Wednesday, November 13, 2024

ಬೈಲೂರು ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ೨೦೨೪-ಕನ್ನಡ ನಡೆನುಡಿ ಕಾರ್ಯಕ್ರಮ

ಕುಂದಾಪುರ: ರಾಜ್ಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಬೆಂಗಳೂರು, ಇಂಡಿಯಾ ಪೌಂಡೇಷನ್‌ಫಾರ್‌ಆರ್ಟ್ಸ್‌ಬೆಂಗಳೂರು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಇವರ ಸಹಯೋಗದಲ್ಲಿ ಕಲಿ ಕಲಿಸು ಕಲಾ ಅಂತರ್ಗತ ಕಲಿಕೆಯ “ ಕರಾವಳಿಯ ವೀರ ವನಿತೆಯರು ಸಾಮಾಜಿಕ ಶೋಷಣೆ ಮತ್ತು ವಿದೇಶಿಯರ ವಿರುದ್ಧ ಹೋರಾಡಿ ನಾಡು ಕಟ್ಟಿದ ಕಥನಕ್ಕೆ ಯಕ್ಷರಂಗ ರೂಪ ನೀಡಿ ಶಾಲಾ ವಿದ್ಯಾರ್ಥಿನಿಯರಿಂದ ಅಭಿನಯಿಸುವುದು” ಎಂಬ ಯೋಜನೆಯ ಅಂಗವಾಗಿ ನ.೯ರಂದು ಕನ್ನಡ ರಾಜ್ಯೋತ್ಸವ ೨೦೨೪ರ- ಕನ್ನಡ ನಡೆನುಡಿ ಕಾರ್ಯಕ್ರಮದ ಯಕ್ಷ ರಂಗಪಠ್ಯ ರಚನೆ ಮತ್ತು ವಾಚನ ಸರಣಿ ಕಾರ್ಯಗಾರಗಳ ಮೊದಲ ಕಾರ್ಯಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಯಕ್ಷಗುರು ಸುಬ್ರಹ್ಮಣ್ಯ ಐತಾಳ್ ಬೈಲೂರು ಅಬ್ಬಕ್ಕ ರಾಣಿಯ ಕಥನದ ಯಕ್ಷ ಪಠ್ಯ ವಾಚನವನ್ನು ಮಕ್ಕಳಿಗೆ ಮಾಡಿಸುತ್ತ “ಇಂದಿನ ದಿನಗಳಲ್ಲಿ ಮಕ್ಕಳನ್ನು ಪಠ್ಯ ಮತ್ತು ಕ್ರೀಡೆಯ ಜೊತೆಗೆ ಸಾಹಿತ್ಯಿಕವಾದ ಬೌದ್ಧಿಕ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಬೇಕು” ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ತತೆಯನ್ನು ಶಾಲಾ ಎಸ್‌ಡಿ ಎಮ್‌ಸಿ ಅಧ್ಯಕ್ಷರಾದ ಮಂಜುನಾಥ ಮೊಗವೀರ ವಹಿಸಿದ್ದರು.

ಸುಬ್ರಹ್ಮಣ್ಯ ಐತಾಳರು ಕಾರ್ಯಗಾರದಲ್ಲಿ ಮಕ್ಕಳಿಗೆ ವಿವಿಧ ಛಂದಸ್ಸು, ತಾಳ, ರಾಗಗಳನ್ನು ಬಳಸಿಕೊಂಡು ಯಕ್ಷಪಠ್ಯ ಹೇಗೆ ರಚಿಸುತ್ತಾರೆ? ಎಂಬುದನ್ನು ವಿವರಿಸುತ್ತ. ರಾಣಿ ಅಬ್ಬಕ್ಕ ಕಥನದ ಯಕ್ಷ ಪಠ್ಯವನ್ನು ಹಾಡಿ ಅದರ ಅರ್ಥಗಾರಿಕೆಯನ್ನು ಹೇಳುವ ಕ್ರಮವನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಿದರು.

ನಂತರದಲ್ಲಿ ಮಕ್ಕಳಿಗೆ ಕನ್ನಡ ನಡೆನುಡಿ ಕಾರ್ಯಕ್ರಮದ ಅಂಗವಾಗಿ ಕನ್ನಡ ನಾಡಗೀತೆಗಳ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಶಾಲಾ ಎಸ್‌ಡಿ ಎಮ್‌ಸಿ ಅಧ್ಯಕ್ಷರಾದ ಮಂಜುನಾಥ ಮೊಗವೀರ ಇವರು ಕೊಡಮಾಡಿದ ಬಹುಮಾನವನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ೭ನೇ ತರಗತಿ ಮಕ್ಕಳ ಹಸ್ತಪತ್ರಿಕೆ ನುಡಿ ಚಾವಡಿಯನ್ನು ಸಂಪನ್ಮೂಲ ವ್ಯಕ್ತಿ ಸುಬ್ರಹ್ಮಣ್ಯ ಐತಾಳರು ಅನಾವರಣ ಮಾಡಿದರು. ಈ ಸಂದರ್ಭದಲ್ಲಿ ಎಸ್‌ಡಿ ಎಮ್‌ಸಿ ಉಪಾಧ್ಯಕ್ಷರಾದ ಅನುಷಾ ಶೆಟ್ಟಿ, ಎಸ್‌ಡಿ ಎಮ್‌ಸಿ ಸದಸ್ಯೆ ಲಾವಣ್ಯ ಶೆಟ್ಟಿ ಶಾಲಾ ಅತಿಥಿ ಶಿಕ್ಷಕಿಯರಾದ ಪ್ರಮೀಳಾ, ವಿಶಾಲಾಕ್ಷಿ ಉಪಸ್ಥಿತರಿದ್ದರು.

ಶಾಲಾ ಮುಖ್ಯಶಿಕ್ಷಕಿ ಗಿರಿಜಾ ಡಿ ಸ್ವಾಗತಿಸಿದರು. ಸಹಶಿಕ್ಷಕಿ ಸಂಧ್ಯಾ ಕೆ ವಂದಿಸಿದರು. ಕಾರ್ಯಕ್ರಮವನ್ನು ಸಂಯೋಜಿಸಿದ ಕಲಿಕಲಿಸು ಯೋಜನೆಯ ನಿರ್ವಾಹಕ ಆನಂದ ಕುಲಾಲ ಪ್ರಸ್ತಾವನೆಗೈದು ಕಾರ್ಯಕ್ರಮವನ್ನು ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!