spot_img
Monday, March 24, 2025
spot_img

ಸೈಬರ್ ವಂಚನೆ ಕುರಿತು ಜಾಗೃತರಾಗಬೇಕು-ಬಸವರಾಜ ಕನಶೆಟ್ಟಿ

ಮರವಂತೆ: ಡಿಜಿಟಲ್ ತಂತ್ರಜ್ಞಾನ ಬೆಳೆದಂತೆ ಸೈಬರ್ ವಂಚನೆ ಪ್ರಕರಣ ಹೆಚ್ಚುತ್ತಿದೆ ಮತ್ತು ಅದರ ಸ್ವರೂಪದಲ್ಲೂ ಕ್ಷಿಪ್ರ ಬದಲಾವಣೆ ಆಗುತ್ತಿದೆ. ವಂಚನೆಗೆ ಒಳಗಾಗದಿರಲು ಅದರ ಕುರಿತು ಜನರು ಜಾಗೃತರಾಗಬೇಕು ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಅಪರಾಧ ಪತ್ತೆವಿಭಾಗದ ಸಬ್ ಇನ್ಸ್‌ಪೆಕ್ಟರ್ ಬಸವರಾಜ ಕನಶೆಟ್ಟಿ ಎಚ್ಚರಿಸಿದರು.

ಮರವಂತೆಯ ಸಾಧನಾ ಸಮಾಜ ಸೇವಾ ವೇದಿಕೆ ಮತ್ತು ಇತರ ಸ್ವಯಂಸೇವಾ ಸಂಘಟನೆಗಳು ಭಾನುವಾರ ಸಾಧನಾ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಸೈಬರ್ ಸುರಕ್ಷತೆ ಕುರಿತು ವಿಸ್ತೃತ ಮಾಹಿತಿ, ಮಾರ್ಗದರ್ಶನ ನೀಡಿದರು.
ವಂಚಕರು ಜಾಲ ರಚಿಸಿಕೊಂಡಿರುತ್ತಾರೆ ಮತ್ತು ದೂರದಲ್ಲಿದ್ದು ವಂಚನೆ ಮಾಡುತ್ತಾರೆ. ಕೆವೈಸಿ ವಿವರ, ಒಟಿಪಿ, ಪಿನ್ ಸಂಖ್ಯೆ ಪಡೆಯುವುದು, ಲಿಂಕ್ ಕಳುಹಿಸುವುದು, ಬಹುಮಾನ ಮತ್ತು ಅತ್ಯಧಿಕ ಲಾಭದ ಆಮಿಷ ಒಡ್ಡುವುದು, ಡಿಜಿಟಲ್ ಅರೆಸ್ಟ್ ಮಾಡುವುದು, ಅನಪೇಕ್ಷಿತ ಕೊರಿಯರ್ ಕಳುಹಿಸುವುದು, ಅಪರಾಧದ ಭಯ ಹುಟ್ಟಿಸುವುದು. ವೀಡಿಯೊ ಕರೆ ಮಾಡುವ ಮೂಲಕ ಜನರ ಬ್ಯಾಂಕ್ ಖಾತೆಯಿಂದ ಹಣ ವರ್ಗಾಣೆ ಮಾಡಿಕೊಳ್ಳುವುದು, ಶೇರ್ ಮಾರ್ಕೆಟ್‌ನಲ್ಲಿ ಲಾಭದ ಆಮಿಷ ತೋರಿಸುವುದು, ಫೇಕ್ ವೀಸಾ ನೀಡುವುದು ಮುಂತಾದ ವಿಧಾನಗಳಿಂದ ವಂಚನೆ ನಡೆಯುತ್ತಿದೆ. ನೇರವಾಗಿಯೂ ಹಣ ಪಡೆಯಲಾಗುತ್ತದೆ. ಮೋಸಹೋದ ಒಂದು ಗಂಟೆಯೊಳಗೆ ೧೯೩೦ ಸಂಖ್ಯೆಯ ಸಹಾಯವಾಣಿಗೆ ಕರೆ ಮಾಡಿದರೆ ಹಣ ವರ್ಗಾವಣೆ ತಡೆಯುವುದು ಮತ್ತು ಅಪರಾಧ ಪತ್ತೆಮಾಡುವುದು ಸುಲಭವಾಗುತ್ತದೆ ಎಂದು ಅವರು ಹೇಳಿದರು. ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿ ಸಂಶಯ ದೂರ ಮಾಡಿದರು.

ಸಾಧನಾ ಅಧ್ಯಕ್ಷ ಪುಟ್ಟ ಎಂ. ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಎಂ. ಶಂಕರ ಖಾರ್ವಿ ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ಎಸ್. ಜನಾರ್ದನ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ. ಎಸ್. ಮಡಿವಾಳ್ ವಂದಿಸಿದರು. ದೇವಿದಾಸ ಶ್ಯಾನುಭಾಗ್ ನಿರೂಸಿದರು. ಸಂಘಟನೆಗಳ ಪ್ರತಿನಿಧಿಗಳಾದ ಕರುಣಾಕರ ಆಚಾರ್ಯ, ಶರತ್, ವಿಶ್ವನಾಥ ಶ್ಯಾನುಭಾಗ್, ಕಿಶನ್‌ಕುಮಾರ್, ಸುಜಾತಾ ಉಪಸ್ಥಿತರಿದ್ದರು,

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!