spot_img
Thursday, December 5, 2024
spot_img

ಸರ್ಕಾರಿ ನೇಮಕಾತಿಗಳ ಅಧಿಸೂಚನೆಯಲ್ಲಿ ನಿರ್ದಿಷ್ಟ ಸೂಚನೆಗಳನ್ನು ನೀಡದೆ ನಿಯಮ ಬದಲಿಸುವಂತಿಲ್ಲ : ಸುಪ್ರೀಂ ಕೋರ್ಟ್‌

ಜನಪ್ರತಿನಿಧಿ (ನವ ದೆಹಲಿ) : ಸರ್ಕಾರಿ ನೇಮಕಾತಿಗಳ ಅಧಿಸೂಚನೆಯಲ್ಲಿ ನಿರ್ದಿಷ್ಟ ಸೂಚನೆಗಳನ್ನು ನೀಡದೆ, ಇಡೀ ಪ್ರಕ್ರಿಯೆಯನ್ನು ಮಧ್ಯದಲ್ಲಿ ತಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು(ಗುರುವಾರ) ಹೇಳಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿತು.

‘ಒಂದು ಬಾರಿ ನೇಮಕಾತಿ ಪ್ರಕ್ರಿಯೆ ಆರಂಭವಾದರೆ, ಅದನ್ನು ಅರ್ಧದಲ್ಲಿಯೇ ನಿಲ್ಲಿಸುವಂತಿಲ್ಲ. ಇದು ‘ಆಟದ ನಿಯಮ’. ನೇಮಕಾತಿಯ ನಿಯಮಗಳು ಅನಿಯಂತ್ರಿತವಾಗಿರಬಾರದು ಹಾಗೂ ಸಂವಿಧಾನದ 14ನೇ ವಿಧಿಗೆ ಅನುಗುಣವಾಗಿರಬೇಕು ಎಂದು ನ್ಯಾಯಪೀಠ ಹೇಳಿದೆ.

ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಪಿ.ಎಸ್. ನರಸಿಂಹ, ಪಂಕಜ್ ಮಿತ್ತಲ್ ಹಾಗೂ ಮನೋಜ್ ಮಿಶ್ರಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ನೇಮಕಾತಿಗಳು ಎಂದೆಂದಿಗೂ ತಾರತಮ್ಯ ರಹಿತ ಹಾಗೂ ಪಾರದರ್ಶಕವಾದ ಪಕ್ಷಗಳನ್ನು ಹೊಂದಿರಬೇಕು. ಆದರೆ ಮಧ್ಯದಲ್ಲಿ ಏನೇ ಬದಲಾವಣೆಗಳಾದರೂ ಅದರಿಂದ ಅಭ್ಯರ್ಥಿಗಳೂ ಅಚ್ಚರಿಗೊಳಗಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!