spot_img
Friday, January 17, 2025
spot_img

ರಾಜ್ಯಸಭೆಯ ಕಾಂಗ್ರೆಸ್‌ ಸಂಸದರ ಆಸನದಲ್ಲಿ ನೋಟಿನ ಬಂಡಲ್ ಪತ್ತೆ | ತನಿಖೆಗೆ ಸ್ಪೀಕರ್‌ ಆದೇಶ

ಜನಪ್ರತಿನಿಧಿ (ನವ ದೆಹಲಿ) : ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದರೋರ್ವರು ಕೂರುವ ಕುರ್ಚಿಯಲ್ಲಿ ನೋಟುಗಳ ಬಂಡಲ್‌ಗಳು ಕಂಡು ಬಂದಿದ್ದು, ಸದ್ಯ, ಸದನದಲ್ಲಿ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.

ದಿನನಿತ್ಯದ ತಪಾಸಣೆಯ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರ ಆಸನದಲ್ಲಿ ನೋಟಿನ ಕಂತೆಗಳು ಪತ್ತೆಯಾಗಿದ್ದು, ಈ ವಿಚಾರವನ್ನು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಗಮನಕ್ಕೆ ತರಲಾಗಿದ್ದು ಈ ವಿಚಾರವಾಗಿ ಮಾತನಾಡಿದ ಅವರು ಇದೊಂದು ಗಂಭೀರ ವಿಷಯ ಎಂದು ಹೇಳಿದ್ದಲ್ಲದೇ, ತನಿಖೆಗೆ ಆದೇಶಿಸಿದ್ದಾರೆ.

ನಿನ್ನೆ(ಗುರುವಾರ) ಸದನವನ್ನು ಮುಂದೂಡಿದ ನಂತರ ಭದ್ರತಾ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಜ್ಯಸಭೆಯ ಆಸನ ಸಂಖ್ಯೆ 222 ರಲ್ಲಿ ನಗದು ಪತ್ತೆಯಾಗಿದೆ ಎಂದು ಹೇಳಿದರು.” ಈ ಸ್ಥಾನವನ್ನು ತೆಲಂಗಾಣ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರಿಗೆ ನೀಡಲಾಗಿತ್ತು. ಈ ಬಗ್ಗೆ ನಿಯಮಾನುಸಾರ ತನಿಖೆ ನಡೆಯಬೇಕಿದೆ ಎಂದು ರಾಜ್ಯಸಭಾ ಅಧ್ಯಕ್ಷರು ಸೂಚಿಸಿದ್ದಾರೆ.

ರಾಜ್ಯಸಭಾ ಅಧ್ಯಕ್ಷರ ಹೇಳಿಕೆಗೆ ಮಲ್ಲಿಕಾರ್ಜುನ್ ಖರ್ಗೆ ಕಿಡಿ :
ರಾಯ್ಯಸಭಾಧ್ಯಕ್ಷರ ಹೇಳಿಕೆಗೆ ಆಕ್ರೋಶ ಹೊರ ಹಾಕಿದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿರುವುದರಿಂದ ಸಂಸದರ ಹೆಸರನ್ನು ಸಭಾಧ್ಯಕ್ಷರು ಹೆಸರಿಸುವುದು ಸರಿಯಲ್ಲ ಎಂದವರು ಹೇಳಿದ್ದಾರೆ.

ಮಲ್ಲಿಕಾರ್ಜುನ್‌ ಖರ್ಗೆ ಆಕ್ಷೇಪಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ಆಸನ ಸಂಖ್ಯೆ ಹಾಗೂ ಸಂಸದರ ಹೆಸರನ್ನು ಸೂಚಿಸುವುದರಲ್ಲಿ ಯಾವ ತಪ್ಪಿಲ್ಲ. ಅದರಲ್ಲಿ ತಪ್ಪೇನಿದೆ, ಸಂಸತ್ತಿಗೆ ನೋಟುಗಳ ಕಂತೆಗಳನ್ನು ತರುವುದು ಸೂಕ್ತವೇ ? ಹಾಗಾಗಿ ಸೂಕ್ತ ತನಿಖೆಯಾಗಬೇಕು ಎಂದು ಹೇಳಿದ್ದಾರೆ.

ಅಭಿಷೇಕ್ ಮನು ಸಿಂಘ್ವಿ ಹೇಳಿದ್ದೇನು ?
ಈ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅಭಿಷೇಕ್ ಮನು ಸಿಂಘ್ವಿ ಆರೋಪವನ್ನು ನಿರಾಕರಿಸಿದ್ದಾರೆ. “ನಾನು ರಾಜ್ಯಸಭೆಗೆ ಹೋಗುವಾಗ ಕೇವಲ 500 ರೂ. ನೋಟು ಮಾತ್ರ ತೆಗೆದುಕೊಂಡು ಹೋಗುತ್ತೇನೆ. ಆದರೆ ನನ್ನ ಆಸನದಲ್ಲಿ ಇಷ್ಟು ದೊಡ್ಡ ಮೊತ್ತದ ಬಂಡಲ್ ಹೇಗೆ ಬಂತೆನ್ನುವುದರ ಬಗ್ಗೆ ತಿಳಿದಿಲ್ಲ, ಅಷ್ಟಲ್ಲದೆ ಗುರುವಾರ ನಾನು 12.57 ಕ್ಕೆ ಸದನಕ್ಕೆ ಬಂದಿದ್ದು 1 ಗಂಟೆಗೆ ಸದನ ಆರಂಭವಾಗಿತ್ತು. ಈ ಸಂದರ್ಭದಲ್ಲಿ ನಾನು ಹಾಗೂ ಅಯೋಧ್ಯಾ ಪ್ರಸಾದ್ ಅವರೊಂದಿಗೆ ಕ್ಯಾಂಟೀನ್‌ ಗೆ ತೆರಳಿ ಊಟ ಮಾಡಿದೆ ಇದಾದ ನಂತರ ನಾನು ಸಂಸತ್ ನಿಂದ ಹೊರ ನಡೆದೆ, ಹೀಗಿರುವಾಗ ನಾನು ಅಷ್ಟು ದೊಡ್ಡ ಮೊತ್ತವನ್ನು ಅಲ್ಲಿ ಬಿಡಲು ಹೇಗೆ ಸಾಧ್ಯ ಎಂದವರು ಪ್ರಶ್ನಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!