spot_img
Tuesday, March 24, 2026
spot_img

ಗಂಗೊಳ್ಳಿ: ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ಮಾರಿ ಜಾತ್ರೆ

ಗಂಗೊಳ್ಳಿ: ಗಂಗೊಳ್ಳಿ ಖಾರ್ವಿಕೇರಿಯ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ಪ್ರಸಿದ್ಧ ಮಾರಿ ಜಾತ್ರೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ಸಂಪನ್ನಗೊಂಡಿತು.

ಮಂಗಳವಾರ ಸಂಜೆ ದೇವಸ್ಥಾನದ ಎದುರುಗಡೆ ಇರುವ ನಾಗಬನದಲ್ಲಿ ಪೂಜೆ ಹಾಗೂ ಶ್ರೀ ಮಳಿಯಾಳಿ ಬೊಬ್ಬರ್ಯ ದೇವರ ಪೂಜೆ, ರಾತ್ರಿ ಗುರು ಜಟ್ಟಿಗ ದೇವರ ಪೂಜೆ, ಸಮುದ್ರದಿಂದ ಗಂಗೆ ತೀರ್ಥ ತಂದ ಬಳಿಕ ದೇವರಿಗೆ ಮಹಾಪೂಜೆ, ಹರಕೆ ಸೇವೆ, ಮಹಿಳೆಯರಿಂದ ಮಡಿಲು ತುಂಬುವ ಸೇವೆ ನಡೆಯಿತು.

ಬುಧವಾರ ಬೆಳಿಗ್ಗೆ ದೇವರ ಸಂದರ್ಶನ, ಮಂಗಳಾರತಿ, ಪೂಜಾ ಕಾರ್ಯಕ್ರಮ, ಸಂಜೆ ಪ್ರಸಾದ ವಿತರಣೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ವಿಜೃಂಭಣೆಯಿಂದ ನಡೆಯಿತು. ಊರ ಪರ ಊರಿನ ಸಹಸ್ರಾರು ಮಂದಿ ದೇವರ ದರ್ಶನ ಪಡೆದು ಪೂಜೆ, ಹರಕೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ದೇವಸ್ಥಾನದ ಅರ್ಚಕರು, ಪುರೋಹಿತರು, ದೇವಸ್ಥಾನದ ಆಡಳಿತ ಸಮಿತಿ ಸದಸ್ಯರು, ಆರು ಜನ ಪಟೇಲರು, ಹನ್ನೆರಡು ಜನ ಮೊಕ್ತೇಸರರು, ಮಹಿಳಾ ಸೇವಾ ಸಮಿತಿ ಸದಸ್ಯರು, ಹತ್ತು ಸಮಸ್ತರು ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!