜ್ಞಾನದೀಪ ಯೋಜನೆಯ ಅಡಿಯಲ್ಲಿ ಬಸ್ರೂರು ಹಿಂದೂ ಮಾದರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ 10 ಬೆಂಚು 10 ಡೆಸ್ಕ್ ಗಳ ವಿತರಣೆ

ಜನಪ್ರತಿನಿಧಿ (ಬಸ್ರೂರು) :  ಶ್ರೀ ಕ್ಷೇತ್ರ ಧರ್ಮಸ್ಥಳ ಇದರ ಗ್ರಾಮ ಅಭಿವೃದ್ಧಿ ಯೋಜನೆಯ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದೆ, ಸಾಮಾಜಿಕ ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿದ್ದು ಇದೀಗ ಶಿಕ್ಷಣ ಕ್ಷೇತ್ರಕ್ಕೂ ಮಹತ್ತರ ಕೊಡುಗೆಗಳನ್ನು ನೀಡುತ್ತಿದೆ.  ಜ್ಞಾನದೀಪ ಯೋಜನೆಯ ಅಡಿಯಲ್ಲಿ ಶಾಲೆಗೆ ಶಿಕ್ಷಕರನ್ನು ನಿಯೋಜಿಸುತ್ತದೆ ಹಾಗೂ ಪೀಠೋಪಕರಣಗಳನ್ನು ನೀಡುತ್ತಿದೆ ಎಂದು ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಕುಂದಾಪುರ ವಲಯದ ಯೋಜನಾಧಿಕಾರಿ ಪಾರ್ವತಿ ಅವರು ಹೇಳಿದರು.

ಬಸ್ರೂರು ಹಿಂದೂ ಮಾದರಿ ಅನುದಾನಿತ ಹಿರಿಯ ಪ್ರಾಥಮಿಕ  ಶಾಲೆಗೆ 10 ಬೆಂಚು 10 ಡೆಸ್ಕ್ ಗಳನ್ನು ವಿತರಿಸಿ ವಿತರಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಬಸ್ರೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಬೇಳೂರು ದಿನಕರ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷೆ ಮಾಲತಿ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಕೀಲೆ ಶರ್ಮಿಳಾ ಯೋಗೀಶ್ ಆಚಾರ್, ಯೋಜನೆಯ ಮೇಲ್ವಿಚಾರಕರಾದ ಶಕುಂತಲಾ ಮತ್ತು ಸುಜಾತ ಶೆಟ್ಟಿ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಶಶಿಕಾಂತ್ ಮತ್ತು  ಅಶೋಕ್ ಕೆರೆಕಟ್ಟೆ, ರಾಜ್ಯ ಭಜನಾ ಪರಿಷತ್ ನ ಉಪಾಧ್ಯಕ್ಷ ರಾದ ರಾಜೇಂದ್ರ ಕುಮಾರ,ಹಾಗೂ ಶಿವರಾಮ ಮೇಸ್ತ್ರ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯರಾದ ಕೆ. ಎಸ್ .ಮಂಜುನಾಥ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಶಾಲಾ ಅಧ್ಯಾಪಕರಾದ ಮಾಲತಿ ಆಚಾರ್ಯ, ನಮೃತಾ ಪ್ರಭು, ವೀಣಾ ಕಾರಂತ್, ರೀಮಾ ಖಾರ್ವಿ  ಸಹಕರಿಸಿದ್ದರು. ಜ್ಞಾನ  ದೀಪ ಯೋಜನೆಯ ಶಿಕ್ಷಕಿ ವಿನುತಾ ಜೋಗಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!