spot_img
Wednesday, December 4, 2024
spot_img

ಶ್ರೀ ಶಾರದಾ ಆಂಗ್ಲ ಮಾಧ್ಯಮ ಸಂಸ್ಥೆಯ ರಾಷ್ಟ್ರಮಟ್ಟದ ಕರಾಟೆಗೆ ಆಯ್ಕೆಯಾದ ವಿದ್ಯಾರ್ಥಿ ಗಳಿಂದ ” ಬೃಹತ್ ರೋಡ್ ಶೋ”

ಜನಪ್ರತಿನಿಧಿ (ಬಸ್ರೂರು, ಡಿ 1) : ನವೆಂಬರ್ 26ರಂದು ಮೈಸೂರಿನಲ್ಲಿ ನಡೆದಂತಹ ರಾಜ್ಯಮಟ್ಟದ ಕರಾಟೆ ಪಂದ್ಯಾಟದಲ್ಲಿ ಭಾಗವಹಿಸಿ ಸುವರ್ಣ ಪದಕದೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶ್ರೀ ಶಾರದಾ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಬಸ್ರೂರು  10ನೇ ತರಗತಿಯ  ಪ್ರತಿಭಾವಂತ ವಿದ್ಯಾರ್ಥಿಯಾದ ಮೋಸಂ ಹಾಗೂ ತೃತೀಯ ಸ್ಥಾನವನ್ನು ಗಳಿಸಿ ಕಂಚಿನ ಪದಕವನ್ನು ಪಡೆದಂತಹ  ಇನ್ನೊರ್ವ ಪ್ರತಿಭಾನ್ವಿತ ವಿದ್ಯಾರ್ಥಿಯಾದ  ಪೃಥ್ವಿರಾಜ್ ಇವರ ಸಾಧನೆ “ಉಳಿದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಹಾಗೂ ಈ ಸಂತೋಷದ ವಿಷಯವನ್ನು ಊರವರೊಂದಿಗೆ ಹಂಚಿಕೊಳ್ಳುವ ಸಲುವಾಗಿ” ಬೃಹತ್  ರೋಡ್ ಶೋ “ಒಂದನ್ನು ಹಮ್ಮಿಕೊಳ್ಳಲಾಗಿತ್ತು.

ಶಾಲಾ ಆವರಣದಿಂದ ಆರಂಭವಾದ  ರೋಡ್ ಶೋ ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆಯವರೆಗೆ ನಡೆಯಿತು. ಕ್ರೀಡಾ ವಿಜೇತರ ರೋಡ್ ಶೋ ನಲ್ಲಿ ತೆರೆದ ಕಾರಿನ ಪುರ ಮೆರವಣಿಗೆಯ ಮೂಲಕ ನಡೆಯಿತು.

ಸಂಸ್ಥೆಯ ಸಂಚಾಲಕರಾದ ಸಂತೋಷ್  ಶೆಟ್ಟಿ, ಶೈಕ್ಷಣಿಕ ನಿರ್ದೇಶಕ ಪ್ರಕಾಶ್ ಶೆಟ್ಟಿ, ಪ್ರಾಂಶುಪಾಲೆ ಮಮತಾ ಪೂಜಾರಿ, ಆಡಳಿತ ಅಧಿಕಾರಿ ಆಶಾ ಶೆಟ್ಟಿ, ಕರಾಟೆ ತರಬೇತುದಾರ ಸಂದೀಪ್ ಮತ್ತು ತಂಡ ಶಿಕ್ಷಕ ವರ್ಗದವರು ಹಾಗೂ ಏಳರಿಂದ ಹತ್ತನೆ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!