Sunday, September 8, 2024

ಕ್ರೀಡಾ ಧ್ರುವತಾರೆ ಮೇಜರ್ ಧ್ಯಾನ್ ಚಂದ್

“ಶರೀರಮಾದ್ಮಂ ಖಲುಧರ್ಮಸಾಧನಂ”
ಎಂಬುದೊಂದು ಪುರಾತನ ನುಡಿ ಬಹಳ ಅರ್ಥಪೂರ್ಣವಾದ ಮಾತು ಇದಾಗಿದೆ. ಯಾವುದೇ ಸಾಧನೆಯ ಸಿದ್ದಿ ಆರೋಗ್ಯ ಪೂರ್ಣ ಶರೀರದಿಂದ ಮಾತ್ರ ಸಾಧ್ಯ.ನಿಜವಾದ ದೇವರ ಪೂಜೆಯೇ ಶರೀರವನ್ನು ಸಾಸ್ಥ್ಯಪೂರ್ಣವಾಗಿ ಇಟ್ಟುಕೊಳ್ಳುವುದಾಗಿದೆ. ನಮ್ಮ ದೇಹವು ಆರೋಗ್ಯಪೂರ್ಣ ಸ್ವಾಸ್ಥ್ಯ ಪೂರ್ಣವಾಗಿರಲು ಕ್ರೀಡೆಗಳು ಮುಖ್ಯವಾದ ಪಾತ್ರ ವಹಿಸುತ್ತವೆ. ಶರೀರಕ್ಕೆ ವ್ಯಾಯಾಮ ಬುದ್ದಿಗೆ ಕಸರತ್ತನ್ನು ಹಾಗೂ ಮನಸ್ಸಿಗೆ ಮನರಂಜನೆಯನ್ನು ನೀಡುವುದು ಕ್ರೀಡೆಗಳು ಇಂತಹ ಮಹತ್ವವುಳ್ಳ ಕ್ರೀಡೆಗಳ ದಿನವನ್ನಾಗಿ ಆಗೋಸ್ತು 29 ರಾಷ್ಟ್ರದೆಲ್ಲೆಡೆ ರಾಷ್ಟ್ರೀಯ ಕ್ರೀಡಾದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಅದಕ್ಕೆ ಕಾರಣ ಮೇಜರ್ ಧ್ಯಾನ್ ಚಂದ್
ಧ್ಯಾನ್‍ಚಂದ್ ಎಂಬ ಧ್ರುವತಾರೆ ಈಗ ಬದುಕಿದ್ದರೆ ಭಾರತದಲ್ಲಿ ಕ್ರೀಡಾಜಗತ್ತನ್ನು ಜಾಹೀರಾತು ಜಗತ್ತನ್ನೇ ಆಳುತ್ತಿರುವ ಕ್ರಿಕೆಟ್ ಪಟುಗಳು ಕೂಡ ಹಿಂದೆ ಸರಿಯುವಂತಹ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ ಇಂದು ಒಲಿಂಪಿಕ್‍ನಲ್ಲಿ ಕಂಚಿನ ಪದಕವೋ ಬೆಳ್ಳಿಯ ಪದಕವೋ ಬಂದರೆ ಮುಂದಿನ ಒಲಿಂಪಿಕ್‍ವರೆಗೂ ಸಂಭ್ರಮಿಸುತ್ತೇವೆ. ಹೀಗಿರುವ ಸ್ವಾತಂತ್ರ್ಯ ಪೂರ್ವದಲ್ಲೇ ಭಾರತಕ್ಕೆ ಒಂದಲ್ಲ, ಎರಡಲ್ಲ ಸತತ ಮೂರು ಒಲಿಂಪಿಕ್‍ಗಳಲ್ಲಿ ಚಿನ್ನಗೆದ್ದು ಕೊಟ್ಟ ಧ್ಯಾನ್‍ಚಂದ್ ಸಾಧನೆ ಸಾಧಾರಣವಲ್ಲ.

ಧ್ಯಾನ್ ಚಂದ್ ವಿಶ್ವಕ್ರೀಡಾ ಇತಿಹಾಸದಲ್ಲಿ ಅವಿಸ್ಮರಣೀಯರು. ಅವರ ಹಾಕಿ ಆಟಕ್ಕೆ ಮನಸೋಲದವರೇ ಇಲ್ಲ.ತಮ್ಮ ಅದ್ಬುತ ಆಟದಿಂದಾಗಿ ಮನ ಸೋಲದವರೇ ಇಲ್ಲ. ತಮ್ಮ ಅದ್ಬುತ ಆಟದಿಂದಾಗಿ ಎದುರಾಳಿ ತಂಡದವರನ್ನು ಮತ್ತು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿದ್ದ ಧ್ಯಾನ್‍ಚಂದ್ ನಿಜವಾಗಿಯೂ ಭಾರತೀಯರ ಹೆಮ್ಮೆ.

ಧ್ಯಾನ್‍ಚಂದ್ ಹುಟ್ಟು ಕ್ರೀಡಾಪಟುವಲ್ಲ. ಕ್ರೀಡೆಯನ್ನು ಅವರು ವಿಶೇಷವಾಗಿ ಅಭ್ಯಾಸ ಮಾಡಲು ಧ್ಯಾನ್‍ಚಂದ್ ಜನಿಸಿದ್ದು ಆಗಸ್ಟ್ 29, 1905ರಲ್ಲಿ ಸ್ಥಳ ಉತ್ತರ ಪ್ರದೇಶದ ಪ್ರಯಾಗ. ಅವರ ತಂದೆ ಭಾರತೀಯರ ಬ್ರಿಟಿಷ್ ಸೈನ್ಯದಲ್ಲಿ ಹವಾಲ್ದಾರರಾಗಿದ್ದರು. ಶಾಲೆಯಿಂದ ಬಹುಬೇಗ ಹೊರನಡೆದ ಧ್ಯಾನ್‍ಚಂದ್ ತಮ್ಮ ಹದಿನಾರನೇ ವಯಸ್ಸಿಗೆ ಸೈನ್ಯಕ್ಕೆ ಸೇರಿದರು. ಸೈನ್ಯದಲ್ಲಿ ಸ್ನೇಹಪೂರ್ಣ ಪಂದ್ಯಗಳಲ್ಲಿ ಎಲ್ಲರೊಂದಿಗೆ ಆಡುತ್ತಿದ್ದರು. ಈತ ಆಡುವ ಆಟದಲ್ಲಿ ಏನೋ ವಿಶೇಷವಿದೆ. ಎಂದು ಕಂಡ ಸುಭೇದಾರ್ ಮೇಜರ್ ಭೋಲೇತಿವಾರಿ ವೈಯಕ್ತಿಕವಾಗಿ ನಿಗಾವಹಿಸಿ ಹಾಕಿ ಆಟದ ವಿಶೇಷತೆಗಳ ಬಗೆಗೆ ಉತ್ತಮ ತರಬೇತಿ ನೀಡಿದರು.ಅಂದಿನ ಭಾರತೀಯ ಸೈನ್ಯದಲ್ಲಿ ಹಾಗೂ ವಿವಿಧ ವಲಯಗಳ ತಂಡಗಳ ಮಟ್ಟದಲ್ಲಿ ಆಡತೊಡಗಿದ್ದು ಧ್ಯಾನ್‍ಚಂದ್ ಹಲವು ಅಂತರಾಷ್ಟ್ರೀಯ ಪಂದ್ಯಗಳ ಬಳಿಕ ಒಲಿಂಪಿಕ್ಸ್ ಪಂದ್ಯಾವಳಿಗೆ ತಲುಪಿ ತಾವು ಆಡಿದ ಮೂರು ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಭಾರತಕ್ಕೆ ಚಿನ್ನದ ಪದಕ ದೊರೆಕುವಲ್ಲಿ ಮಹತ್ತರವಾದ ಪಾತ್ರ ವಹಿಸಿದರು.

ಒಮ್ಮೆ ಧ್ಯಾನ್‍ಚಂದ್ ಅವರು ಆಡಿದ ಪಂದ್ಯದಲ್ಲಿ ಅವರಿಗೆ ಒಂದು ಗೋಲುಗೊಳಿಸಲು ಸಾಧ್ಯವಾಗಲಿಲ್ಲವಂತೆ. ಕಡೆಗೆ ಧ್ಯಾನ್‍ಚಂದ್‍ರ ವರ ಮ್ಯಾಚ್ ರೆಪರಿ ಅವರೊಂದಿಗೆ ವಾಗ್ವಾದ ಮಾಡಿ ನೇರವಾಗಿ “ಕ್ರೀಡಾಂಗಣದಲ್ಲಿರುವ ಗೋಲ್ ಪೋಲು ಅಳತೆ ಅಸಮರ್ಪಕವಾದುದು ಹಾಕಿ ಆಟದ ಅಂತರಾಷ್ಟ್ರೀಯ ನಿಯಾಮವಳಿಗೆ ವ್ಯತಿರಿಕ್ತವಾದದ್ದು” ಎಂದು ನುಡಿದರಂತೆ. ಧ್ಯಾನ್‍ಚಂದ್ ಅವರ ಅಭಿಪ್ರಾಯವನ್ನು ಮನ್ನಿಸಿ ನಿಜವಾದ ಅಳತೆ ಮಾಡಿದಾಗ ಧ್ಯಾನ್‍ಚಂದ್ ಅವರ ಅಭಿಪ್ರಾಯ ಅಕ್ಷರಷಃ ನಿಜವಾಗಿತ್ತು.

1936ರ ಒಲಿಂಪಿಕ್ಸ್ ಪಂದ್ಯದಲ್ಲಿ ಭಾರತ ತಂಡವು ಜಯಗಳಿಸಿದ ನಂತರದಲ್ಲಿ ಎಲ್ಲೆಡೆಯಲ್ಲೂ ಧ್ಯಾನ್‍ಚಂದ್ ಅವರ ಹಾಕಿ ಮಾಂತ್ರಿಕತೆಯ ಆಟಪ್ರಸಿದ್ದಿ ಪಡೆದು, ಪ್ರೇಕ್ಷಕರು ಇವರ ಆಟ ನೋಡಲು ಮೂಗಿಬೀಳುತ್ತಿದ್ದರು. ಒಂದು ಜರ್ಮನ್ ಪತ್ರಿಕೆ “ಹಾಕಿ ಆಟ ಇದೀಗ ಮ್ಯಾಜಿಕ್ ಷೋ ಕೂಡ ಆಗಿದೆ. ಭಾರತೀಯ ಹಾಕಿ ಆಟದ ಮ್ಯಾಜಿಕ್ ವ್ಯಕ್ತಿಯಾದ ಧ್ಯಾನ್‍ಚಂದ್ ಅವರ ಆಟ ನೋಡಲಿಕ್ಕೆ ಇಂದು ಹಾಕಿ ಕ್ರೀಡಾಂಗಣಕ್ಕೆ ತಪ್ಪದೇ ಬನ್ನಿ” ಎಂದು ವರದಿ ನೀಡಿತ್ತು.

ಬರ್ಲಿನ್ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಧ್ಯಾನ್‍ಚಂದ್ ಅವರ ಆಟ ಕಂಡ ಅಡೋಲ್ಫ್ ಹಿಟ್ಲರ್ ಧ್ಯಾನ್‍ಚಂದ್ ಅವರಿಗೆ ಬ್ರಿಟಿಷ್ ಸೇನೆಯಲ್ಲಿ ಮೇಜರ್ ಹುದ್ದೆ ಜರ್ಮನಿಯ ಪೌರತ್ವ, ಕೊಲೋನೆಲ್ ಗೌರವದ ಕೊಡುಗೆ ನೀಡಲು ಆಹ್ವಾನಿಸಿದರು. ಆದರೆ ಇದನ್ನು ತಿರಸ್ಕರಿಸಿದ ಧ್ಯಾನ್‍ಚಂದ್‍ರು ನಾನೊಬ್ಬ ಅಪ್ಪಟ ಭಾರತೀಯ, ಭಾರತದಲ್ಲೇ ನಾನು ಹಾಯಾಗಿದ್ದೇನೆ. ಎಂದು ನಯವಾಗಿ ಹೇಳಿ ದೇಶಪ್ರೇಮ ಮೆರೆದಿದ್ದರು. ಧ್ಯಾನ್‍ಚಂದ್ ಜನಪ್ರಿಯತೆ ಎಷ್ಟಿಂದರೆ ಭಾರತಕ್ಕೂ ಮೊದಲೇಅವರ ಪುತ್ಥಳಿಯನ್ನು ಆಸ್ಟ್ರಿಯಾದ ವಿಯಾನ್ನಾದಲ್ಲಿ ಸ್ಥಾಪಿಸಲಾಗಿತ್ತು. ಹೀಗೇ ಭಾರತದ ಒಬ್ಬ ಆಟಗಾರ ತನ್ನ ಮಹೋನ್ನತ ಸಾಧನೆಗಳಿಂದ ದಂತ ಕಥೆಯಾಗಿರುವುದು ಭಾರತೀಯರಿಗೆಲ್ಲಾ ಮಹೋನ್ನತವಾದ ಹೆಮ್ಮೆ.

-ಶಂಕರ್ ಪಿ.ಹಿಲಿಯಾಣ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!