spot_img
Wednesday, April 1, 2026
spot_img

ಶಿವರಾಜ್ ಕುಮಾರ್ ಅರೋಗ್ಯ ವೃದ್ಧಿಗಾಗಿ ದೇವರ ಮೊರೆ ಹೋದ ಅಭಿಮಾನಿಗಳು 

ಬೆಂಗಳೂರು : ನಟ, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅನಾರೋಗ್ಯ ಸಮಸ್ಯೆ ಇಂದಾಗಿ ಹೆಚ್ಚಿನ ಚಿಕಿತ್ಸೆಗಾಗಿ ಇತ್ತೀಚೆಗೆ ಅಮೇರಿಕಕ್ಕೆ ತೆರಳಲಿದ್ದಾರೆ. ಅಮೆರಿಕಾದ ಫ್ಲೋರೀಡದಲ್ಲಿರುವ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನಲ್ಲಿ ದಾಖಲಾಗಿರುವ ಶಿವರಾಜ್ ಕುಮಾರ್ ಗೆ ಇಂದು (ಡಿ.24) ಶಸ್ತ್ರಚಿಕಿತ್ಸೆ ನಡೆಯಲಿದೆ.
ಇದೆ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆಯಲಿ ಅವರ ಅರೋಗ್ಯ ಸುಧಾರಣೆಯಾಗಲಿ ಎಂದು ಮಲ್ಲೇಶ್ವರದ 13ನೇ ಅಡ್ಡ ರಸ್ತೆಯಲ್ಲಿರು ಶ್ರೀ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಲ್ಲೇಶ್ವರದ ಕರ್ನಾಟಕ ರತ್ನ ಡಾ ರಾಜ್ ಕುಮಾರ್ ಅಭಿಮಾನಿಗಳ ಸಂಘ ವಿಶೇಷ ಪೂಜೆ ಹಾಗೂ ಅಭಿಷೇಕ ನಡೆಸಿ ದೇವರ ಮೊರೆ ಹೋಗಿದೆ.
ಹಿರಿಯ ಅಭಿಮಾನಿಗಳಾದ ಸೋಮಣ್ಣ ಹಾಗೂ ಅಖಿಲ ಕರ್ನಾಟಕ ಡಾ ಶಿವರಾಜ್ ಕುಮಾರ್ ಸೇನಾ ಸಮಿತಿ ಅಧ್ಯಕ್ಷರಾದ ಟಿ ನಾರಾಯಣ್ ಮತ್ತು ಗಂಡುಗಲಿ ಡಾ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಅಧ್ಯಕ್ಷರಾದ ಎಂ ಮಲ್ಲ  ಹಾಗೂ ಗೆದ್ದಲಹಳ್ಳಿ ಡಾ ರಾಜ್ ಕುಮಾರ್ ಅಭಿಮಾನಿಗಳ ಸಂಘದ  ರಾಜೇಂದ್ರ ಮತ್ತು ಬಿಜೆಪಿಯ ಮುಖಂಡ ಶ್ರೀಧರ  ಮತ್ತು  ಸಂಘದ ಸದಸ್ಯರಾದ ಶಿವಣ್ಣ ಗಾಯಿತ್ರಿ ನಗರ.   ಸಾಗರ್.  ಮತ್ತು ಸಂಘದ ಅಧ್ಯಕ್ಷರಾದ ಪ ರಾ ರಾಘವೇಂದ್ರ ಮಲ್ಲೇಶ್ವರ, ಬೀಡಾ ಜನಾರ್ಧನ್, ಶ್ರೀರಾಂಪುರ ಮಹದೇವ್ ಉಪಸ್ಥಿತರಿದ್ದರು,
 ಸಂಪೂರ್ಣ ಚಿಕಿತ್ಸೆ ಮುಗಿದ ಬಳಿಕ ಜನವರಿ 26 ಕ್ಕೆ ನಟ ಶಿವರಾಜ್ ಕುಮಾರ್ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!