Sunday, September 8, 2024

ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ: ಪ್ರವೇಶಾತಿ ಆರಂಭ

ಕುಂದಾಪುರ: ಕೋಳ್ಕೆರೆ ರತ್ನಾಕರ ಶೆಟ್ಟಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ.) ಇದರ ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಬಸ್ರೂರು ಗುಣಮಟ್ಟದ ಶಿಕ್ಷಣ ಹೆಸರಾಗುವ ಮೂಲಕ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೆಯಾದ ಛಾಪು ಮೂಡಿಸಿದೆ. ನರ್ಸರಿಯಿಂದ 9ನೇ ತರಗತಿಯ ತನಕ ಇರುವ ಈ ಶಾಲೆಯ ಶೈಕ್ಷಣಿಕ ಗುಣಮಟ್ಟ, ಪಾಠೇತರ ಚಟುವಟಿಕೆಗಳಿಗೆ ಒತ್ತು, ಪ್ರತಿ ಮಗುವಿನಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ರೀತಿ, ಪ್ರತೀ ಮಗುವು ಕೂಡಾ ಕಲಿಕೆಯಲ್ಲಿ ಹಿಂದುಳಿಯದೆ ಪರಿಣಾಮಕಾರಿಯಾಗಿ ಬೋದಿಸುವ ಭೋದನ ಶೈಲಿಯಿಂದ ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಭಿಮಾನಿಗಳ ಗಮನ ಸಳೆಯುತ್ತಿದೆ.
ಪ್ರಸ್ತುತ ಇಲ್ಲಿ ನರ್ಸರಿಯಿಂದ 10ನೇ ತರಗತಿಯ ತನಕ ಮುಂದಿನ ಶೈಕ್ಷಣಿಕ ಸಾಲಿನ ದಾಖಲಾತಿ ಆರಂಭವಾಗಿದೆ.

ಇಲ್ಲಿ ನರ್ಸರಿ, ಎಲ್.ಕೆ.ಜಿ., ಯು.ಕೆ.ಜಿ ಮತ್ತು 1ರಿಂದ 10 ನೇ ತರಗತಿಯವರೆಗೆ ಇರುತ್ತದೆ, ಮಕ್ಕಳಿಗೆ ಅನುಭವಿ ಅಧ್ಯಾಪಕರಿಂದ ಆಂಗ್ಲ ಮಾಧ್ಯಮದಲ್ಲಿ ಉತ್ತಮ ಶಿಕ್ಷಣ ನೀಡಲಾಗುವುದು. ಮಕ್ಕಳಿಗೆ ನೋಡಿಕೊಳ್ಳಲು ಉತ್ತಮ ಸಹಾಯಕಿಯರ ವ್ಯವಸ್ಥೆ ಇರುತ್ತದೆ. ಆಟಿಕೆಗಳ ವ್ಯವಸ್ಥೆ ಇದೆ. ಪ್ರತೀ ತರಗತಿಯಲ್ಲಿ ಗರಿಷ್ಠ 40 ಮಕ್ಕಳಿಗೆ ಅವಕಾಶ ಹಾಗೂ ಮೊದಲು ಬಂದವರಿಗೆ ಆದ್ಯತೆ.ಎಲ್ಲಾ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಆಳವಡಿಕೆ, ಮಕ್ಕಳ ಆರೋಗ್ಯದ ಕಡೆಗೆ ಹಾಗೂ ಶಿಸ್ತು ಪಾಲನೆಗೆ ಅತೀ ಹೆಚ್ಚಿನ ಗಮನ ನೀಡಲಾಗುವುದು. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಕುರಿತು ಪ್ರತಿ ತಿಂಗಳು ಪೋಷಕರ ಸಭೆ ಕರೆದು ಅನುಭವಿ ಉಪನ್ಯಾಸಕರಿಂದ ಪೋಷಕರಿಗೆ ಮಾಹಿತಿ ನೀಡಲಾಗುವುದು. ಮಕ್ಕಳಿಗೆ ಹಾಗೂ ಪೋಷಕರಿಗೆ 1500ಕ್ಕೂ ಹೆಚ್ಚು ಪುಸ್ತಕಗಳಿರುವ ಸುಸಜ್ಜಿತ ಗ್ರಂಥಾಲಯವಿದೆ. ನಮ್ಮಲ್ಲಿ ಮಕ್ಕಳಿಗೆ ಸ್ಕೌಟ್ ಮತ್ತು ಗೈಡ್ಸ್ ತರಗತಿ ಹಾಗೂ ಕರಾಟೆ, ಚಿತ್ರಕಲೆ, ಕ್ರಾಫ್ಟ್, ಅಬಾಕಸ್, ನೃತ್ಯ, ಚೆಸ್ ತರಗತಿ ಲಭ್ಯವಿದೆ. ಶಾಲಾ ಮಕ್ಕಳಿಗೆ ವಾಹನ ಸೌಲಭ್ಯವಿರುತ್ತದೆ. ಎಲ್ಲಾ ಧರ್ಮದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ದೀಪಾವಳಿ, ರಮ್ಜಾನ್, ಕ್ರಿಸ್‍ಮಸ್ ಆಚರಿಸಲಾಗುವುದು. ನಮ್ಮ ಶಾಲೆಯ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕ್ಯಾಮರಗಳ ಅಳವಡಿಕೆ ಮಾಡಲಾಗಿದೆ. 2020-21 ಸಾಲಿನಿಂದ ICSE ಪಠ್ಯಕ್ರಮ ಅಳವಡಿಕೆ ಮಾಡಲಾಗುತ್ತಿದೆ ಎನ್ನುತ್ತಾರೆ ಸಂಸ್ಥೆಯ ಸಂಚಾಲಕರಾದ ಕೋಳ್ಕೆರೆ ಅರುಣಕುಮಾರ್ ಶೆಟ್ಟಿ ಅವರು. ಒಟ್ಟಾರೆಯಾಗಿ ಈ ವಿದ್ಯಾಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕಾಗಿ ಗಮನ ಸಳೆಯುತ್ತಿದೆ.

ದಾಖಲಾತಿಗೆ ಸಂಪರ್ಕಿಸಿ: 
ದೂ : 08254-237058, ಮೊ : 7090678272


“ಚಾರಿತ್ರಿಕ, ಐತಿಹಾಸಿಕ ಪಟ್ಟಣ ವಾಗಿರುವ ಬಸ್ರೂರಿನ ಬಡ ಮಧ್ಯಮ ವರ್ಗದ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಂಗ್ಲಮಾಧ್ಯಮ ಶಿಕ್ಷಣ ಹತ್ತಿರದಲ್ಲಿಯೇ ದೊರಕಬೇಕು ಎನ್ನುವ ಮಹತ್ವಕಾಂಕ್ಷೆ ಯಿಂದ ಉತ್ತಮ ಶಿಕ್ಷಣವನ್ನು ಸಮಾಜ ಗುರುತಿಸುತ್ತದೆ ಎನ್ನುವುದಕ್ಕೆ ನಮ್ಮ ಸಂಸ್ಥೆ ಸಾಕ್ಷಿಯಾಯಿತು. ಪ್ರಸ್ತುತ 600ಕ್ಕೂ ಹೆಚ್ಚು ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ದಶಮಾನೋತ್ಸವವನ್ನು ಸಂಸ್ಥೆ ಆಚರಿಸಿಕೊಂಡು ಬಸ್ರೂರು ಮಾತ್ರವಲ್ಲ ಸುತ್ತಮುತ್ತಲ ಗ್ರಾಮಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿದ್ದೇವೆ ಎನ್ನುವ ತೃಪ್ತಿ ನಮಗಿದೆ. ಗುಣಮಟ್ಟದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.
♦ಕೋಳ್ಕೆರೆ ಅರುಣಕುಮಾರ್ ಶೆಟ್ಟಿ, ಸಂಚಾಲಕರು.


55 ಮಕ್ಕಳಿಂದ ಆರಂಭವಾದ ಈ ಶಿಕ್ಷಣ ಸಂಸ್ಥೆ ಇವತ್ತು 600 ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಮಗುವಿನ ವ್ಯಕ್ತಿತ್ವ ವಿಕಸನ, ಮಗುವಿನಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಬಂದಿದ್ದೇವೆ. ಸಂಸ್ಥೆಯ ಮುಖ್ಯಸ್ಥರ ಶಿಕ್ಷಣದ ಬಗೆಗಿನ ಚಿಂತನೆಗಳು, ಪೋಷಕರಮೆಚ್ಚುಗೆಯ ಮಾತುಗಳು ಶಿಕ್ಷಕವೃಂದಕ್ಕೆ ಸ್ಪೂರ್ತಿಯುತವಾಗಿದೆ. ಪ್ರತಿಯೊಂದು ಮಗುವಿಗೂ ಉತ್ತಮವಾದ ಶಿಕ್ಷಣ ಬಾಲ್ಯದಿಂದಲೇ ಸಿಗಬೇಕು. ಅದನ್ನು ನೀಡುವಲ್ಲಿ ಈ ಸಂಸ್ಥೆ ಸದಾ ಸಿದ್ಧವಿದೆ”                                                                                                                  ವಿಲ್ವಾ ಡಿಸಿಲ್ವಾ, ಪ್ರಾಂಶುಪಾಲರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!