spot_img
Thursday, December 26, 2024
spot_img

ಬಿ.ಬಿ. ಹೆಗ್ಡೆ ಕಾಲೇಜು: ಎಚ್‌ಐವಿ, ಏಡ್ಸ್ ಅರಿವು ಕಾರ್ಯಕ್ರಮ

ಕುಂದಾಪುರ: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಹಾಗೂ ಇಂಡಿಯನ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರ ಸಹಯೋಗದೊಂದಿಗೆ ಎಚ್‌ಐವಿ/ಏಡ್ಸ್ ಅರಿವು ಕಾರ್ಯಕ್ರಮ ಡಿಸೆಂಬರ್ 4 ರಂದು ಜರಗಿತು.

ಇಂಡಿಯನ್ ರೆಡ್ ಕ್ರಾಸ್ ಘಟಕದ ಸಭಾಪತಿಗಳಾದ ಜಯಕರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಇಂದಿನ ಯುವ ಸಮೂಹ ಹೇಗೆ ತಮ್ಮನ್ನು ಸಮಾಜದ ಆರೋಗ್ಯವಂತ ಪೀಳಿಗೆಯಾಗಿ ಮಾರ್ಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರದ ಸರಕಾರಿ ತಾಲ್ಲೂಕು ಆಸ್ಪತ್ರೆಯ ಕೌನ್ಸಿಲರ್ ಆಗಿರುವ ಶ್ರೀಮತಿ ನಳಿನಾಕ್ಷಿ ಇವರು ಎಚ್‌ಐವಿ ಹಾಗೂ ಏಡ್ಸ್ ಬಗ್ಗೆ ಸವಿಸ್ತಾರವಾಗಿ ಮಾಹಿತಿ ತಿಳಿಸಿ ಅದರ ಮುನ್ನೆಚ್ಚರಿಕೆಯ ಆವಶ್ಯಕತೆಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದದರು.

ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.| ಕೆ. ಉಮೇಶ್ ಶೆಟ್ಟಿ ವಿದ್ಯಾರ್ಥಿಗಳಿಗೆ ಹದಿ ಹರೆಯದ ವಯಸ್ಸಿನಲ್ಲಿ ಎಚ್‌ಐವಿಯ ಅರಿವು ಅತ್ಯವಶ್ಯಕ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಪತಿಗಳಾದ ಜಯಕರ ಶೆಟ್ಟಿ ವಿದ್ಯಾರ್ಥಿಗಳಿಗೆ ಒಂದು ಲಕ್ಷ ಮೌಲ್ಯದ ವಿದ್ಯಾರ್ಥಿ ವೇತನ ಹಸ್ತಾಂತರಿಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದ ಕಾರ್ಯದರ್ಶಿಗಳಾಗಿರುವ ಸತ್ಯನಾರಾಯಣ ಪುರಾಣಿಕ್, ಖಜಾಂಚಿಗಳಾಗಿರುವ ಶಿವರಾಮ ಶೆಟ್ಟಿ, ಕಾಲೇಜಿನ ಉಪಪ್ರಾಂಶುಲರಾದ ಡಾ| ಚೇತನ ಶೆಟ್ಟಿ ಉಪಸ್ಥಿತರಿದ್ದರು.

ಕಾಲೇಜು ಯುವ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಯೋಗೀಶ್ ಶ್ಯಾನುಭೋಗ ಸ್ವಾಗತಿಸಿ, ಶ್ರೀಮತಿ ಮಾಲತಿ ಕುಂದರ್ ವಂದಿಸಿದರು. ಯುವ ರೆಡ್ ಕ್ರಾಸ್ ಘಟಕದ ಸ್ವಯಂಸೇವಕರು ಪ್ರಾರ್ಥಿಸಿದರು. ವೈ. ಅರ್. ಸಿ. ಸ್ವಯಂಸೇವಕಿ ಸನ್ಮಿತಾ ದ್ವಿತೀಯಾ ಬಿ.ಕಾಂ. ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!