spot_img
Thursday, December 5, 2024
spot_img

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಉದ್ಯೋಗವಕಾಶ : ಪೂರ್ಣ ಮಾಹಿತಿ ಈಗಲೇ ನೋಡಿ.

ಜನಪ್ರತಿನಿಧಿ (ಮಾಹಿತಿ) : ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 4 ಮ್ಯಾನೇಜರ್ (ಲೀಗಲ್) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್‌ 29, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅಭ್ಯರ್ಥಿಗಳು ಆನ್​ಲೈನ್ ಅಥವಾ ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ :
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಮಂಡಳಿಯಿಂದ ಕಡ್ಡಾಯವಾಗಿ ಕಾನೂನಿನಲ್ಲಿ ಪದವಿ, ಎಲ್‌ಎಲ್‌ಬಿ ಪೂರ್ಣಗೊಳಿಸಿರಬೇಕು.

ವಯೋಮಿತಿ :
ಅಭ್ಯರ್ಥಿಗಳ ವಯಸ್ಸು ಗರಿಷ್ಠ 56 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ :
ಮಾಸಿಕ ರೂ.15,600 – 39,100.

ಉದ್ಯೋಗದ ಸ್ಥಳ :
ಭಾರತದಾದ್ಯಂತ

ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಮತ್ತು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳಿಗೆ ನೇರವಾಗಿ ಅರ್ಜಿ ಸಲ್ಲಿಸಲು ಸುಲಭವಾಗಲೆಂದೇ ಈ ಕೆಳಗೆ ನೇರ ಲಿಂಕ್​ನ್ನು ನೀಡಲಾಗಿದೆ.
ಇಲ್ಲಿ ಕ್ಲಿಕ್‌ ಮಾಡಿ : NHAI Recruitment 2024: National Highway Authority of India

ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ.

DGM (HR & Admn-III)-NG
ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ
ಪ್ಲಾಟ್ ನಂ.ಜಿ-5&6
ಸೆಕ್ಟರ್-10
ದ್ವಾರಕಾ
ನವದೆಹಲಿ-110075.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!