spot_img
Thursday, December 12, 2024
spot_img

ಎಸ್‌ಎಂಕೆ ಮುನ್ನುಡಿಯಿಂದ ಬೆಂಗಳೂರು ಐಟಿ ಹಬ್‌ ಆಗಿ ಬೆಳೆದಿದೆ : ಜೆಪಿ ಹೆಗ್ಡೆ

ಜನಪ್ರತಿನಿಧಿ (ಉಡುಪಿ) : 1999ರಲ್ಲಿ ನಾನು ಪಕ್ಷೇತರನಾಗಿ ಸ್ಪರ್ಧಿಸಿದ್ದ ಸಂದರ್ಭ ಅಂದು ಅವರು ನನ್ನಲ್ಲಿ ಬೆಂಬಲವನ್ನು ಕೋರಿದ್ದರು, ಆದರೆ ಅವರಿಗೆ ಅಂದು ಬೇಕಾದ ಸೀಟುಗಳು ದಕ್ಕಿತ್ತು. ಆ ಬಳಿಕ ನಾವು ವಿರೋಧ ಪಕ್ಷದಲ್ಲಿದ್ದರೂ, ನಮ್ಮ ಕ್ಷೇತ್ರಕ್ಕೆ ಬೇಕಾದ ಎಲ್ಲಾ ರೀತಿಯ ಕೆಲಸಗಳನ್ನು ಮಾಡಿಕೊಟ್ಟಿದ್ದರು. ಅವರು ರಾಜ್ಯವನ್ನು ಮುನ್ನಡೆಸಿದ ರೀತಿ ಎಲ್ಲರಿಗೂ ಮಾದರಿ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದ್ದಾರೆ.

ಬೆಂಗಳೂರಿನ ಅಭಿವೃದ್ಧಿಯ ಹರಿಕಾರ, ಐಟಿಬಿಟಿಯಲ್ಲಿ ಅಭಿವೃದ್ಧಿ ಇದೆ ಎಂದು ಕಂಡುಕೊಂಡ ಅವರು, ಐಟಿಬಿಟಿ ಕ್ಷೇತ್ರಕ್ಕೆ ಪೂರ್ಣ ಕುಂಭ ಸ್ವಾಗತ ನೀಡಿದ್ದರು. ಅವರ ಮುನ್ನುಡಿಯಿಂದ ಇಂದು ಬೆಂಗಳೂರು ಐಟಿ ಹಬ್‌ ಆಗಿ ಬೆಳೆದಿದೆ.  ಅವರ ಅವಧಿಯಲ್ಲಿ ವಿಧಾನಸಭೆ ಆಡಳಿತಕ್ಕೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತಿತ್ತೇ ಹೊರತು ವೈಯುಕ್ತಿಕ ವಿಚಾರಗಳ ಚರ್ಚೆಗೆ ಅವಕಾಶವೇ ಇರಲಿಲ್ಲ. ಆ ರೀತಿಯಲ್ಲಿ ಅವರು ಸಭೆಯನ್ನು ಮುನ್ನಡೆಸಿದ್ದರು. ಸಭ್ಯ ರಾಜಕಾರಣಿಯಾಗಿದ್ದ ಅವರ ನಿಧನ ಎನ್ನುವುದು ತುಂಬಲಾರದ ನಷ್ಟ ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿ ನೀಡಲಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಕೋರುತ್ತೇನೆ ಎಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!