spot_img
Sunday, February 15, 2026
spot_img

ಟೀಕೆಗಳಿಗೆ ಯೋಜನೆಗಳಿಂದಲೇ ಉತ್ತರಿಸಿದ ಭಾರತದ ಸರ್ವಶ್ರೇಷ್ಠ ಆರ್ಥಿಕ ತಜ್ಞ | ಸಿಂಗ್‌ ಆಡಳಿತಾವಧಿಯ ಪ್ರಮುಖ ಸಾಧನೆಗಳು !

ಜನಪ್ರತಿನಿಧಿ (ನವ ದೆಹಲಿ) : ಹತ್ತು ವರ್ಷಗಳ ಕಾಲ ದೇಶದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಡಾ. ಮನಮೋಹನ್‌ ಸಿಂಗ್‌ ಅವರ ವಿರುದ್ಧ ಪ್ರತಿಪಕ್ಷಗಳು ʼಮೌನ ಮೋಹನ್‌ʼ ಎಂದು ಸದಾ ಟೀಕಿಸುತ್ತಿದ್ದವು. ಸ್ವತಃ ಆರ್ಥಿಕ ತಜ್ಙರಾಗಿದ್ದ ಅವರು, ದೇಶ ಆರ್ಥಿಕವಾಗಿ ಪ್ರಗತಿ ಸಾಧಿಸುವಂತೆ ಮಾಡಲು ಸದಾ ಉತ್ಸುಕರಾಗಿದ್ದರು, ಅನೇಕ ಯೋಜನೆಗಳನ್ನು ತಂದಿದ್ದರು. ಮನಮೋಹನ್‌ ಸಿಂಗ್‌ ವಾಗ್ಮಿ ಅಲ್ಲ. ಪ್ರತಿಪಕ್ಷಗಳ ಟೀಕೆಗಳಿಗೆ ಅವರು ಹೆಚ್ಚು ಉತ್ತರಿಸಿದ್ದು ಮೌನದಿಂದಲೇ. ಸೌಮ್ಯ, ಮಿತ ಭಾಷಿಯಾಗಿರುವ ಅವರು, ದೇಶಕ್ಕೆ ತಮ್ಮ ಆಡಳಿತಾವಧಿಯಲ್ಲಿ ಅನೇಕ ಪ್ರಯೋಜನಕಾರಿ ಯೋಜನೆಗಳನ್ನು ಜಾರಿಗೆ ತರುವ ಮೂಲಕವೇ ಉತ್ತರ ನೀಡಿದ್ದರು.

ಸಿಂಗ್ ನೇತೃತ್ವದ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಮುಂದೆ ಅಧಿಕಾರಕ್ಕೆ ಬಂದ ಸರ್ಕಾರಗಳೂ ಪಾಲಿಸುತ್ತಿವೆ ಎನ್ನುವುದೇ ಅವರು ಈ ದೇಶಕ್ಕಾಗಿ ಜಾರಿಗೆ ತಂದ ಯೋಜನೆಗಳ ಗಟ್ಟಿತನ ಮತ್ತು ಹೆಚ್ಚುಗಾರಿಕೆ. ಈಗ ಅವರು ತಮ್ಮ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಅಸ್ತಂಗತರಾಗಿದ್ದಾರೆ. ಸದಾ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದ್ದ ಅವರಲ್ಲಿ ಭವಿಷ್ಯದ ಬಗ್ಗೆ ಒಂದು ಅಚಲವಾದ ನಂಬಿಕೆ ಇದ್ದಿತ್ತು. ತಮ್ಮ ಕೊನೆಯ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವಾಗ ʼಈ ದೇಶದ ಇತಿಹಾಸ ನನಗೆ ದಯೆ ತೋರಲಿದೆʼ ಎಂದು ಹೇಳಿದ್ದರು. ಬಹಶಃ ಅವರಾಡಿದ ಮಾತು ಇಂದು ಸಾರ್ಥಕವಾಗಿದೆ. ಈಗ ಅವರ ಆಡಳಿತದಲ್ಲಿ ತಂದ ಯೋಜನೆಗಳ ಬಗ್ಗೆ ಈ ದೇಶದ ನಾಗರಿಕರು ಪಕ್ಷಬೇಧವಿಲ್ಲದೆ ಸ್ಮರಿಸಿಕೊಳ್ಳುತ್ತಿದ್ದಾರೆ, ಗೌರವಿಸುತ್ತಿದ್ದಾರೆ ಎನ್ನುವುದು ಡಾ. ಮನಮೋಹನ್‌ ಸಿಂಗ್‌ ಸಾಧನೆಗೆ ಹಿಡಿದ ಕನ್ನಡಿ.

ಡಾ. ಮನಮೋಹನ್‌ ಸಿಂಗ್‌ ಅವರ ಪ್ರಮುಖ ಸಾಧನೆಗಳು :

ಮೌಲ್ಯ ವರ್ಧಿತ ತೆರಿಗೆ ವ್ಯವಸ್ಥೆ ಜಾರಿ

2005ರಲ್ಲಿ ಮನಮೋಹನ್ ಸಿಂಗ್ ಸಂಕೀರ್ಣ ಮಾರಾಟ ತೆರಿಗೆಯ ಬದಲು ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಅನ್ನು ಜಾರಿಗೊಳಿಸುವುದರ ಮೂಲಕ ದೇಶದ ಅರ್ಥ ವ್ಯವಸ್ಥೆಯಲ್ಲಿ ಕ್ರಾಂತಿಗೆ ಕಾರಣವಾಯಿತು.

ವಿಶೇಷ ಆರ್ಥಿಕ ವಲಯ ಕಾಯ್ದೆ ಜಾರಿಯ ಹಿಂದಿನ ಎಲುಬು ಸಿಂಗ್‌ !

2005ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ದೇಶದ ಕೈಗಾರಿಕೋದ್ಯಮವನ್ನು ಪ್ರೋತ್ಸಾಹಿಸುವ ದೃಷ್ಟಿಯಲ್ಲಿ ವಿಶೇಷ ಆರ್ಥಿಕ ವಲಯ ಕಾಯ್ದೆಯನ್ನು ಅಂಗೀಕರಿಸಿದರು. ಈ ಕಾಯ್ದೆ ಫೆಬ್ರವರಿ 2006 ರಲ್ಲಿ ಜಾರಿಗೆ ಬಂದಿತ್ತು. SEZ ದೇಶಕ್ಕೆ ವಿದೇಶಿ ಬಂಡವಾಳ ಸೆಳೆಯುವುದರಲ್ಲಿ, ಉದ್ಯೋಗ ಸೃಷ್ಟಿಯಲ್ಲಿ ಮತ್ತು ದೇಶದ ಆರ್ಥಿಕ ಪ್ರಗತಿಗೆ ಅಪಾರ ಕೊಡುಗೆ ನೀಡುತ್ತಿದೆ.

ಅತ್ಯಧಿಕ ಜಿಡಿಪಿ ದರ ಸಾಧಿಸಿದ ಪ್ರಧಾನಿ : ಅಂದೇ ದೇಶದ ವಿಶ್ವದ ಎರಡನೇ ಆರ್ಥಿಕ ಪ್ರಗತಿ ಹೊಂದಿದ ದೇಶ !

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಜಿಡಿಪ ಅತಿ ವೇಗದಲ್ಲಿ ಪ್ರಗತಿ ಹೊಂದಿತ್ತು. 2006- 2007ರಲ್ಲಿ ಜಿಡಿಪಿ ಶೇ.10.08ರ ದರದಲ್ಲಿ ಪ್ರಗತಿ ಹೊಂದಿತ್ತು. ಅದೇ ರೀತಿ 2009ರಲ್ಲಿ ಜಿಡಿಪಿ ದರ ಶೇ.9ಕ್ಕೆ ತಲುಪಿತ್ತು. ಆ ಮೂಲಕ ಭಾರತ ಅತಿ ವೇಗದಲ್ಲಿ ಬೆಳೆಯುತ್ತಿರುವ ವಿಶ್ವದ 2ನೇ ದೊಡ್ಡ ಆರ್ಥಿಕತೆ ಎಂದು ಕರೆಸಿಕೊಂಡಿತ್ತು ಎನ್ನುವುದು ಉಲ್ಲೇಖಾರ್ಹ.

ನಗರಗಳಿಗೆ ಹೊಸ ರೂಪ ನೀಡಿದ ಜೆನರ್ಮ್ ಚಿಂತನೆಯ ನಿರ್ದೇಶಕ

ಡಾ. ಸಿಂಗ್ ನಾಯಕತ್ವದಲ್ಲಿ ಕೇಂದ್ರ ನಗರಾಭಿವೃದ್ಧಿ ಇಲಾಖೆಯು, ದೇಶದ ಬೃಹತ್ ನಗರಗಳ ಜೆನರ್ಮ್‌ ಆದುನೀಕರಣಕ್ಕಾಗಿ ಆರಂಭಿಸಲಾದ ಯೋಜನೆಯೇ ಜೆನರ್ಮ್ ಅಥವಾ ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರಾಭಿವೃದಿ ಮಿಷನ್, 2005ರ ಡಿಸೆಂಬರ್ 3ರಂದು ಡಾ. ಸಿಂಗ್ ಅವರು ಈ ಯೋಜನೆಯನ್ನು ಉದ್ಘಾಟಿಸಿದರು. ನಗರ ಪ್ರದೇಶ ಗಳ ಜೀವನ ಮಟ್ಟ ಸುಧಾರಣೆ ಹಾಗೂ ಮೂಲಭೂತ ಸೌಕರ್ಯಗಳನ್ನು ಮೇಲಿನ ಸ್ಪರಕ್ಕೆ ಕೊಂಡೊಯ್ಯುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿತ್ತು.

ನೇರ ಲಾಭ ವರ್ಗಾವಣೆ (DBT) 

ನೇರ ಲಾಭ ವರ್ಗಾವಣೆ (DBT) ಅನ್ನು 1 ನೇ ಜನವರಿ 2013 ರಂದು ದೇಶಕ್ಕೆ ಹೊಸ ವರ್ಷದ ಉಡುಗೊರೆಯಾಗಿ ಪ್ರಾರಂಭಿಸಿದರು. “ಸರ್ಕಾರವು ಜನರಿಗೆ 1 ರೂಪಾಯಿಯನ್ನು ಬಿಡುಗಡೆ ಮಾಡಿದಾಗ, ಅಂತಿಮವಾಗಿ ಉದ್ದೇಶಿತ ಫಲಾನುಭವಿಗೆ ಕೇವಲ 15 ಪೈಸೆ ಮಾತ್ರ ತಲುಪುತ್ತದೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಒಮ್ಮೆ ಹೇಳಿದ್ದರು. ಆದಕ್ಕೆ ಪರಿಹಾರವಾಗಿ ಸಿಂಗ್ ಅವರು ನೇರ ಲಾಭ ವರ್ಗಾವಣೆ ಯೋಜನೆಯನ್ನು ತರುವ ಮೂಲಕ ಜನರಿಗೆ ತಲುಪ ಬೇಕಾದ ವಿಳಂಬವನ್ನು ತಪ್ಪಿಸಲು, ಸೋರಿಕೆಯನ್ನು ತಡೆಗಟ್ಟಲು ಮತ್ತು ಹೆಚ್ಚು ಪಾರದರ್ಶಕತೆಯನ್ನು ಈ ಯೋಜನೆ ತಂದಿದೆ.

ಆಧಾರ್ ಕಾರ್ಡ್ ಪರಿಕಲ್ಪನೆಯ ಹಿಂದಿನ ಚಿಂತನೆ ಸಿಂಗ್‌ !

UIDAI ದೇಶದ ನಾಗರಿಕರಿಗೆ ಈ ಆಧಾ‌ರ್ ಕಾರ್ಡ್‌ಗಳನ್ನು ನೀಡುತ್ತದೆ. ನಿಮ್ಮ ಫಿಂಗರ್‌ಪ್ರಿಂಟ್, ರೆಟಿನಾ ಸ್ಕ್ಯಾನ್ ಮತ್ತು ಆಧಾರ್ ಅನ್ನು ಅನುಮೋದಿಸಿದ ನಂತರವೇ ಆಧಾ‌ರ್ ಕಾರ್ಡ್‌ಗಳನ್ನು ನೀಡುತ್ತಾರೆ. ಈ ಯೋಜನೆಯನ್ನು ಜಾರಿಗೆ ತರುವ ಮೂಲಕ ಭಾರತದ ಏಕರೂಪದ ಗುರುತಿನ ಕಾರ್ಡ್ ಯೋಜನೆಯನ್ನು ಸಿಂಗ್ ಪ್ರಾರಂಭಿಸಿದರು. ಇದರೊಂದಿಗೆ ನೇರಾವಾಗಿ ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನೇರ ಲಾಭ ವರ್ಗಾವಣೆಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಅಗತ್ಯದ ಕಲ್ಪನೆಯ ಹಿಂದೆ ಡಾ. ಮನಮೋಹನ್ ಸಿಂಗ್ ಯೋಚನೆ ಇತ್ತು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (NREGA)  2005

ಡಾ. ಮನಮೋಹನ್ ಸಿಂಗ್ ಅವರ ನಾಯಕತ್ವದಲ್ಲಿ ಭಾರತ ಸರ್ಕಾರ 2005 ರಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (NREGA) ಯೋಜೆನೆಯನ್ನು ಪರಿಚಯಿಸಿತು. ದೇಶದ ಗ್ರಾಮೀಣ ಸಮುದಾಯಗಳು ಮತ್ತು ಕಾರ್ಮಿಕರಿಗೆ ಜೀವನೋಪಾಯ, ಜೀವನಾಂಶ ಮತ್ತು ಉದ್ಯೋಗವನ್ನು ಒದಗಿಸುವ ಗುರಿಯನ್ನು ಹೊಂದಿರುವ ಸಾಮಾಜಿಕ ಭದ್ರತಾ ಯೋಜನೆಯಾದ ಇದು, ಗ್ರಾಮೀಣ ಕುಟುಂಬಗಳಿಗೆ ಒಂದು ವರ್ಷದಲ್ಲಿ ಕನಿಷ್ಠ 100 ದಿನಗಳ ನಿರ್ದಿಷ್ಟ ವೇತನ ಉದ್ಯೋಗವನ್ನು ಒದಗಿಸುವ ಮೂಲಕ ಆದಾಯ ಭದ್ರತೆಯನ್ನು ಖಚಿತಪಡಿಸುತ್ತದೆ.

ಇಂಡೋ-ಅಮೆರಿಕ ಪರಮಾಣು ಒಪ್ಪಂದಕ್ಕೆ ಸಿಂಗ್‌ ಸಹಿ

ಭಾರತದ ಅತಿದೊಡ್ಡ ಸಾಧನೆಗಳಲ್ಲಿ ಭಾರತ ಮತ್ತು ಅಮೆರಿಕ ಪರಮಾಣು ಒಪ್ಪಂದ (ಭಾರತ ನಾಗರಿಕ ಪರಮಾಣು ಒಪ್ಪಂದಕ್ಕೆ)  ಮನಮೋಹನ್‌ ಸಿಂಗ್‌ ಸಹಿ ಹಾಕಿದರು. ಬಹುಶಃ, ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರ ತೆಗೆದುಕೊಂಡ ಅತ್ಯಂತ ಪ್ರಮುಖ ನಿರ್ಧಾರಗಳಲ್ಲಿ ಒಂದು. ಭಾರತ ಪರಮಾಣು ಇಂಧನ ಮತ್ತು ತಂತ್ರಜ್ಞಾನವನ್ನು ಖರೀದಿಸಲು ಮತ್ತು ಅವುಗಳನ್ನು ಮಾರಾಟ ಮಾಡಲು ಅವಕಾಶ ನೀಡಿತು.

ಚಂದ್ರಯಾನ-1 ಹಿಂದಿನ ಶಕ್ತಿ ಸಿಂಗ್‌

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಪ್ರಮುಖ ಯೋಜನಗಳಾದ ಚಂದ್ರಯಾನ ಮತ್ತು ಮಂಗಳಯಾನದ ರೂವಾರಿ ಮನಮೋಹನ್‌ ಸಿಂಗ್. 22 ಅಕ್ಟೋಬರ್ 2008 ರಂದು ಭಾರತದ ಮೊದಲ ಚಂದ್ರನ ಅನ್ವೇಷಣಾ ಕಾರ್ಯಾಚರಣೆಯಾದ ಚಂದ್ರಯಾನ-1 ಅನ್ನು ಪ್ರಾರಂಭಿಸುವ ಮೂಲಕ ಬಾಹ್ಯಾಕಾಶ ಕಾರ್ಯಸೂಚಿಯನ್ನು ಮತ್ತಷ್ಟು ಹೆಚ್ಚಿಸಿದರು.

ಚಂದ್ರನಿಂದ ದೂರದಲ್ಲಿ ತನ್ನ ದೃಷ್ಟಿಯನ್ನು ಹೊಂದಿಸಿ, ಡಾ. ಸಿಂಗ್ ಮಂಗಳ ಗ್ರಹದ ಬಗ್ಗೆ ಅನ್ವೇಷಿಸಲು ಮತ್ತು ತಿಳಿದುಕೊಳ್ಳಲು 5 ನವೆಂಬರ್ 2013 ರಂದು ಮಂಗಳಯಾನ ಅಥವಾ ಮಾರ್ಸ್ ಆರ್ಬಿಟರ್ ಮಿಷನ್‌ (MOM) ಅನ್ನು ಪ್ರಾರಂಭಿಸಿದರು.

ಪೋಲಿಯೊ ಮುಕ್ತ ಭಾರತದ ಕಲ್ಪನೆ ಸಿಂಗ್‌ !

ಪೋಲಿಯೋ ಮುಕ್ತ ಭಾರತವನ್ನಾಗಿ ಮಾಡುವಲ್ಲಿ 2004 ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಶ್ರಮಿಸಿದ ಮನಮೋಹನ್‌ ಸಿಂಗ್, ಕೊನೆಗೆ ಭಾರತವು ತನ್ನ ಕೊನೆಯ ಪೋಲಿಯೊ ಪ್ರಕರಣವನ್ನು 13 ಜನವರಿ 2011 ರಂದು ದಾಖಲಿಸಿತ್ತು. ಇದರೊಂದಿಗೆ ಇವರ ಆಡಳಿತಾವಧಿಯಲ್ಲಿ ಭಾರತ ಫೆಬ್ರವರಿ 24, 2012 ರಂದು ವಿಶ್ವ ಆರೋಗ್ಯ ಸಂಸ್ಥೆ (WHO)ಯಿಂದ ಪ್ರಮಾಣ ಪಡೆಯಿತ್ತು ಎನ್ನುವುದು ಉಲ್ಲೇಖಾರ್ಹ.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ ಮಾಹಿತಿ ಹಕ್ಕು ಕಾಯಿದೆ (RTI) ಜಾರಿ

ನಾಗರಿಕರನ್ನು ಸರ್ಕಾರಕ್ಕೆ ಹತ್ತಿರವಾಗುವಂತೆ ಮಾಡುವ ಉದ್ದೇಶದಿಂದ ಮಾಹಿತಿ ಹಕ್ಕು ಕಾಯಿದೆಯನ್ನು ಕಾರ್ಯರೂಪಕ್ಕೆ ತಂದವರು ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರ. ಸರ್ಕಾರದ ಕೆಲಸದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಸಿಂಗ್‌ ನೇತೃತ್ವದ ಸರ್ಕಾರ ಈ ಕಾಯ್ದೆಯನ್ನು ಜಾರಿಗೊಳಿಸಿತ್ತು.ಭ್ರಷ್ಟಾಚಾರವನ್ನು ತಡೆಗಟ್ಟುವುದು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಜನರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಉದ್ದೇಶ ಈ ಕಾಯ್ದೆಯದ್ದಾಗಿತ್ತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!