spot_img
Wednesday, December 4, 2024
spot_img

ವಿಜಯೇಂದ್ರ ಅವರಪ್ಪನ ಸಹಿ ಮಾಡಿ ಕಡತಗಳನ್ನು ರವಾನಿಸಿರುವ ಉದಾಹರಣೆಗಳಿವೆ | ವಿಜಯೇಂದ್ರನೇ ನಕಲಿ ನೊಟೀಸ್ ಮಾಡಿಸಿದ್ದಾನೆ : ಯತ್ನಾಳ್‌ ಬಾಂಬ್‌

ಜನಪ್ರತಿನಿಧಿ (ನವ ದೆಹಲಿ) : ಸ್ವಪಕ್ಷೀಯರ ವಿರುದ್ಧವೇ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮಗೆ ಶಿಸ್ತು ಸಮಿತಿ ನೊಟೀಸ್ ಬಂದಿರುವ ಬಗ್ಗೆ ಹೊಸ ವರಸೆ ತೆಗೆದಿದ್ದು, ವಿಜಯೇಂದ್ರನೇ ನಕಲಿ ನೊಟೀಸ್ ಮಾಡಿಸಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

“ನವದೆಹಲಿಯಲ್ಲಿ ವರಿಗಾರರೊಂದಿಗೆ ಮಾತನಾಡಿರುವ ಯತ್ನಾಳ್, ನನಗೆ ಈ ವರೆಗೂ ಅಧಿಕೃತವಾಗಿ ಪಕ್ಷದ ಕೇಂದ್ರ ಸಮಿತಿಯಿಂದ ನೊಟೀಸ್ ಬಂದಿಲ್ಲ, ವಾಟ್ಸ್ ಆಪ್ ನಲ್ಲಿ ನೊಟೀಸ್ ಬಂದಿದೆ. ವಾಟ್ಸ್ ಆಪ್ ನಲ್ಲಿ ಬಂದಿರುವುದನ್ನು ಹೇಗೆ ನಂಬಲಿ? ವಿಜಯೇಂದ್ರನೇ ನಕಲಿ ನೊಟೀಸ್ ಮಾಡಿಸಿದ್ದಾನೆ ಅನ್ನಿಸುತ್ತಿದೆ. ಅಧಿಕೃತವಾಗಿ ನೊಟೀಸ್ ಬಂದ ಬಳಿಕ ಸರಿಯಾದ ಉತ್ತರ ನೀಡುತ್ತೇನೆ” ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಯತ್ನಾಳ್, ನಾನು ಸ್ವಂತ ಸಾಮರ್ಥ್ಯದ ಮೇಲೆ ನಾಯಕನಾಗಿದ್ದೀನಿ. ಯಡಿಯೂರಪ್ಪ ಭಯದಿಂದ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದಾರೆ, ವಿಜಯೇಂದ್ರ ಇನ್ನೂ ಸಣ್ಣ ಹುಡುಗ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಈ ಸಂಬಂಧ ನಾನು ಯಾವುದೇ ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡುವುದಿಲ್ಲ ಎಂದು ಯತ್ನಾಳ್ ಸ್ಪಷ್ಟಪಡಿಸಿದ್ದಾರೆ. ನನಗೆ ಬಂದಿರುವ ನೊಟೀಸ್ ನಕಲಿ ಎಂದೆನಿಸುತ್ತಿದೆ. ವಿಜಯೇಂದ್ರ ಅವರಪ್ಪನ ಸಹಿ ಮಾಡಿ ಕಡತಗಳನ್ನು ರವಾನಿಸಿರುವ ಉದಾಹರಣೆಗಳಿವೆ. ಈ ಬಗ್ಗೆ ಹರಿಪ್ರಸಾದ್ ಆರೋಪ ಮಾಡಿದ್ದರು ಎಂದು ಯತ್ನಾಳ್ ಹೊಸ ಆರೋಪ ಮಾಡಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!