spot_img
Tuesday, March 24, 2026
spot_img

ಸನಾತನ ಹಿಂದೂ ಧರ್ಮವೇ ಶ್ರೇಷ್ಠ- ವಾಸುದೇವ ಜೋಯಿಸ್ ತಟ್ಟುವಟ್ಟು

ಬೆಳ್ವೆ: ಉತ್ತಮ ಹಿತ ಚಿಂತನೆಗಳೊಂದಿಗೆ ಹಿಂದುತ್ವವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಪೂರಕವಾಗಲಿದೆ. ಬಾಂಗ್ಲ ದೇಶ ಹಾಗೂ ಗಡಿ ಭಾಗದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹೇಯ ಕೃತ್ಯಗಳು ಖಂಡನೀಯ. ಹಿಂದೂಗಳ ಮನೆಮನೆಯಲ್ಲಿಯೂ ಹಿಂದುತ್ವ ಹಾಗೂ ಧರ್ಮ ಪಾಲನೆಯ ಕಾರ್ಯವಾಗಬೇಕು. ಜಾತಿ ಭಾಷೆಗಳ ಮೂಲಕ ಶೇಷ್ಠ ಸನಾತನ ಹಿಂದೂ ಧರ್ಮಕ್ಕೆ ದ್ರೋಹ ಎಸಗುವ ಹೇಡಿಗಳನ್ನು ಮಟ್ಟ ಹಾಕುವ ಕೆಲಸವಾಗಬೇಕು. ಭಾರತಕ್ಕೆ ಸನಾತನ ಹಿಂದೂ ಧರ್ಮವೇ ಶ್ರೇಷ್ಠ ಎಂದು ವೇ.ಮೂ.ವಾಸುದೇವ ಜೋಯಿಸ್ ತಟ್ಟುವಟ್ಟು ಹೇಳಿದರು.

ಅವರು ಹಿಂದೂ ಸಂಗಮ ಅಯೋಜನಾ ಸಮಿತಿ ಹೆಬ್ರಿ ತಾಲೂಕು ಬೆಳ್ವೆ ವಲಯದ ವತಿಯಿಂದ ಬೆಪ್ಡೆ ಕುದ್ರುಬೀಡು, ಕೊಳ್ಕೆಬೈಲು ಶ್ರೀ‌ಉಮಾಮಹೇಶ್ವರ ದೇವಳದಲ್ಲಿ ನಡೆದ ಹಿಂದೂ ಸಂಗಮದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಳ್ವೆ ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಎಚ್ ವಸಂತಕುಮಾರ್ ಶೆಟ್ಟಿ ಬೆಳ್ವೆ ಅಧ್ಯಕ್ಷತೆ ವಹಿಸಿದ್ದರು.
ಭಾರತ್ ವಿಕಾಸ ಪರಿಷತ್ ರಾಜ್ಯ ಪ್ರಮುಖ್ ಗುರುನಾಥ ರಾವ್ ಬೌಧಿಕ್ ನೀಡಿದರು.

ಶಾಸಕ ಎ. ಕಿರಣ್‌ಕುಮಾರ್ ಕೊಡ್ಗಿ, ಭಾರತ್ ವಿಕಾಸ ಪರಿಷತ್ ಗುರುನಾಥ ರಾವ್, ವೇ.ಮೂ.ಶ್ರೀನಿವಾಸ ಬಾಯರಿ ಬೆಪ್ಡೆ, ಬೆಳ್ವೆ ವಲಯ ಹಿಂದೂ ಸಂಗಮ ಆಯೋಜನಾ ಸಮಿತಿ ಉಪಾಧ್ಯಕ್ಷ ಜಿ ಎಸ್ ಚಂದ್ರ ಆಚಾರ್ಯ ಗೋಳಿಯಂಗಡಿ,ಉಪಾಧ್ಯಕ್ಷ ಕೃಷ್ಣ ನಾಯ್ಕ ಸೆಟ್ಟೋಳಿ,ಸಂಚಾಲಕ ಶ್ರೀಧರ ಹೆಗ್ಡೆ ಅಗಳಿಬೈಲು, ಸೀತಾರಾಮ ಪೂಜಾರಿ ಬೆಪ್ಡೆ, ಸಹ ಸಂಚಾಲಕ ರಾಜೀವ ಕುಲಾಲ ಬೆಪ್ಡೆ, ರವಿಪ್ರಕಾಶ್ ಹೆಗ್ಡೆ ಶೇಡಿಮನೆ, ಆನಂದ ನಾಯ್ಕ ಬೆಪ್ಡೆ, ಮಹಿಳಾ ಪ್ರಮುಖ್ ಉಷಾಪ್ರಕಾಶ ಶೆಟ್ಟಿ ಬೆಪ್ಡೆ, ನ್ಯಾಯವಾದಿ ಚಂದ್ರಶೇಖರ ಬೆಪ್ಡೆ, ಕೃಷ್ಣ ಪುತ್ರನ್ ಆರ್ಡಿ,ಕುದ್ರುಬೀಡು,ಕೊಳ್ಕೆಬೈಲು ಶ್ರೀ‌ಉಮಾಮಹೇಶ್ವರ ದೇವಳದ ಮೊಕ್ತೇಸರ ಅಶೋಕ ಶೆಟ್ಟಿ ಬೆಪ್ಡೆ, ಪ್ರಮುಖರಾದ ಬಿ.ಗಣೇಶ್ ಕಿಣಿ ಬೆಳ್ವೆ, ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ವೈ ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ,ಎಸ್ ಚಂದ್ರಶೇಖರ ಶೆಟ್ಟಿ ಸುರ್‍ಗೋಳಿ, ಬಿ ಉದಯಕುಮಾರ್ ಪೂಜಾರಿ ಬೆಳ್ವೆ, ಸುದರ್ಶನ್ ಶೆಟ್ಟಿ ಆರ್ಡಿ ಮತ್ತು ಗೋಳಿಯಂಗಡಿ, ಬೆಳ್ವೆ,ಸೂರ್‍ಗೋಳಿ, ಗುಮ್ಮೋಲ, ಅಲ್ಬಾಡಿ, ಹೊನ್ಕಲ್ಲು, ಆರ್ಡಿ, ಕೊಂಜಾಡಿ, ಮಾಂಡಿಮೂರುಕೈ, ಬೆಪ್ಡೆ, ಗುಡ್ಡೆಯಂಗಡಿ, ಅರಸಮ್ಮಕಾನು, ಮಾಯಾಬಜಾರ್, ಮಡಾಮಕ್ಕಿ, ಶೇಡಿಮನೆ,ಹೆಂಗವಳ್ಳಿ, ತೊಂಬತ್ತು ಪರಿಸರದ ಪ್ರಮುಖರು ಹಾಗೂ ಇನ್ನೀತರರು ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!