spot_img
Wednesday, January 22, 2025
spot_img

ಅಕ್ಷರಾಭ್ಯಾಸಕ್ಕೆ ಹಾಡಿನೊಂದಿಗೆ ಅಭಿವ್ಯಕ್ತಿ: ವಂದನಾ ರೈ ವಿಭಿನ್ನ ಪ್ರಯೋಗ

 

ವಂದನಾ ರೈ ಮತ್ತು ಅವರ ತಂಡ
ವಂದನಾ ರೈ ಮತ್ತು ಅವರ ತಂಡ

ಉಡುಪಿ: ಕಲಿಕೆಯನ್ನು ಪರಿಣಾಮಕಾರಿಯಾಗಿ, ಮಗು ಇಷ್ಟ ಪಟ್ಟು ಕಲಿಯುವಂತಹ ಆನೇಕ ಕಲಿಕಾ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಹಾಡು, ನೃತ್ಯ, ಅಭಿನಯಗಳ ಜೊತೆಜೊತೆಯಲ್ಲಿ ಅಕ್ಷರಾಭ್ಯಾಸವನ್ನು ಕಲಿಸಿದಾಗ ಮಗು ಅತ್ಯಂತ ಉತ್ಸಾಹದಿಂದ ಬಹುಬೇಗನೇ ಅದನ್ನು ಕರಗತ ಮಾಡಿಕೊಳ್ಳುತ್ತದೆ. ಉಡುಪಿ ಜಿಲ್ಲೆಯ ಕಾರ್ಕಳದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ವಂದನಾ ರೈ ಇಂತಹದ್ದೊಂದು ಪ್ರಯೋಗ ಮಾಡಿದ್ದಾರೆ.

ನೃತ್ಯ ಮತ್ತು ಸಂಗೀತಾ ಕ್ಷೇತ್ರದಲ್ಲಿ ಅನುಭವವಿರುವ ವಂದನಾ ರೈ ಮತ್ತು ಅವರ ತಂಡವು ಅ‌ಆ ಅ‌ಆ ಇ‌ಈ ಕನ್ನಡದ ಅಕ್ಷರ ಮಾಲೆಯ ಹಾಡನ್ನು ಹಾಡಿ ಪ್ರತಿ ಅಕ್ಷರವನ್ನು ವಿವರಿಸಿದ್ದಾರೆ. ಈ ವಿಡಿಯೋ ಸಾಕಷ್ಟು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಯಕ್ಷಗಾನ, ನೃತ್ಯ, ಹಾಗೂ ಕಲೆಯಲ್ಲಿ ಆಸಕ್ತಿ ಹೊಂದಿರುವ ಶಿಕ್ಷಕಿ ವಂದನಾ ಅವರ ಡ್ಯಾನ್ಸ್ ವಿಡಿಯೋ ಸಾಕಷ್ಟು ಚಿಣ್ಣರ ಮನಸ್ಸು ಗೆದ್ದು ಕೊಂಡಿದೆ. ಅವರು ಚಿಕ್ಕಂದಿನಿಂದಲೂ ಸಂಗೀತ, ನೃತ್ಯದ ಬಗ್ಗೆ ಒಲವು ಹೊಂದಿರುವವರು. ಈ ಹಿಂದೆ ಬೆಂಗಳೂರಿನಲ್ಲಿ ಟಿವಿ. ಚಾನೆಲ್‌ಗಳಲ್ಲಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದು ಕೊಂಡಿರುವ ಇವರು ಝಿ ಕನ್ನಡ ಹಾಗೂ ಕಸ್ತೂರಿ ಕನ್ನಡ ಹಾಗೂ ಇನ್ನಿತರ ಚಾನೆಲ್‌ಗಳಲ್ಲಿ ಭಾಗವಹಿಸಿದ್ದಾರೆ. ಬಜಗೋಳಿ ಮತ್ತು ಕಾರ್ಕಳದಲ್ಲಿ ಮಯೂರಿ ಡ್ಯಾನ್ಸ್ ಕ್ಲಾಸ್ ಆರಂಬಿಸಿದ್ದಾರೆ. ಹಲವು ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!