spot_img
Thursday, December 5, 2024
spot_img

ಪರಶುರಾಮ ಥೀಮ್ ಪಾರ್ಕ್‌ ವಿವಾದ : ಸುಳ್ಳು ಆರೋಪ ಮಾಡುವವರ ಮೇಲೂ ಸೂಕ್ತ ಕ್ರಮ ತೆಗೆದುಕೊಳ್ಳಿ | ಮುನಿಯಾಲು ವಿರುದ್ಧ ಸುನಿಲ್‌ ಕುಮಾರ್‌ ಕೆಂಡಾಮಂಡಲ

ಜನಪ್ರತಿನಿಧಿ (ಉಡುಪಿ) : ಕಾಂಗ್ರೆಸ್ ಕಾರ್ಕಳದ ಪ್ರವಾಸೋದ್ಯಮದ ಕಗ್ಗೊಲೆ ಮಾಡಿದೆ. ಪರಶುರಾಮ ಥೀಮ್ ಪಾರ್ಕ್ ಗೆ ಸರ್ಕಾರ 4.50 ಕೋಟಿ ಹಣ ಮಂಜೂರಾದರೂ ಹಣ ಬಿಡುಗಡೆ ಮಾಡಿಲ್ಲ. ಹತಾಶೆಯಿಂದ ಕಾಂಗ್ರೆಸ್ ಸುಳ್ಳು ಆರೋಪ ಸೃಷ್ಟಿಸಿದೆ ಎಂದು ಶಾಸಕ ಕಾರ್ಕಳ ಸುನೀಲ್‌ ಕುಮಾರ್‌ ಹೇಳಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸುನೀಲ್‌ ಕುಮಾರ್‌, ನಿರ್ಮಿತಿ ಕೇಂದ್ರ ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಳಿಸಿಲ್ಲ. ಗುಣಮಟ್ಟ ಸೇರಿದಂತೆ ಯಾವುದೇ ತನಿಖೆಗೆ ಸಿದ್ದ. ಶೀಘ್ರಮುಖದಲ್ಲಿ ಪ್ರವಾಸಿ ತಾಣವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿ ಎಂದಿದ್ದಲ್ಲದೇ, ಈ ಸಂಬಂಧಿಸಿ ಸುಳ್ಳು ಆರೋಪ ಮಾಡುವವರ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದವರು ಒತ್ತಾಯಿಸಿದ್ದಾರೆ.

ಫೈಬರ್ ಪ್ರತಿಮೆ ಎಂದು ದೂರಿದವರು ಈಗ ಆರೋಪ ಕೈಬಿಟ್ಟಿದ್ದಾರೆ.‌ ʼಹೈಕೋರ್ಟ್ ಪ್ರತಿಮೆ ಕಂಚು ಎಂದಿದೆ. ಎಷ್ಟು ಪ್ರಮಾಣದಲ್ಲಿ, ಕಂಚು, ಕಾಪರ್‌, ಜಿಂಕ್‌ ಒಳಸಲಾಗಿದೆ ಎಂದು ನಾಗಪ್ರಸನ್ನ ಅವರಿದ್ದ ಪೀಠ ಹೇಳಿದೆ ಎಂದು ತಡವರಿಸುತ್ತಾ ಶಾಸಕರು ಹೇಳಿದ್ದಲ್ಲದೇ, ಸರ್ಕಾರಿ ಕಾಮಗಾರಿ ಸರಿಯಾಗಿಲ್ಲ ಎಂದಾದಲ್ಲಿ ಅದಕ್ಕೆ ಸಂಬಂಧಪಟ್ಟ ಇಲಾಖೆ ಮತ್ತು ಗುತ್ತಿಗೆದಾರರ ಮೇಲೆ ಮೊಕದ್ದಮೆ ದಾಖಲಿಸಬೇಕು. ಆದರೆ, ಇಲ್ಲಿ ಪ್ರವಾಸೋದ್ಯಮ ಇಲಾಖೆ, ನಿರ್ಮಿತಿ ಕೇಂದ್ರ, ಜಿಲ್ಲಾಡಳಿತ ಅಥವಾ ಯಾವುದೇ ಇಲಾಖೆಯೂ ದೂರು ನೀಡಿಲ್ಲ. ಬದಲಾಗಿ ದೂರು ಕೊಟ್ಟಿರುವುದು ಕಾಂಗ್ರೆಸ್ ಮುಖಂಡ. ಓರ್ವ ಕಾಂಗ್ರೆಸ್ ಮುಖಂಡ, ಖಾಸಗಿ ವ್ಯಕ್ತಿ ನೀಡಿರುವ ದೂರಿಗೆ ಎಫ್‌ಐಆ‌ರ್ ದಾಖಲಾಗುತ್ತದೆ. ಹೀಗೆ ಸರ್ಕಾರಿ ಯೋಜನೆಗೆ ಯಾವುದೋ ಒಬ್ಬ ಖಾಸಗಿ ವ್ಯಕ್ತಿ ನೀಡಿದ ದೂರಿಗೆ ಎಫ್‌ಐಆ‌ರ್ ಮಾಡುವ ಮೂಲಕ ಪೊಲೀಸ್ ಇಲಾಖೆ ಹೊಸ ಪರಂಪರೆಗೆ ನಾಂದಿ ಹಾಡಿದೆ. ಅಲ್ಲದೆ ಕೃಷ್ಣ ನಾಯ್ಕ ಅವರ ಗೋದಾಮಿಗೆ ಮಹಜರು ಮಾಡಲು ಪೊಲೀಸರು ಪರಾಜಿತ ಅಭ್ಯರ್ಥಿಯನ್ನು ಕರೆದುಕೊಂಡು ಹೋಗಿದ್ದಾರೆ. ಯಾಕೆ ಅವರನ್ನು ಮಹಜರಿಗೆ ಕರೆದುಕೊಂಡು ಹೋದರು ಎಂಬುದಕ್ಕೆ ಪೊಲೀಸ್‌ ಇಲಾಖೆ ಉತ್ತರ ನೀಡಬೇಕು ಎಂದರು.

ಶಿಲ್ಪಿ ಮೂರ್ತಿಯ ಮರುವಿನ್ಯಾಸದ ಕೋರಿದ್ದರು.‌ ಜಿಲ್ಲಾಧಿಕಾರಿಯವರೇ ಮರುವಿನ್ಯಾಸ ಕ್ಕೆ ಅನುಮತಿ ಕೊಟ್ಟಿದ್ದಾರೆ. ಶಿಲ್ಪಿ ಪ್ರತಿಮೆ ತೆರವು ಮಾಡಿದರೆ ಅದು ಕಳ್ಳತನ ಹೇಗಾಗುತ್ತದೆ?. ಪ್ರತಿಮೆ ತೆರವಿಗೆ ತಹಶಿಲ್ದಾರ್ ಪೊಲೀಸ್ ಭದ್ರತೆ ಕೇಳಿದ್ದಾರೆ. ಅಂದು ಪ್ರತಿಮೆ ತೆರವಿಗೆ ಅವಕಾಶ ಕೊಟ್ಟವರೇ ಇಂದು ತನಿಖೆ ಮಾಡುತ್ತಿದ್ದಾರೆ ಎಂದರು.

ಫೈಬರ್ ಉದಯನಿಗೆ ಕಲಾವಿದನ ಬಗ್ಗೆ ಅನುಕಂಪ ಇರಲಿಲ್ವಾ? ನಿಮ್ಮದೇ ಸರಕಾರ ಇದೆ, ಪೂರ್ಣ ತನಿಖೆ ಮಾಡಿ. ಕಾಮಗಾರಿ ನಿಂತು ಒಂದು ವರ್ಷವಾಯ್ತು, ಸುಮ್ಮನೇ ಕಾಲಹರಣ ಮಾಡಲಾಗುತ್ತಿದೆ. ಪ್ರವಾಸೋದ್ಯಮಕ್ಕೆ, ಸರಕಾರಕ್ಕೆ ನಷ್ಟವಾಗಿದೆ. ರಾಜಕೀಯ ಹಸ್ತಕ್ಷೇಪವಿಲ್ಲದೇ ತನಿಖೆ ನಡೆಯಲಿ. ಪ್ರಶ್ನಾವಳಿಯನ್ನು ಕಾಂಗ್ರೆಸ್ ಕಚೇರಿಯಲ್ಲಿ ಪೊಲೀಸರು ಸಿದ್ಧ ಮಾಡಿದ್ದಾರೆ.  ಶೀಘ್ರದಲ್ಲಿ ಥೀಂ ಪಾರ್ಕ್‌ ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳುವಂತೆ ಮಾಡಲಿ ಎಂದು ಅವರು ಹೇಳಿದರು.

ಫೈಬರ್ ಉದಯನಿಂದ ಪ್ರವಾಸೋದ್ಯಮ ಹಾಳಾಗಿದೆ‌. ಅವಕಾಶವಾದಿ ಉದಯ ಗೋಲ್ ಮಾಲ್ ಗುತ್ತಿಗೆದಾರ. ಫೈಬರ್ ಉದಯ, ಟಾರ್ಚರ್ ಉದಯ, ಮೆಕ್ಯಾನಿಕಲ್ ಎಂಜಿನಿಯರ್ ಉದಯ ಎಂದಿದ್ದಲ್ಲದೇ, ಉದಯ ಕುಮಾರ್ ಕಾಮಗಾರಿ ಮೇಲೆ ಪ್ರೈವೇಟ್ ಕಂಪ್ಲೆಟ್ ಮಾಡಿದರೆ ನೂರಾರು ಎಫ್ ಐ ಆರ್ ಆಗಬಹುದು ಎಂದು ಹೇಳಿದರು.

ತನಿಖಾಧಿಕಾರಿಗಳು ಮತ್ತು ಅಪಪ್ರಚಾರ ಸುಳ್ಳಿನ ಸರಮಾಲೆಯ ಮೇಲೂ ಕ್ರಮವಾಗಲಿ. ಕಾರ್ಕಳದ ದ್ವೇಷಿಗಳು ಅಭಿವೃದ್ಧಿ ವಿರೋಧ ಮಾಡುತ್ತಿದ್ದಾರೆ. ಗೋಮಾಳ ಜಾಗದಲ್ಲಿ ಸಾರ್ವಜನಿಕ ಚಟುವಟಿಕೆ ಮಾಡಬಹುದು. ಕಾಮಗಾರಿ ಪೆಂಡಿಗ್ ಇದ್ದಾಗ ಎಷ್ಟು ಉದ್ಘಾಟನೆಗಳು ಆಗಿಲ್ಲ?. ಈ ಯೋಜನೆಯಲ್ಲಿ ಐದಾರು ಇಲಾಖೆಯ ಅನುದಾನ ಇದೆ. ಆರೋಪ ಮಾಡುವ ಮೂರ್ಖರಿಗೆ ಥೀಮ್ ಪಾರ್ಕ್ ನ ಕಲ್ಪನೆಯೇ ಇಲ್ಲ. ಪ್ರತಿಮೆಯ ಬಿಡಿಭಾಗ ಪೊಲೀಸ್ ಅಧಿಕಾರಿ ಸಮ್ಮುಖದಲ್ಲೇ ಆಗಿದೆ. ಅವರನ್ನೂ ಸಸ್ಪೆಂಡ್ ಮಾಡಿ. ನಾನು ಯಾಕೆ ಕ್ಷಮೆ ಕೇಳಬೇಕು? ನಾನು ಕ್ಷಮೆ ಕೇಳುವುದಿಲ್ಲ. ನೀವು ಕ್ಷಮೆ ಕೇಳಿ ಪ್ರಾಯಶ್ಚಿತ್ತ ಮಾಡಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉದಯ್‌ ಕುಮಾರ್‌ ಶೆಟ್ಟಿ ಮುನಿಯಾಲು ವಿರುದ್ಧ ಸುನಿಲ್‌ ಕುಮಾರ್‌ ಕೆಂಡಾಮಂಡಲ :
ಮನೆಯಲ್ಲಿರಬೇಕಾದವರು ವಿಧಾನಸೌಧದಲ್ಲಿದ್ದಾರೆ ಎಂಬ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಸುನಿಲ್ ಕುಮಾರ್, ಯಾರು ಮನೆಯಲ್ಲಿ ಕೂರಬೇಕು, ಯಾರು ವಿಧಾನಸೌಧದಲ್ಲಿರಬೇಕು ಎಂಬುದನ್ನು ಜನ ತೀರ್ಮಾನ ಮಾಡಿದ್ದಾರೆ.

ಅಂದು ಜೀವಂತವಾಗಿದ್ದಾಗಲೇ ಮಾಜಿ ಸಿಎಂ ವೀರಪ್ಪ ಮೊಯ್ಲಿ ಮಾಜಿ ಶಾಸಕ ಗೋಪಾಲ ಭಂಡಾರಿಯವರ ಶವಯಾತ್ರೆ ಮಾಡಿದಂತಹ ಉದಯ ಶೆಟ್ಟಿ ಮಾನಸೀಕತೆ ಇನ್ನೂ ಬದಲಾಗಿಲ್ಲ. ಅದೇ ಮಾನಸೀಕತೆಯಿಂದ ಇಂದು ಶಿಲ್ಪಿಯ ಅನ್ನಕ್ಕೆ ಕಲ್ಲು ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲದೆ ತನಿಖೆಯಲ್ಲಿ ಯಾರಯಾರದ್ದೋ ಹೆಸರು ಬರುವಂತೆ ಪೊಲೀಸರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದ ಸುನಿಲ್ ಕುಮಾರ್ ದೂರು ನೀಡಿದ್ದು, ಮಹಜರು ಮಾಡಿದ್ದು, ರಸ್ತೆಗೆ ಮಣ್ಣು ಹಾಕಿರುವುದು, ಹಣ ಬಿಡುಗಡೆ ಮಾಡದಿರುವುದು, ತನಿಖೆಗೆ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿರುವುದು ಎಲ್ಲವೂ ಕಾಂಗ್ರೆಸ್. ಇದರಿಂದ ಒಟ್ಟಾರೆ ಇದರ ಉದ್ದೇಶ ಕಾರ್ಕಳ ವಿಕಾಸವಾಗಬಾರದು ಎಂಬುದು ಸ್ಪಷ್ಟವಾಗುತ್ತದೆ ಎಂದು ಕಿಡಿ ಕಾರಿದ್ದಾರೆ. 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!