spot_img
Tuesday, March 24, 2026
spot_img

ತೊಂಬತ್ತು: ಶ್ರೀಮಹಾಲಿಂಗೇಶ್ವರ ದೇವಳ ಸಪ್ತಮ ವರ್ಧಂತ್ಯುತ್ಸವ ಸಂಪನ್ನ

ಗೋಳಿಯಂಗಡಿ: ಹೆಂಗವಳ್ಳಿ ಗ್ರಾಮದ ತೊಂಬತ್ತು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಪ್ತಮ ವರ್ಷದ ವರ್ಧಂತ್ಯುತ್ಸವವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಇತ್ತೀಚೆಗೆ ಸಂಪನ್ನಗೊಂಡಿದೆ.

ಪಂಚವಿಶಂತಿ ದ್ರವ್ಯ ಕಲಶ ಪ್ರಧಾನ ಹೋಮ,ಗಣಹೋಮ,ದುರ್ಗಾಹೋಮ,ರುದ್ರಾಭಿಷೇಕ,ಮಹಾಪೂಜೆ,ಶ್ರೀನಾಗದೇವರಿಗೆ ಹಾಗೂ ಬ್ರಹ್ಮಸ್ಥಾನದ ಪರಿವಾರ ದೇವರಿಗೆ ನವಕ ಪ್ರಧಾನ ಹೋಮ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ,ಅನ್ನ ಸಂತರ್ಪಣೆ,ಭಜನೆ, ರಾತ್ರಿ ಮಹಾರಂಗ ಪೂಜೆ ನಡೆಯಿತು.

ತಂತ್ರಿ ಸದಾಶಿವ ಭಟ್ ಬೇಳಂಜೆ,ತೊಂಬತ್ತು ಅಡಿಗರ ಕುಟುಂಬಸ್ಥರ ಸಹಯೋಗದಲ್ಲಿ ರಾಮಕೃಷ್ಣ ಭಾಗವತ ಹಾಗೂ ಸಹ ಅರ್ಚಕ ವೃಂದವರ ಸಹಕಾರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಬಿ.ನವೀನ್‌ಚಂದ್ರ ಹೆಗ್ಡೆ,ಸರ್ವ ಸದಸ್ಯರು,ಅನುವಂಶಿಕ ಅರ್ಚಕರು ಮತ್ತು ಶ್ರೀನಿವಾಸ ಅಡಿಗ ಹಾಗೂ ಊರ ಪರವೂರ ಭಕ್ತಾಧಿಗಳು ಪಾಲ್ಗೋಂಡಿದ್ದರು.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!