spot_img
Wednesday, December 11, 2024
spot_img

ಸ್ಪೀಕರ್ ಓಂ ಬಿರ್ಲಾರನ್ನು ಭೇಟಿ ಮಾಡಿದ ರಾಗಾ | ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ಮನವಿ !

ಜನಪ್ರತಿನಿಧಿ (ನವ ದೆಹಲಿ) : ಸಂಸತ್ ಕಲಾಪಗಳಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿರುವುದರ ನಡುವೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಇಂದು(ಬುಧವಾರ) ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಭೇಟಿ ಮಾಡಿದ್ದಾರೆ.

ತಮ್ಮ ವಿರುದ್ಧ ಬಿಜೆಪಿ ಸಂಸದರು ಮಾಡಿರುವ ಅವಹೇಳನಕಾರಿ ಹೇಳಿಕೆಗಳನ್ನು ದಾಖಲೆಯಿಂದ ತೆಗೆದು ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ರಾಹುಲ್ ಮನವಿ ಮಾಡಿಕೊಂಡಿದ್ದಾರೆ.

ಅದಾನಿ ಪ್ರಕರಣದಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ನನ್ನ ವಿರುದ್ಧ ನಿರಾಧಾರ ಆರೋಪ ಮಾಡುತ್ತಿದೆ. ಆದರೆ, ಇಂತಹ ಯಾವುದೇ ಆರೋಪಗಳಿಂದ ನಾನು ವಿಚಲಿತನಾಗುವುದಿಲ್ಲ ಎಂದು ರಾಗಾ ಹೇಳಿದ್ದಾರೆ. ಡಿಸೆಂಬರ್ 13 ರಿಂದ ಲೋಕಸಭೆಯಲ್ಲಿ ಸಂವಿಧಾನ ಬಗ್ಗೆ ಚರ್ಚೆಗೆ ತಮ್ಮ ಪಕ್ಷ ಬಯಸಿದ್ದು, ಸುಗಮ ಕಲಾಪಕ್ಕೆ ನಾವು ಯತ್ನಿಸಲಿದ್ದೇವೆ ಎಂದು ರಾಗಾ ತಿಳಿಸಿದ್ದಾರೆ.

ಸಂಸತ್ನ ಹೊರಭಾಗದಲ್ಲಿ ವರದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಸ್ಪೀಕರ್ ಜೊತೆಗೆ ಮಾತನಾಡಿದ್ದೇನೆ. ತನ್ನ ವಿರುದ್ಧ ಮಾಡಲಾಗಿರುವ ಅವಹೇಳನಕಾರಿ ಹೇಳಿಕೆಗಳನ್ನು ತೆಗೆದುಹಾಕಬೇಕು ಎಂದು ನಮ್ಮ ಪಕ್ಷದವರು ಹೇಳಿದ್ದಾರೆ. ಅವುಗಳನ್ನು ಪರಿಶೀಲಿಸುವುದಾಗಿ ಸ್ಪೀಕರ್ ಹೇಳಿರುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಎಲ್ಲಾ ರೀತಿಯ ನಿರಾಧಾರ ಆರೋಪಗಳನ್ನು ಮುಂದುವರೆಸಿದೆ. ಆದರೆ, ನಾವು ಸುಗಮ ಕಲಾಪಕ್ಕೆ ಸಹಕರಿಸಲು ನಿರ್ಧರಿಸಿದ್ದೇವೆ. ಬಿಜೆಪಿಯವರು ಏನೇ ಪ್ರಚೋದಿಸಲಿ, ಅವರಿಗೆ ಅವಕಾಶ ಮಾಡಿಕೊಡುತ್ತೇವೆ. ಆದರೆ, ನಾವು ಸುಗಮ ಕಲಾಪ ನಡೆಯಲು ಅವಕಾಶ ಮಾಡಿಕೊಡುವುದಕ್ಕೆ ಯತ್ನಿಸುತ್ತೇವೆ. ಡಿಸೆಂಬರ್ 13 ರಂದು ಸಂವಿಧಾನ ಬಗ್ಗೆ ಚರ್ಚೆಗೆ ಬಯಸಿದ್ದೇವೆ ಎಂದವರು ಹೇಳಿದರು.

ಬಿಜೆಪಿ ಸಂಸದರು ನನ್ನ ಬಗ್ಗೆ ಏನೇ ಮಾತನಾಡಲಿ, ಆದರೆ ಸಂವಿಧಾನದ ಬಗ್ಗೆ ಚರ್ಚೆ ನಡೆಯಬೇಕು. ಇದು ತುಂಬಾ ಸರಳವಾಗಿದೆ. ಅದಾನಿ ವಿಚಾರದ ಬಗ್ಗೆ ಚರ್ಚೆಗೆ ಅವರು(ಬಿಜೆಪಿ) ಸಿದ್ಧರಿಲ್ಲ. ಅದಾನಿ ವಿಚಾರದಿಂದ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ಅಧಿವೇಶನದ ಕೊನೆಯವರೆಗೂ ನಾವು ಅದಾನಿ ವಿಚಾರದಿಂದ ತಪ್ಪಿಸಿಕೊಳ್ಳಲು ಬಿಜೆಪಿಗೆ ಬಿಡುವುದಿಲ್ಲ ಎಂದು ತಿಳಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!