spot_img
Saturday, December 21, 2024
spot_img

ಶ್ರೀ ರಾಮ ದೇಗುಲ ಕೋಡಿ ಕನ್ಯಾಣ: ನೂತನ ಅಧ್ಯಕ್ಷರಾಗಿ ರಾಘವೇಂದ್ರ ಕರ್ಕೇರ ಕೋಡಿ ಆಯ್ಕೆ

ಸಾಸ್ತಾನ: 80ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಕೋಡಿ ಶ್ರೀ ರಾಮ ದೇಗುಲದ ವಾರ್ಷಿಕ ಆಡಳಿತ ಸಭೆಯು ಡಿಸೆಂಬರ್ 16 ಸೋಮವಾರ 2024 ಜರುಗಿತು. ಈ ಸಭೆಯಲ್ಲಿ ನೂತನ ಆಡಳಿತ ಮಂಡಳಿಯ ರಚನೆಯು ಸಮಿತಿಯ ಗೌರವಾಧ್ಯಕ್ಷರಾದ ನಾಡೋಜ ಡಾ| ಜಿ ಶಂಕರ್ ರವರ ಮಾರ್ಗದರ್ಶನದಲ್ಲಿ ಪ್ರಾರಂಭವಾಯಿತು.

ಈ ಸಭೆಯಲ್ಲಿ ದೇಗುಲದ ಅಧ್ಯಕ್ಷರಾಗಿ ರಾಘವೇಂದ್ರ ಕರ್ಕೇರ ಕೋಡಿ ಇವರನ್ನು ಸಾರ್ವನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ರಾಜು ಕರ್ಕೇರ ಮತ್ತು ಸತೀಶ್ ಜಿ ಕುಂದರ್ ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಸಾಲಿಯಾನ್ ಜೊತೆ ಕಾರ್ಯದರ್ಶಿ ವಿಜಯ ಮಾಸ್ಟರ್ ಮಹೇಶ್ ತಿಂಗಳಾಯ ಕೋಶಾಧಿಕಾರಿ ಜಯಕುಮಾರ್ ಎ ಎಸ್ ಗೌರವ ಸಲಹೆಗಾರರಾಗಿ ಶಿವ ಎಸ್ ಕರ್ಕೇರ, ದಯಾನಂದ ಅಮೀನ್, ಅಶೋಕ್ ಕುಂದರ್ ಜೆ ಎಸ್ ಆರ್, ಮಹಾಬಲ ಕುಂದರ್, ಸುರೇಶ್ ಖಾರ್ವಿ, ವಾಮನ್ ಸಾಲಿಯಾನ್‌ಹರ್ಷ ಕುಂದರ್, ಅಶೋಕ್ ತಿಂಗಳಾಯ, ಅಣ್ಣಪ್ಪ ಕುಂದರ್, ಜಗನ್ನಾಥ್ ಅಮೀನ್, ವಿಜಯ ತಿಂಗಳಾಯ, ಗಣೇಶ್ ಕುಂದರ್‌ಭಾಸ್ಕರ್ ಕಾಂಚನ್‌ದಯಾನಂದ ಕರ್ಕೇರ, ಪ್ರಕಾಶ್ ಬಂಗೇರ,ರಾಘವೇಂದ್ರ ಸುವರ್ಣಪ್ರಭಾಕರ ಮೆಂಡನ್‌ಉದಯ್ ಕಾಂಚನ್, ಸುರೇಂದ್ರ ಪೂಜಾರಿ, ಚಂದ್ರ ತಿಂಗಳಾಯ, ದಿವಾಕರ ಶೆಣೈ, ಸುರೇಶ್ ಕಾಂಚನ್ ಅವರನ್ನು ಜರುಗಿದ ಸಭೆಯಲ್ಲಿ ಸರ್ವನುಮತದಿಂದ ಆಯ್ಕೆ ಮಾಡಲಾಯಿತು.

ಆಯ್ಕೆ ಆದ ನೂತನ ಸಮಿತಿಗೆ ದೇಗುಲದ ತಂತ್ರಿಗಳು ವೇದಮೂರ್ತಿ ಸುಬ್ರಮಣ್ಯ ಭಟ್ ಅಭಿನಂದನೆ ತಿಳಿಸಿದರು. ಈ ಸಭೆಯಲ್ಲಿ ಪ್ರಧಾನ ಅರ್ಚಕರಾದ ಭಾಸ್ಕರ್ ಬಾಯಿರಿ ಮತ್ತು ರಾಮದಾಸ್ ಸಾಲಿಯಾನ್ ಹಾಗೂ ಎಲ್ಲಾ ಶ್ರೀ ರಾಮ ದೇಗುಲದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ನಂತರ ನಿಕಟಪೂರ್ವ ಅಧ್ಯಕ್ಷರು ಸುರೇಶ್ ಖಾರ್ವಿಯವರು ನೂತನ ಸಮಿತಿಗೆ ಶುಭ ಹಾರೈಸುವುದರೊಂದಿಗೆ ಲೆಕ್ಕತ್ರಗಳನ್ನು ಹಸ್ತಾಂತರಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!