spot_img
Wednesday, April 1, 2026
spot_img

ತೆಕ್ಕಟ್ಟೆಯಲ್ಲಿ ‘ನಾಟಕಾಷ್ಟಕ’ ಉದ್ಘಾಟನೆ |ವೀರಯೋಧ ಅನೂಪ್ ಪೂಜಾರಿಗೆ ನುಡಿ ನಮನ

ತೆಕ್ಕಟ್ಟೆ: ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ, ರಂಗ ಸಂಪದ ಕೋಟ, ಧಮನಿ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಸಿನ್ಸ್ 1999 ಶ್ವೇತಯಾನ-89 ಕಾರ್ಯಕ್ರಮದಡಿಯಲ್ಲಿ ಡಿಸೆಂಬರ್ 26ರಂದು ನಾಟಕಾಷ್ಟಕ ಕಾರ್ಯಕ್ರಮ ಉದ್ಘಾಟನೆ ನಡೆಯಿತು.

ಈ ಸಂದರ್ಭದಲ್ಲಿ ಅಗಲಿದ ವೀರಯೋಧ ಅನೂಪ್ ಪೂಜಾರಿಗೆ ನುಡಿ ನಮನ ಸಲ್ಲಿಸಲಾಯಿತು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಗಣಪತಿ ಟಿ. ಶ್ರೀಯಾನ್ ನುಡಿ ನಮನ ಸಲ್ಲಿಸಿ, ಕರಾವಳಿಯ ಉದ್ದಗಲಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನೆರೆದು ಪುಷ್ಪನಮನ ಸಲ್ಲಿಸುವ ಮುಖೇನ, ಅಶ್ರು ತರ್ಪಣ ನೀಡುವ ಮುಖೇನ ತಮ್ಮ ಮನೆಯ ಮಗನಂತೆ ಸಾರ್ವಜನಿಕರು ಭಾಗವಹಿಸಿರುವುದು ಮರೆಯಲಾರದ ಸಂಗತಿ. ವೀರಯೋಧ ಅನೂಪ್ ಪೂಜಾರಿಯ ಸಾವು ಕರಾವಳಿಗೆ ಕರಾಳದಿನ ಎಂದು ನುಡಿ ನಮನ ಸಲ್ಲಿಸಿದರು.

ನಾಟಕಾಷ್ಟಕ ಕಾರ್ಯಕ್ರಮವನ್ನು ಉದ್ಯಮಿ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ಉದ್ಘಾಟಿಸಿದರು. ಉದ್ಘಾಟನಾ ಮಾತುಗಳನ್ನಾಡಿದ ಆನಂದ ಸಿ.ಕುಂದರ್, ಸಮಾಜದ ಕುಂದು ಕೊರತೆಗಳನ್ನು ಜನರಿಗೆ ಮನ ಮುಟ್ಟುವಂತೆ ರಂಗರೂಪಕ್ಕಿಳಿಸಿ ಅಭಿನಯಿಸಿ ಕಲೆ ರಂಗಭೂಮಿ ನಾಟಕ. ಹಲವಾರು ಕಲಾ ಪ್ರಕಾರಗಳನ್ನು ಮೈಗೂಡಿಸಿಕೊಂಡು ಯಶಸ್ವೀ ವೇದಿಕೆಯಲ್ಲಿ ಅನಾವರಣಗೊಳಿಸುತ್ತಿರುವುದು ಈ ಭಾಗದ ಜನಕ್ಕೆ ಬಹಳ ಉಪಯುಕ್ತವಾಗಿದೆ. ಕಲಾಸಕ್ತ ಮನಸ್ಸುಗಳಿಗೆ ಹತ್ತಿರವಾಗಿ ಬೆಳಗುತ್ತಿರುವ ಸಂಸ್ಥೆ ನೂರು ವರ್ಷ ಬದುಕಿ ಬಾಳಲಿ ಎಂದರು.
ಸಮಾಜದ ಸಮಸ್ಯೆಯನ್ನು ನಾಟಕದ ಮೂಲಕ ಮನ ಮುಟ್ಟುವಂತೆ ಅಭಿನಯಿಸಿ ಗೆಲ್ಲುವುದು ನಾಟಕದ ಉದ್ದೇಶ ಎಂದು ಡಾ. ಆದರ್ಶ ಹೆಬ್ಬಾರ್ ಹೇಳಿದರು. ಪತ್ರಕರ್ತ ಯು. ಎಸ್. ಶಣೈ, ಜನಾರ್ಧನ ಹಂದೆ, ಉಪನ್ಯಾಸಕ ಸುಜಯೀಂದ್ರ ಹಂದೆ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನೀನಾಸಂ ಹೆಗ್ಗೋಡು ತಂಡದವರಿಂದ ಭಾವಭೂತಿ ರಚನೆಯ, ಅಕ್ಷರ ಕೆ.ವಿ. ನಿರ್ದೇಶನದ ನಾಟಕ ಮಾಲತಿ ಮಾಧವ ನಾಟಕ ರಂಗದಲ್ಲಿ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!