spot_img
Wednesday, April 1, 2026
spot_img

ವಂಡ್ಸೆ ಸಂಯೋಜಕ ವೃತ್ತದ ಸಮಾಲೋಚನ ಸಭೆ

ವಂಡ್ಸೆ : ವಂಡ್ಸೆ ಸಂಯೋಜಕ ವೃತ್ತದ ಕೋರ್ ವಿಷಯಗಳ ಸಮಾಲೋಚನೆ ಸಭೆಯು ಸ.ಮಾ.ಹಿ.ಪ್ರಾ.ಶಾಲೆ ವಂಡ್ಸೆ ಇಲ್ಲಿ ನಡೆಯಿತು. ಕಿರು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಂಡ್ಸೆ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಸದಾಶಿವ್ ಕೆಂಚನೂರು ವಹಿಸಿದ್ದರು. ಸಭೆಯಲ್ಲಿ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ವತಿಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ರಾಜು. ಎನ್ ಮತ್ತು ಕುಂದಾಪುರ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ವಂಡ್ಸೆ ಶಾಲೆಯ ಸಹಶಿಕ್ಷಕ ಪ್ರತಾಪ್ ಕುಮಾರ್ ಶೆಟ್ಟಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಸ.ಕಿ.ಪ್ರಾ ಶಾಲೆ ಮಾವಿನಗುಳಿಯ ಸಹಶಿಕ್ಷಕರಾದ ಗಣೇಶ್ ಮತ್ತು ಕೆಪಿ‌ಎಸ್ ಶಾಲೆಯ ಸಹ ಶಿಕ್ಷಕಿ ಸಂಗೀತಾ ಉಪಸ್ಥಿತರಿದ್ದರು.
ವಂಡ್ಸೆಯ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ ಶೆಟ್ಟಿ ಸ್ವಾಗತಿಸಿದರು. ಕೊಲ್ಲೂರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶೈಲಜ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ವಿವಿಧ ಶಾಲೆಗಳಿಂದ ಸುಮಾರು ಐವತ್ತಕ್ಕೂ ಹೆಚ್ಚು ಶಿಕ್ಷಕರು ಆಗಮಿಸಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!