spot_img
Thursday, December 26, 2024
spot_img

ಕೆಪಿಎಸ್‌ಸಿ ಅವ್ಯವಹಾರ : ಪ್ರಾಸಿಕ್ಯೂಷನ್ ಗೆ ರಾಷ್ಟ್ರಪತಿಯಿಂದ ಮಂಜೂರಾತಿ ಪಡೆಯಲು ಸರ್ಕಾರ ತಯಾರಿ !

ಜನಪ್ರತಿನಿಧಿ (ಬೆಂಗಳೂರು) : 2011 ಸಾಲಿನ ೩೬೨ ಗೆಜೆಟೆಡ್‌ ಪ್ರೊಬೇಷನರಿ ಆಯ್ಕೆ ಪ್ರಕ್ರಿಯೆಯ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಅಂದಿನ ಕೆಪಿಎಸ್‌ಸಿ ಅಧ್ಯಕ್ಷ ಗೋನಾಳ್‌ ಭೀಮಪ್ಪ ಹಾಗೂ ಒಂಬತ್ತು ಸದಸ್ಯರ ಪ್ರಾಸಿಕ್ಯೂಷನ್ ಗೆ ರಾಷ್ಟ್ರಪತಿಯಿಂದ ಮಂಜೂರಾತಿ ಪಡೆಯಲು ಸರ್ಕಾರ ತಯಾರಿ ನಡೆಸಿದೆ.

ರಾಜ್ಯ ಸರ್ಕಾರ ಈ ಸಂಬಂಧಿಸಿದಂತೆ ಪ್ರಸ್ತಾವವವನ್ನು ಮತ್ತೆ ಸಚಿವ ಸಂಪುಟ ಸಭೆಗೆ ಮಂಡಿಸಲು ಮುಂದಾಗಿದ್ದು,  ಈ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಅನುಮೋದನೆ ನೀಡಿದ್ದಾರೆ.

ಅಕ್ರಮದ ಕಾರಣಕ್ಕೆ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ನಿಂದ ರದ್ದುಗೊಂಡಿದ್ದ ಈ ಸಾಲಿನ ಆಯ್ಕೆ ಪಟ್ಟಿಯನ್ನು ೨೦೨೨ರಲ್ಲಿ ಕಾಯ್ದೆ ರೂಪಿಸಿ ಸಕ್ರಮಗೊಳಿಸಿದ್ದ ಸರ್ಕಾರ, ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿತ್ತು.

೨೦೨೧ರ ಮೇ ೨೭ ಹಾಗೂ ಜೂನ್‌ ೨೧ ರಂದು ನಡೆದ ಸಚಿವ ಸಂಪುಟ ಸಭೆಯ ನಿರ್ಣಯದಂತೆ ಗೋನಾಳ್‌ ಭೀಮಪ್ಪ ಹಾಗೂ ಸದಸ್ಯರನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ೧೯೮೮ರ ಕಲಂ ೧೯ಡಿ ಪ್ರಾಸಿಕ್ಯೂಷನ್‌ ನಡೆಸಿ, ಕ್ರಮ ತೆಗೆದುಕೊಳ್ಳಲು ರಾಜ್ಯಪಾಲರ ಅನುಮೋದನೆ ಪಡೆಯಬೇಕು. ಬಳಿಕ ರಾಷ್ಟ್ರಪತಿಯಿಂದ ಮಂಜೂರಾತಿ ಪಡೆಯಲು ರಾಜ್ಯ ಸರ್ಕಾರಕ್ಕೆ ೨೦೨೧ರ ಆಗಸ್ಟ್‌ ೧೦ರಂದು ಸಿಐಡಿ ಪತ್ರ ಬರೆದಿತ್ತು.

ಅದರಂತೆ, ಅನುಮೋದನೆಗಾಗಿ ರಾಜ್ಯಪಾಲರಿಗೆ ಕಡತ ಸಲ್ಲಿಕೆ ಆಗಿತ್ತು. ಆದರೇ, ಪ್ರಾಸಿಕ್ಯೂಷನ್‌ ಗೆ ರಾಷ್ಟ್ರಪತಿಯಿಂದ ಅನುಮತಿ ಕೋರಲು ಮಂಡಿಸಿದ್ದ ಪ್ರಸ್ತಾವವನ್ನು ಸಚಿವ ಸಂಪು ತಿರಸ್ಕರಿಸದೆ ಎಂದು ಪರಿಭಾವಿಸಿದ್ದ ರಾಜ್ಯಪಾಲರು, ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿರಲಿಲ್ಲ. ಹೀಗಾಗಿ, ಮತ್ತೆ ಹೊಸತಾಗು ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆಯಲು ಕಡತ ಮಂಡಿಸುವಂತೆ ಇದೇ ಏಪ್ರಿಲ್‌ ೨೩ರಂದು ಡಿಪಿಎಆರ್‌ ಕಾರ್ಯದರ್ಶಿಗೆ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಸೂಚಿಸಿದ್ದರು.

ಯಾರೆಲ್ಲ ಆರೋಪಿಗಳು ?
ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಗೋನಾಳ್ ಭೀಮಪ್ಪ ಅವರನ್ನು ಒಂದೇ ಆರೋಪಿ ಎಂದು ಕರಡು ದೋಷಾರೋಪ ಪಟ್ಟಿಯಲ್ಲಿ ಸಿಐಡಿ ಹೇಳಿದೆ.

ಸದಸ್ಯರಾಗಿದ್ದ ಮಂಗಳಾ ಶ್ರೀಧರ್ 4ನೇ, ಡಾ. ಬಿ.ಎಸ್. ಕೃಷ್ಣಪ್ರಸಾದ್‌, ಎಸ್.ಆರ್. ರಂಗಮೂರ್ತಿ, ಎನ್. ಮಹದೇವ್‌, ಎಚ್.ವಿ.ಪಾರ್ಶ್ವನಾಥ್, ಎಸ್.ದಯಾಶಂಕ‌ರ್, ಎಚ್‌.ಡಿ. ಪಾಟೀಲ, ಎನ್. ರಾಮಕೃಷ್ಣ, ಬಿ.ಟಿ. ಕನಿರಾಮ್ 9ರಿಂದ 16ನೇ ಆರೋಪಿಗಳು ಎಂದು ಪಟ್ಟಿ ಮಾಡಿದೆ. ಎಲ್ಲರೂ ಈಗ ನಿವೃತ್ತರು.

ಪ್ರಾಸಿಕ್ಯೂಷನ್: ಸಿಐಡಿಯಿಂದ ಪತ್ರ
2023ರ ಸೆ. 20ರಂದು ಸರ್ಕಾರಕ್ಕೆ ಪತ್ರ ಬರೆದಿದ್ದ ಸಿಐಡಿಯ ಡಿಜಿಪಿ, ‘2011ನೇ ಸಾಲಿನ ಆಯ್ಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ಆರೋಪಿಗಳ ಪ್ರಾಸಿಕ್ಯೂಷನ್‌ಗೆ ಅನುಮತಿ ಪಡೆದ ನಂತರ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಹೈಕೋರ್ಟ್ 2017ರಲ್ಲಿಯೇ ಆದೇಶಿಸಿದೆ. ಹೀಗಾಗಿ, ಪ್ರಾಸಿಕ್ಯೂಷನ್‌ಗೆ ಅನುಮತಿ ಕುರಿತು ಸದ್ಯದ ಮಾಹಿತಿ ನೀಡುವಂತೆ’ ಕೋರಿದ್ದರು. ಈ ಕಾರಣಕ್ಕೆ, ಸಿಐಡಿ ಸಲ್ಲಿಸಿದ್ದ ತನಿಖಾ ವರದಿ ಸಹಿತ ರಾಷ್ಟ್ರಪತಿಯಿಂದ ಮಂಜೂರಾತಿ ಪಡೆಯುವ ಪೂರ್ವದಲ್ಲಿ ರಾಜ್ಯಪಾಲರ ಅನುಮೋದನೆಗೆ ಕಡತವನ್ನು ಮರು ಮಂಡಿಸಲು ಮತ್ತು ಅದಕ್ಕೆ ಮುಖ್ಯಮಂತ್ರಿಯ ಅನುಮೋದನೆ ಪಡೆಯಲು 2023ರ ನ. 11ರಂದು ಡಿಪಿಎಆರ್ ಕಡತ ಸಿದ್ಧಪಡಿಸಿತ್ತು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!