spot_img
Wednesday, December 11, 2024
spot_img

ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾ ರಂಗ ಕೋಟ: ತಿರುಪತಿಯಲ್ಲಿ ಯಕ್ಷಗಾನ ಪ್ರದರ್ಶನ

ಕುಂದಾಪುರ: ಕೋಟದ ಯಕ್ಷಸೌರಭ ಶ್ರೀ ಹಿರೇ ಮಹಾಲಿಂಗೇಶ್ವರ ಕಲಾರಂಗದವರು ಡಿಸೆಂಬರ್ 5  ಗುರುವಾರದಂದು ವಿಶ್ವ ವಿಖ್ಯಾತ ತಿರುಪತಿಯ ಶ್ರೀನಿವಾಸನ ಸನ್ನಿಧಿಯಲ್ಲಿ ದಾಸ ಸಾಹಿತ್ಯ ಪ್ರಾಜೆಕ್ಟ್ ವಿಶೇಷ ಅಧಿಕಾರಿಯವರ ಸಹಕಾರದೊಂದಿಗೆ ಯಕ್ಷ ಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರ ನಿರ್ದೇಶನದಲ್ಲಿ “ವೀರ ಬರ್ಬರೀಕ” ಯಕ್ಷಗಾನ ಪ್ರದರ್ಶನ ಬಹಳ ಅದ್ದೂರಿಯಾಗಿ ಜರುಗಿತು.

ಹಿಮ್ಮೆಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್, ಪ್ರಶಾಂತ್ ಪಡುಕರೆ, ಮದ್ದಳೆ ದೇವದಾಸ್ ರಾವ್ ಕೂಡ್ಲಿ, ಚಂಡೆ ರಾಹುಲ್ ಕುಂದರ್ ಕೋಡಿ ಮುಮ್ಮೆಳದಲ್ಲಿ ಬರ್ಬರೀಕನಾಗಿ ರಾಘವೇಂದ್ರ ಕರ್ಕೇರ ಕೋಡಿ, ಘಟೋತ್ಕಚನಾಗಿ ಗೋಪಾಲಕೃಷ್ಣ ಪೈ, ಕೃಷ್ಣ : ಹರೀಶ್ ಭಂಡಾರಿ ಗಿಳಿಯಾರು ,ಕಾಮಕಟಂಕಟಿ ಶಂಕರ ದೇವಾಡಿಗ ಕಾರ್ಕಡ, ವತ್ಸಲೆ ಪ್ರಶಾಂತ್ ಕೊಳಂಬೆ, ಗಜಕರ್ಣ ರಿತೇಶ್ ಕೊಳಂಬೆ, ಕಪಟ ಮುನಿ ಗಿರೀಶ್ ಗಾಣಿಗ ಬೆಟ್ಲಾಕ್ಕಿ ,ಭೀಮ ಕೃಷ್ಣಯ್ಯ ಉಪ್ಪುಂದ , ಪ್ರಸಾದನದಲ್ಲಿ ಗಣೇಶ್ ಆಚಾರ್ಯ, ಸಂತೋಷ್ ಬಾರ್ಕೂರು, ಸ್ವಸ್ತಿಕ್ ಮತ್ತು ತಂಡ ಸಹಕರಿಸಿದರು ಎಂದು ಯಕ್ಷ ಸೌರಭದ ಕಾರ್ಯದರ್ಶಿ ಶ್ರೀನಾಥ್ ಊರಳ ಮತ್ತು ಅಧ್ಯಕ್ಷ ರಾಘವೇಂದ್ರ ಕರ್ಕೇರ ಕೋಡಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!