spot_img
Saturday, February 14, 2026
spot_img

ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ

        

ವಂಡ್ಸೆ: ಬೈಂದೂರು ಕ್ಷೇತ್ರದಲ್ಲಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು 7 ಸರಕಾರಿ ಶಾಲೆಗಳನ್ನು ದತ್ತು ತಗೆದುಕೊಂಡು ಮೂಲ ಸೌಕರ್ಯ ಅಭಿವೃದ್ಧಿ, ಗೌರವ ಶಿಕ್ಷಕರ ನೇಮಕ ಮಾಡಿಕೊಳ್ಳುವ ಮೂಲಕ ಅಭಿವೃದ್ಧಿ ಪಡಿಸುವ ಮೂಲಕ ಮಾದರಿಯಾಗಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ವಂಡ್ಸೆಯ ಈ ಶಾಲೆ ವಿಶೇಷವಾಗಿ ಗಮನ ಸಳೆಯುತ್ತಿದೆ. ಸರಕಾರಿ ಶಾಲೆಯನ್ನು ದತ್ತು ತಗೆದುಕೊಂಡು ಈ ರೀತಿಯಲ್ಲಿ ಅಭಿವೃದ್ಧಿ ಪಡಿಸಬಹುದು ಎನ್ನುವುದಕ್ಕೆ ಈ ಶಾಲೆ ಉತ್ತಮ ಉದಾಹರಣೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಡಿ.21ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇದರ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

300 ಟ್ರಿಸ್ ಯೋಜನೆಗೆ ಕೃಷ್ಣಮೂರ್ತಿ ಮಂಜರು ಪ್ರೇರಣೆ. ವೃಕ್ಷದ ರೀತಿಯಲ್ಲಿ ಸರಕಾರಿ ಶಾಲೆಯನ್ನು ಪೋಷಿಸುವ ಕೆಲಸ ಕೃಷ್ಣಮೂರ್ತಿ ಮಂಜರು ಮಾಡುತ್ತಿದ್ದಾರೆ. ಇವತ್ತು ಬೈಂದೂರು ಕ್ಷೇತ್ರದಲ್ಲಿ 16 ಶಾಲೆಗಳಲ್ಲಿ ದಾನಿಗಳ ಮೂಲಕ ಶಾಲಾ ವಾಹನ ಸೌಲಭ್ಯ ದೊರಕಿದೆ. ಸರಕಾರಿ ಶಾಲೆಗೆ ಶಾಲಾವಾಹನಗಳ ಸೌಲಭ್ಯದಿಂದ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾಗಿದೆ ಎಂದು ಹೇಳಿದ ಅವರು ಬೈಂದೂರು ಐದು ಶಾಲೆಗಳು ಬಾಗಿಲು ಮುಚ್ಚಿವೆ. ಇನ್ನೂ 50 ಶಾಲೆಗಳು ಬಾಗಿಲು ಮುಚ್ಚುವ ಹಂತದಲ್ಲಿದೆ. ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ಆಗಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣಮೂರ್ತಿ ಮಂಜರು ಮಾತನಾಡಿ, ಶಾಲೆಯಲ್ಲಿ ಗುಣಮಟ್ಟ ಉತ್ತಮವಾಗಿರುವುದರಿಂದ ಪೋಷಕರು ಆ ಶಾಲೆಯತ್ತ ಆಕರ್ಷಿತರಾಗುತ್ತಾರೆ, ಇಲ್ಲಿ ಪೋಷಕರು ನಿರೀಕ್ಷಿಸುವ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ. ಉತ್ತಮ ಶಿಕ್ಷಕವೃಂದವಿದೆ. ಟ್ರಸ್ಟ್ ದತ್ತು ಪಡೆಯುವಾಗ ೮೦ ಮಕ್ಕಳಿದ್ದ ಶಾಲೆ ಈಗ ೪೦೦ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಬೆಳವಣಿಗೆಗೆ ಹಳೆ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿಯ ಪಾತ್ರ ಮಹತ್ವದ್ದಾಗಿದೆ. ಶಾಲೆಯಲ್ಲಿ ರಾಜಕೀಯ ಮತ್ತು ಜಾತಿ ಬರಬಾರದು ಎಂದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಅವಿನಾಶ್ ಅಧ್ಯಕ್ಷತೆ ವಹಿಸಿದ್ದರು. ವಂಡ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಉದಯಕುಮಾರ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಶಶಿಕಲಾ ಎಸ್., ಸುಶೀಲಾ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ರಾಜೇಶ ಕಾರಂತ್, ನೋಟರಿ ಮತ್ತು ವಕೀಲರಾದ ಕೆ.ಪ್ರಸನ್ನಕುಮಾರ ಶೆಟ್ಟಿ, ಚಿತ್ರಕೂಟ ಆಯುರ್ವೇದ ಆಲೂರು ಇದರ ಸಂಸ್ಥಾಪಕ ಡಾ.ರಾಜೇಶ್ ಬಾಯರಿ, ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಜಿ.ಪೂಜಾರಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುಂಡು ಪೂಜಾರಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ರಾಜೀವ ವಂಡ್ಸೆ, ವಿದ್ಯಾರ್ಥಿ ನಾಯಕಿ ಆರಾಧ್ಯ ಹಾಗೂ ಎಸ್ಡಿ‌ಎಂಸಿ ಸದಸ್ಯರು, ಶ್ರೀ ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಕೋಶಾಧಿಕಾರಿ, ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲೆ ಹಳೆ ವಿದ್ಯಾರ್ಥಿ, ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸೀತಾರಾಮ ಜಿ ಪೂಜಾರಿ, ವಂಡ್ಸೆ ಶಾಲೆಯಲ್ಲಿ ಸೇವೆ ಸಲ್ಲಿಸಿ ಸಿ.ಆರ್.ಪಿ ಆಗಿ ಕರ್ಕುಂಜೆ ಕ್ಲಸ್ಟರ್‌ಗೆ ವರ್ಗಾವಣೆಗೊಂಡ ರವಿಚಂದ್ರ ಅವರನ್ನು ಸನ್ನಾನಿಸಲಾಯಿತು. ವಿವಿಧ ದತ್ತಿನಿಧಿ ಬಹುಮಾನಗಳನ್ನು ವಿತರಿಸಲಾಯಿತು. ಈ ಶೈಕ್ಷಣಿಕ ವರ್ಷದಲ್ಲಿ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಅಂತರಾಷ್ಟ್ರೀಯ ಕ್ರೀಡಾಪಟು ಗುರುರಾಜ್ ಪೂಜಾರಿ ಜಡ್ಡು ಸ್ವಸ್ತಿವಾಚನ ಮಾಡಿದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಡಾ.ಪೂರ್ಣಿಮಾ ಟಿ ಸ್ವಾಗತಿಸಿದರು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಸದಾಶಿವ ವರದಿ ವಾಚಿಸಿದರು. ಶಿಕ್ಷಕಿ ನಾಗವೇಣಿ ದತ್ತಿನಿಧಿ ಬಹುಮಾನಿತರ ಪಟ್ಟಿ, ಶೈಲಶ್ರೀ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂದೇಶ ಶೆಟ್ಟಿ ವಂದಿಸಿದರು. ಶಿಕ್ಷಕರಾದ ಪ್ರತಾಪಕುಮಾರ್ ಶೆಟ್ಟಿ, ಸುಧಾಕರ ಕಾರ್ಯಕ್ರಮ ನಿರ್ವಹಿಸಿದರು.

ಅಂಗನವಾಡಿ ಪುಟಾಣಿಗಳಿಂದ ನೃತ್ಯ, ಶಾಲಾ ಮಕ್ಕಳಿಂದ ನೃತ್ಯ ಸಿಂಚನ, ವಿದ್ಯಾರ್ಥಿಗಳಿಂದ ನಾಟಕ ಮಕ್ಕಳೊಳಗೆ ಮಾಯಾವಿಗಳು, ವಿವಿಧ ನೃತ್ಯ ವೈಭವ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!