spot_img
Tuesday, March 24, 2026
spot_img

ಮಟಪಾಡಿ ಶಿವರಾಮ ಶೆಟ್ಟಿಯವರು ಯುವಜನತೆಗೆ ಮಾದರಿ-ಗಣನಾಥ ಎಕ್ಕಾರು

ಬ್ರಹ್ಮಾವರ: ಆದರ್ಶವನ್ನು ಬದುಕಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳಲ್ಲಿ ಮತ್ತು ಮಕ್ಕಳಲ್ಲಿ ಕೂಡಾ ಪಾಲನೆ ಮಾಡಿದವರಲ್ಲಿ ನಿವೃತ್ತ ಶಿಕ್ಷಕ ಮಟಪಾಡಿ ಶಿವರಾಮ ಶೆಟ್ಟಿಯವರು ಇಂದಿನ ಜನರಿಗೆ ಮಾದರಿಯಾಗಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲ ಗಣನಾಥ ಎಕ್ಕಾರು ಹೇಳಿದರು.

ಮಂಗಳವಾರ ಬ್ರಹ್ಮಾವರ ಮಟಪಾಡಿಯ ನಿವೃತ್ತ ಶಿಕ್ಷಕ ದಿವಂಗತ ಶಿವರಾಮ ಶೆಟ್ಟಿಯವರು ಮೃತರಾದ ದಿನ ಫೆಬ್ರವರಿ ೩ ರಂದು ೧೦ವರ್ಷದಿಂದ ಅವರ ಮಗ ಬಸ್ರೂರು ರಾಜೀವ ಶೆಟ್ಟಿ ಮತ್ತು ಕುಟುಂಬಿಕರು ಕೊರಗ ಕಾಲೋನಿಯ ಜನರಿಗೆ ನೆರವು ನೀಡುವುದು ಅಶಕ್ತರಿಗೆ ಆರ್ಥಿಕ ನೆರವು, ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಇಂದಿನ ಕಾಲ ಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ಭಾಗವಹಿಸಿದಲ್ಲಿ ಜೀವನ ಮೌಲ್ಯದ ಶಿಕ್ಷಣ ನೀಡಿದಂತಾಗುತ್ತದೆ ಎಂದರು.

ಮಟಪಾಡಿಯಲ್ಲಿ ಶಿವರಾಮ ಶೆಟ್ಟಿಯವರ ಮತ್ತು ಕುಟುಂಭಿಕರ ಜಾಗದಲ್ಲಿ ಸಾರ್ವಜನಿಕವಾಗಿ ರಸ್ತೆಯನ್ನು ನಿರ್ಮಿಸಿದ್ದು ಅದನ್ನು ಹಂದಾಡಿ ಗ್ರಾಮಪಂಚಾಯತಿ ಅಧ್ಯಕ್ಷೆ ಶಾರದಾ ಪೂಜಾರಿ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಪರಿಸರದ ೨೦ ಕುಟುಂಭಗಳಿಗೆ ನಾನಾ ವಸ್ತು ಮತ್ತು ಸಲಕರಣೆ ಆರ್ಥಿಕ ನೆರವು ವಿದ್ಯಾರ್ಥಿಗಳೀಗೆ ಆರ್ಥಿಕ ಪ್ರೋತ್ಸಾಹ ವಿತರಿಸಲಾಯಿತು.

ಶಿವರಾಮ ಶೆಟ್ಟಿಯವರ ಕುಟುಂಭದ ಸದಸ್ಯರಾದ ಮಹಾಬಲ ಶೆಟ್ಟಿ, ಬಸ್ರೂರು ರಾಜೀವ ಶೆಟ್ಟಿ, ಡಾ, ದೇವರಾಜ್, ಡಾ, ಸುರೇಂದ್ರ ಶೆಟ್ಟಿ, ಮನೋಜ್ ಕುಮಾರ್ ಶೆಟ್ಟಿ, ಹಂದಾಡಿ ಗ್ರಾಮಪಂಚಾಯತಿ ಉಪಾಧ್ಯಕ್ಷ ಅಶೋಕ ಪೂಜಾರಿ, ಸದಸ್ಯೆ ಜ್ಯೋತಿ ಬಾಯಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಳಿಕ ಊರ ಜನರೊಂದಿಗೆ ಸಹ ಭೋಜನ ಜರುಗಿತು. ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!