spot_img
Tuesday, February 3, 2026
spot_img

ಹೆಬ್ರಿ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೋಪಾಲ ಶೆಟ್ಟಿ ಶೇಡಿಮನೆ ಆಯ್ಕೆ

ಕುಂದಾಪುರ: ಹೆಬ್ರಿ ತಾಲೂಕು 6ನೇ ಸಾಹಿತ್ಯ ಸಮ್ಮೇಳನ ಶೇಡಿಮನೆ ಗ್ರಾಮದ ಅರಸಮ್ಮಕಾನುವಿನಲ್ಲಿ ಮಾ.1ರಂದು ನಡೆಯಲಿದೆ. ಸಾಹಿತ್ತಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಶೇಡಿಮನೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಕಸಾಪ ಪದಾಧಿಕಾರಿಗಳ ಸಭೆಯಲ್ಲಿ ಅಧಿಕೃತವಾಗಿ ಗೋಪಾಲ ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ದಿ.ಲಕ್ಷ್ಮಣ ಶೆಟ್ಟಿ ಆರ್ಡಿ ಮೇಲ್ಮನೆ ಹಾಗೂ ದಿ.ವೆಂಕಮ್ಮ ಶೆಡ್ತಿ ಮುಡೂರು ಚೇರ್ಕಾಡಿ ಅವರ ಪುತ್ರರಾಗಿ ಮಾರ್ಚ್ 20-1956 ರಂದು ಜನಿಸಿದ ಇವರು, ಶೇಡಿಮನೆ ಸ.ಕಿ.ಪ್ರಾ.ಶಾಲೆಯಲ್ಲಿ 1ರಿಂದ 3ನೇ ತರಗತಿ ಶಿಕ್ಷಣ, 4ರಿಂದ 7ನೇ ತರಗತಿ ತನಕ ಸ.ಹಿ.ಪ್ರಾ.ಶಾಲೆ ಶೇಡಿಮನೆ, ಪ್ರೌಢಶಿಕ್ಷಣವನ್ನು ಸ.ಪ್ರೌ.ಶಾಲೆ ಅಲ್ಬಾರ್ಡಿ ಆರ್ಡಿ, ಪದವಿ ಪೂರ್ವ ಶಿಕ್ಷಣ ಸ.ಪ.ಪೂ ಕಾಲೇಜು ಹೆಬ್ರಿ, ಬಸ್ರೂರು ಶಾರದಾ ಕಾಲೇಜಿನಲ್ಲಿ ಬಿ.ಎ ಪದವಿ ಶಿಕ್ಷಣ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಶಿಕ್ಷಣ, ಚಿಕ್ಕಮಗಳೂರು ಎಂ.ಎಲ್.ಎಂ.ಎನ್ ಕಾಲೇಜಿನಲ್ಲಿ ವೃತ್ತಿಪರ ಶಿಕ್ಷಣ, ರಾಮಕೃಷ್ಣ ಆಶ್ರಮ, ಮೈಸೂರು ಇಲ್ಲಿ ಕೆ.ಇ.ಎಸ್, ಡಿಪೆÇ್ಲೀಮಾ ಇನ್ ಮಾರಲ್ ಆಂಡ್ ಸ್ಪಿರಿಚುವಲ್ ಎಜುಕೇಶನ್ ಪಡೆದಿದರು.

ಶಿಕ್ಷಣ ಕ್ಷೇತ್ರದಲ್ಲಿ ದಶಕಗಳ ಕಾಲ ವಿವಿಧ ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿರುವ ಇವರು, 1980-85: ಖಾಸಗಿ ಕಂಪನಿಯಲ್ಲಿ ವೃತ್ತಿ ಜೀವನವನ್ನು ಹುಬ್ಬಳ್ಳಿಯಲ್ಲಿ ಆರಂಭಿಸಿದರು. 1986-94: ಸರ್ಕಾರಿ ಶಾಲೆಗಳಲ್ಲಿ (ಆರ್ಡಿ ಮತ್ತು ಹೊಸಂಗಡಿ) ಸಹಶಿಕ್ಷಕರಾಗಿ ಸೇವೆ ಸಲ್ಲಿಸಿದರು. 1994-2002 ಕೆ.ಇ.ಎಸ್ ನಂತರ ನೇರ ನೇಮಕಾತಿ ಮೂಲಕ ಮುಖ್ಯಶಿಕ್ಷಕರಾಗಿ ಸಿದ್ಧಾಪುರ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿದರು. 2002-2004: ಸಮನ್ವಯ ಅಧಿಕಾರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಕುಂದಾಪುರದಲ್ಲಿ ಸೇವೆ ಸಲ್ಲಿಸಿ, 2004-2008 ತನಕ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. 2008-2015 ತನಕ ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 4 ವರ್ಷಗಳ ಕಾಲ ಕುಂದಾಪುರ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿನ ಅಪಾರ ಸೇವೆಯನ್ನು ಗುರುತಿಸಿ ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.
2000-01ರಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, 2011-12ರಲ್ಲಿ ರಾಜ್ಯ ಮಟ್ಟದ ಉತ್ತಮ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಸ್ತಿ, 2014ರಲ್ಲಿ ರಾಷ್ಟ್ರ ಮಟ್ಟದ ಉತ್ತಮ ಕ್ಷೇತ್ರ ಶಿಕ್ಷಣಾಧಿಕಾರಿ “ರಾಷ್ಟ್ರೀಯ ಪ್ರಶಸ್ತಿ”, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವತಿಯಿಂದ ನೀಡಲ್ಪಟ್ಟ ಗೌರವ ಲಭಿಸಿದೆ.

ರೋಟರಿ ಕ್ಲಬ್ ಸಿದ್ಧಾಪುರ ಮತ್ತು ಕುಂದಾಪುರದಲ್ಲಿ ವಿವಿಧ ಹುದ್ದೆಗಳ ಜವಬ್ದಾರಿ ನಿರ್ವಹಿಸಿರುವ ಇವರು, 1996-2000ತನಕ ರೋಟರಿ ಕ್ಲಬ್ ಸಿದ್ಧಾಪುರ, 2013ರಿಂದ ಕುಂದಾಪುರ ರೋಟರಿ ಕ್ಲಬ್ ನಲ್ಲಿ ಸೇವೆ, 2017-18ರಲ್ಲಿ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ರಾಜ್ಯ ಮತ್ತು ರಾಷ್ಟ್ರ ಮಟ್ಟದ ಶಿಕ್ಷಣ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಹಲವಾರು ತರಬೇತಿಗಳಲ್ಲಿ ಭಾಗವಹಿಸಿದ್ದಾರೆ. ಇದೇ ಅವಧಿಯಲ್ಲಿ ಮುಂಬಯಿಯ ಮುಲಂಡ್ ನಲ್ಲಿ ನಡೆದ ರಾಷ್ಟ್ರೀಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಅನುಭವ ಇವರದ್ದು. ಓದು, ಬರಹ ಮತ್ತು ಸಾಮಾಜಿಕ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಪತ್ನಿ ರಜನಿ ಜಿ. ಶೆಟ್ಟಿ, ಪುತ್ರ ಡಾ.ರಾಜ್ ಪಾಲ್ ಶೆಟ್ಟಿ ಬೆಲ್ಜಿಯಂನಲ್ಲಿ ಕೃಷಿ ವಿಜ್ಞಾನಿ, ಸೊಸೆ ಡಾ.ವಿದ್ಯಾ ಬೆಲ್ಜಿಯಂನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್. ಪುತ್ರಿ ಚೈತ್ರಾ ಶೆಟ್ಟಿ, ಅಳಿಯ ಕೃಷ್ಣ ಶೆಟ್ಟಿ ಲಂಡನ್‍ನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್, ಮೊಮ್ಮಗ ಮಾಸ್ಟರ್ ಯುವಿನ್ ಅವರೊಂದಿಗಿನ ಸಂತೃಪ್ತ ಕುಟುಂಬ ಇವರದ್ದು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!