spot_img
Thursday, December 5, 2024
spot_img

ಕೋಟೇಶ್ವರ: ನ.29ರಿಂದ ರೈನ್ ಬೋ ಎಕ್ಸಿಬಿಷನ್ ಆರಂಭ

ಕುಂದಾಪುರ, ನ.28: ಕುಂದಾಪುರ-ಕೋಟೇಶ್ವರ ಸರ್ಜನ್ ಆಸ್ಪತ್ರೆಯ ಹತ್ತಿರ ರೈನ್ ಬೋ ಎಕ್ಸಿಬಿಷನ್ ನವೆಂಬರ್ 29ರಿಂದ ಆರಂಭವಾಗಲಿದೆ. ಕುಂದಾಪುರದಲ್ಲಿ ಪ್ರಥಮ ಬಾರಿಗೆ ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಎಕ್ಸಿಬಿಷನ್ ದಲ್ಲಿ ಅಂಡರ್ ವಾಟರ್ ಫಿಶ್ ಟನಲ್ ಮತ್ತು ಮತ್ಸ್ಯಕನ್ಯೆಯರು ಹಾಗೂ ಟನಲ್ ಎಕ್ಸಿಬಿಷನ್ ಇರಲಿದೆ ಎಂದು ರೈನ್ ಬೋ ಎಕ್ಸಿಬಿಷನ್ ಮುಖ್ಯಸ್ಥರಾದ ವಿಲ್ಸನ್ ವಿಜಯ್ ಹೇಳಿದರು.

ಅವರು  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪ್ರತಿ ದಿನ ಸಂಜೆ 5 ಗಂಟೆಯಿಂದ ರಾತ್ರಿ 9.30ರ ತನಕ ಎಕ್ಸಿಬಿಷನ್ ತೆರೆದಿರುತ್ತದೆ. ಪ್ರವೇಶ ಶುಲ್ಕ ಮೂರು ವರ್ಷ ಮೇಲ್ಪಟ್ಟವರಿಗೆ 80 ರೂಪಾಯಿ ಆಗಿರುತ್ತದೆ. ಕುಂದಾಪುರದಲ್ಲಿ ಇದೇ ಪ್ರಥಮ ಬಾರಿಗೆ ಸುರಂಗ ಮಾರ್ಗದಲ್ಲಿ ಅಕ್ವೇರಿಯಂ-ಫಿಶ್ ಟನಲ್ ಪರಿಚಯ ಮಾಡಲಾಗುತ್ತದೆ. ಹಾಗೂ ವಿಶೇಷವಾಗಿ ಕರ್ನಾಟಕದಲ್ಲಿ ಮತ್ಸ್ಯಕನ್ಯೆಯರನ್ನು ಪರಿಚಯಿಸಿದ ಹೆಗ್ಗಳಿಕೆ ಈ ಸಂಸ್ಥೆಗಿದೆ. ಮೂರು ಮಂದಿ ಮತ್ಸ್ಯಕನ್ಯೆಯರು ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದರು.

60 ದಿನಗಳ ಪರವಾನಿಗೆ ಪಡೆದಿದ್ದೇವೆ. 45ದಿನಗಳು ನಡೆಸಲು ಉದ್ದೇಶಿಸಿದ್ದೇವೆ. ಮತ್ತೆ ಬೇಡಿಕೆ ಗಮನಿಸಿ ಮುಂದುವರಿಸಲು ಯೋಚಿಸಲಾಗುವುದು. ನಾವು ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಈ ಎಕ್ಸಿಬಿಷನ್ ನಡೆಸಿದ್ದೇವೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ನನ್ನ ಹಿರಿಯರು ಸರ್ಕಸ್ ಕಂಪೆನಿ ನಡೆಸುತ್ತಿದ್ದರು. ನಾನು ಕಳೆದ ಹಲವು ವರ್ಷಗಳಿಂದ ರೈನ್ ಬೋ ಎಕ್ಸಿಬಿಷನ್ ವಿಭಿನ್ನ ದೃಷ್ಟಿಕೋನದಿಂದ ನಡೆಸುತ್ತಿದ್ದೇನೆ. ಇದರಲ್ಲಿ ಮೀನುಗಳ ಮಾಯಾಲೋಕ ಇರುತ್ತದೆ. ಬೇರೆ ಬೇರೆ ರೀತಿಯ ಮಳಿಗೆಗಳು ಇರುತ್ತದೆ. ಮನೋರಂಜನಾ ಆಟಗಳು ಇರುತ್ತವೆ. ಕುಂದಾಪುರ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಆಗಮಿಸುವ ಜನರಿಗೆ ವಾಹನ ನಿಲುಗಡೆಗೆ ಪಕ್ಕದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ ಎಂದರು.

ಶರತ್ ಶಿವಮೊಗ್ಗ ಮಾತನಾಡಿ ಇಲ್ಲಿ ಅಕ್ವೇರಿಯಂ ಫಿಶ್ ಮಾತ್ರವಲ್ಲದೆ ಬೇರೆ ಬೇರೆ ಜಾತಿಯ ವಿಶೇಷ ಮೀನುಗಳನ್ನು ನೋಡಬಹುದು. ದೈತ್ಯಗಾತ್ರದ ಮೀನುಗಳನ್ನು ಇಲ್ಲಿ ನೋಡಲು ಲಭ್ಯ. ಬೇರೆ ಬೇರೆ ರಾಜ್ಯಗಳಿಂದ ಮೀನುಗಳನ್ನು ತರಿಸಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸೈಯದ್, ಪ್ರವೀಣ್ ಉಪಸ್ಥಿತರಿದ್ದರು.

ನ.29ರಂದು ಉದ್ಘಾಟನೆ:
ನ.29ರ ಸಂಜೆ 6.30ಕ್ಕೆ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ರೈನ್ ಬೋ ಎಕ್ಸಿಬಿಷನ್ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅಕ್ವೇರಿಯಂ ಉದ್ಘಾಟನೆ ನೆರವೇರಿಸಲಿದ್ದಾರೆ. ಮತ್ಸ್ಯಕನ್ಯೆ ಟನಲ್ ಅನ್ನು ತಹಶೀಲ್ದಾರ್ ಶೋಭಾಲಕ್ಷ್ಮೀ ಉದ್ಘಾಟಿಸುವರು. ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ ಅಮ್ಯೂಸ್‌ಮೆಂಟ್ ಪಾರ್ಕ್ ಉದ್ಘಾಟಿಸಲಿದ್ದಾರೆ. ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ್ ಶೆಣೈ, ಕೋಟೇಶ್ವರ ಗ್ರಾ.ಪಂ ಅಧ್ಯಕ್ಷೆ ರಾಗಿಣಿ, ಹಂಗಳೂರು ಗ್ರಾ.ಪಂ ಅಧ್ಯಕ್ಷೆ ಶೋಭಾ ಪೂಜಾರಿ, ಡಿವೈ‌ಎಸ್‌ಪಿ ಬೆಳ್ಳಿಯಪ್ಪ, ಚಲನಚಿತ್ರ ನಟ ರಘು ಪಾಂಡೇಶ್ವರ್, ಸ್ಥಳೀಯರಾದ ರಾಮಣ್ಣ ಶೆಟ್ಟಿ ಭಾಗವಹಿಸಲಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!