spot_img
Thursday, May 7, 2026
spot_img

ಜಿಲ್ಲಾ ಮಟ್ಟದ ಭತ್ತದ ಬೆಳೆ ಸ್ಪರ್ಧೆಯಲ್ಲಿ ಅರೆಶಿರೂರು ಗೌತಮ್ ಕೆ.ಶೆಟ್ಟಿ ಅವರಿಗೆ ಪ್ರಶಸ್ತಿ

ಕುಂದಾಪುರ: ರೈತರಿಗೆ ಪ್ರೋತ್ಸಾಹ ಮತ್ತು ಬೆಂಬಲ ಯೋಜನೆಯ ಕೃಷಿ ಪ್ರಶಸ್ತಿ ಕಾರ್ಯಕ್ರಮದಡಿ ೨೦೨೪ರ ಮುಂಗಾರು ಹಂಗಾಮಿನ ಮಳೆಯಾಶ್ರಿತ ಭತ್ತದ ಬೆಳೆ ಜಿಲ್ಲಾ ಮಟ್ಟದ ಸ್ಪರ್ಧೆ ಸಾಮಾನ್ಯ ವಿಭಾಗದಲ್ಲಿ ಬೈಂದೂರು ಹೋಬಳಿಯ ಗೋಳಿಹೊಳೆ ಗ್ರಾಮದ ಅರೆಶಿರೂರು ಗೌತಮ್ ಕೆ.ಶೆಟ್ಟಿ ಅವರಿಗೆ ಪ್ರಥಮ ಸ್ಥಾನ ಲಭಿಸಿದೆ.
ಗೌತಮ್ ಶೆಟ್ಟಿಯವರು ಗೋಳಿಹೊಳೆ ಗ್ರಾಮದ ಚುಚ್ಚಿಮನೆದ ದಿ.ಕೊರಗಯ್ಯ ಶೆಟ್ಟಿ ಮತ್ತು ವಿಶಾಲ ಶೆಟ್ಟಿಯವರ ಪುತ್ರರಾಗಿ ಜನಿಸಿ, ಕುಡೂರು, ಗೋಳಿಹೊಳೆ, ಕೊಲ್ಲೂರು, ನಾವುಂದ, ಭಟ್ಕಳದಲ್ಲಿ ಪದವಿ ತನಕ ಶಿಕ್ಷಣ ಪಡೆದರು. ಬಳಿಕ ಉದ್ಯೋಗ ಅರಸಿ ಬೆಂಗಳೂರಿಗೆ ತೆರಳಿದರು. ಅಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಲಭಿಸಿದರೂ ಕೃಷಿ ಮೇಲಿನ ಆಸಕ್ತಿಯಿಂದ ಹುಟ್ಟೂರಿಗೆ ಮರಳಿ ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಂಡರು. ಪದವಿಧರ ಯುವಕ ಗೌತಮ್ ಶೆಟ್ಟಿಯವರು ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು ಮಾದರಿಯಾಗಿ ರೂಪುಗೊಂಡರು. ಹೈನುಗಾರಿಕೆಯ ಬಗ್ಗೆ ಸ್ಥಳೀಯ ಅಸಂಘಟಿಯ ಹೈನುಗಾರರಿಗೆ ಮಾರ್ಗದರ್ಶನ ನೀಡಿ, ಹಾಲು ಉತ್ಪಾದಕರ ಸಹಕಾರ ಸಂಘವನ್ನು ಹುಟ್ಟುಹಾಕಿ ಅರೆಶಿರೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಬ್ಬರ್ ಕೃಷಿಕರ ಸಂಘದ ಕಾರ್ಯದರ್ಶಿಯಾಗಿ, ಮಲ್ಲಿಗೆ ಬೆಳೆಗಾರರಿಗೆ ಮಾರ್ಗದರ್ಶಕರಾಗಿ, ತೋಟಗಾರಿಕೆ ಬೆಳೆಗಳ ಬಗ್ಗೆ ಆಸಕ್ತ ರೈತರಿಗೆ ಮಾರ್ಗದರ್ಶನ ಮಾಡುತ್ತಾ ತಾನೋಬ್ಬ ಕೃಷಿಕನಾಗಿ ಇತರ ಕೃಷಿಕರನ್ನು ಬೆಳೆಸುತ್ತಾ ಬಂದಿದ್ದಾರೆ. ಕೃಷಿಯಲ್ಲಿ ಸುಧಾರಿತ ವಿಧಾನಗಳ ಅನುಷ್ಟಾನ, ಪ್ರಯೋಗಗಳು, ಪ್ರಾತ್ಯಕ್ಷಿಕೆಗಳ ಮೂಲಕ ಜಿಲ್ಲೆಯ ಗಮನ ಸಳೆದಿದ್ದಾರೆ. ಭತ್ತ, ತೆಂಗು, ಅಡಿಕೆ, ಏಲಕ್ಕಿ, ಮಲ್ಲಿಗೆ, ಹಲಸು ಮೊದಲಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹೈನುಗಾರಿಕೆ, ಜೇನು ಸಾಕಾಣಿಕೆ, ಕೋಳಿ ಸಾಕಾಣಿಕೆಯಲ್ಲೂ ತೊಡಗಿಸಿಕೊಂಡು ಸಮಗ್ರ ಕೃಷಿಕರಾಗಿದ್ದಾರೆ. ಇವರ ಕೃಷಿ ಸಾಧನೆಗೆ ಇತ್ತೀಚೆಗೆ ವೆಂಕಟರಮಣ ಕಾಲೇಜಿನ ಬ್ಯುಸಿನೆಸ್ ಡೇ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!