spot_img
Thursday, April 2, 2026
spot_img

ಭಟ್ಕಳ : ಬಾಕಡಕೇರಿಯ ಲ್ಲಿ 207 ನೇ ಐತಿಹಾಸಿಕ ಭೀಮ್ ಕೋರೆಗಾವ್ ಯುದ್ಧದ ವಿಜಯೋತ್ಸವ ದಿನಾಚರಣೆ

ಜನಪ್ರತಿನಿಧಿ (ಭಟ್ಕಳ) : ಶಿರಾಲಿ ಗ್ರಾಮ ಪಂಚಾಯತ್ ಚಿತ್ರಾಪುರದ ಬಾಕಡಕೇರಿಯ ಲ್ಲಿ 207 ನೇ ಐತಿಹಾಸಿಕ ಭೀಮ್  ಕೋರೆಗಾವ್ ಯುದ್ಧದ ವಿಜಯೋತ್ಸವ ದಿನಾಚರಣೆಯಂದು ಚಿತ್ರಾಪುರದ ಬಾಕಡಕೇರಿಗೆ ಅಂಬೇಡ್ಕರ್ ಕಾಲೋನಿ ಎಂದು ಮರು ನಾಮಕರಣ ಮಾಡಲಾಯಿತು.

ಕೃಷ್ಣ ಪಂಡು ಬಾಕಡ್ ಅವರು ಅಂಬೇಡ್ಕರ್ ಕಾಲೋನಿ ಸರ್ಕಲ್ ರಿಬ್ಬನ್ ಕಟ್ ಮಾಡಿದ ಮತ್ತು ಮಾಸ್ತಿ ಬಾಕಡ ದೀಪ ಬೆಳಗಿಸಿದರು.

ಬಳಿಕ ಮಾತನಾಡಿದ ಅವರು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಮತ್ತು ಸಮಾನತೆಗೆ ಒತ್ತು ನೀಡಿದರು. ನಾವು ಎಲ್ಲರೂ ವಿದ್ಯಾವಂತರಾಗಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬೇಕೆಂಬುದೇ ನಮ್ಮೆಲ್ಲರ ಉದ್ದೇಶ ಹಾಗಾಗಿ ಪ್ರತಿಯೊಂದು ಮಗು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹೇಳಿದರು.

ಬಾಕಡಕೆರಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಪರಿಶಿಷ್ಟ ಜಾತಿಯವರ ಮನೆಗಳು ಇದ್ದವು. ಇಲ್ಲಿನ ಹಿರಿಯ ದಲಿತ ಮುಖಂಡರು, ಮಹಿಳೆಯರು ಮತ್ತು ಯುವಕರು ಎಲ್ಲರೂ ಸೇರಿ ಚರ್ಚಿಸಿ ತಮ್ಮ ಕೇರಿಗೆ ಅಂಬೇಡ್ಕರ್ ಅವರ ಸವಿನೆನಪಿಗೋಸ್ಕರ ಹೆಸರನ್ನು ಇಡುವುದಾಗಿ ನಿರ್ಣಯ ತೆಗೆದುಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾಯಣ್ ಮಂಜ ಬಾಕಡ್ ವಹಿಸಿದ್ದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಬಾಕಡ್, ಶ್ರೀ ಚೌಡೇಶ್ವರಿ ಮಸಣಕಾಳಿ ದೇವಸ್ಥಾನ ಪ್ರಧಾನ ಅರ್ಚಕರಾದ ನಾರಾಯಣ ಬಾಕಡ್ , ಬಸವ ಬಾಕಡ್ ಗಣಪತಿ ಬಾಕಡ್, ಶಂಕರ್ ಬಾಕಡ್, ರಾಮ ಬಾಕಡ್, ಕೃಷ್ಣಬಾಕಡ್ ,ಚಂದ್ರ ಬಾಕಡ್ , ಬಾಕಡ್, ದೇವಮ್ಮಬಾಕಡ್, ಚೈತ್ರ ಬಾಕಡ್, ನಾಗಮ್ಮ ಬಾಕಡ್, ಜಯ ಬಾಕಡ್, ಮಾದೇವಿ ಬಾಕಡ್, ನಾರಾಯಣಿ ಬಾಕಡ , ಲಲಿತಬಾಕಡ್, ಪಾರ್ವತಿ ಬಾಕಾಡ , ನಾಗವೇಣಿ ಬಾಕಡ್, ಮಾಸ್ತಮ್ಮ ನಾಗರಾಜ್ ಬಾಕಡ್ ಮೊದಲಾದವರು ಉಪಸ್ಥಿತರಿದ್ದರು.

ಗಣಪತಿ ಬಾಕಡ್ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಬಾಕಡ್ ಸ್ವಾಗತಿಸಿದರು. ಸುನಿಲ್, ಭಾಸ್ಕರ್ ಧನ್ಯವಾದ ಸಲ್ಲಿಸಿ, ಹರೀಶ್ ಮಾಸ್ತಿ ಬಾಕಡ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!