Thursday, November 21, 2024

ಅನರ್ಹರು ಪಡಿತರ ಚೀಟಿಯನ್ನು ಹಿಂದಿರುಗಿಸಲು ಸೂಚನೆ

ಉಡುಪಿ: ಜಿಲ್ಲೆಯಲ್ಲಿ ಇರುವ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯನ್ನು ಅಕ್ಟೋಬರ್ ತಿಂಗಳಲ್ಲಿ ಕೆ.ಎಸ್.ಡಿ.ಸಿ ಗೆ ಮೈಗ್ರೇಶನ್ ಆಗಿರುವ ಹೊಸ ಸರ್ವರ್ ಮೂಲಕ ವಿತರಣೆ ಮಾಡುವ ಕಾರ್ಯ ಪ್ರಾರಂಭಿಸಲಾಗಿದ್ದು, ಈ ಸಂಬಂಧ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದ್ದು, ಪಡಿತರ ಚೀಟಿದಾರರಿಂದ ಹಲವು ದೂರುಗಳು ಕೇಳಿ ಬಂದಿರುತ್ತದೆ. ಪ್ರಸ್ತುತ ಹೊಸ ಸರ್ವರ್ ಅಳವಡಿಸಿರುವುದರಿಂದ ಪ್ರಸಕ್ತ ತಿಂಗಳಲ್ಲಿ ತಡವಾಗಿ (ಅಕ್ಟೋಬರ್ ೧೮ ನೇ ತಾರೀಕಿನಿಂದ) ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿದೆ.

ಪ್ರಸಕ್ತ ತಿಂಗಳಲ್ಲಿ ಪಡಿತರ ವಿತರಣೆಯು ವಿಳಂಬವಾಗಿ ಪ್ರಾರಂಭವಾಗಿರುವುದರಿಂದ ಆಹಾರ ಇಲಾಖೆಯ ಆಯುಕ್ತರು ಅಕ್ಟೋಬರ್-2024 ರ ಮಾಹೆಗೆ ಮಾತ್ರ ಪಡಿತರ ವಿತರಣೆಯನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ರ ವರೆಗೆ ನಿಗಧಿಪಡಿಸಲಾಗಿರುತ್ತದೆ.

ತಾಂತ್ರಿಕ ಸಮಸ್ಯೆಯಿಂದ ಪಡಿತರ ವಿತರಣೆಯು ವಿಳಂಬವಾಗಿರುವುದರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಪಡಿತರ ಪಡೆಯಲು ತೊಂದರೆಯಾಗುತ್ತಿರುವುದು ಆಹಾರ ಇಲಾಖೆಯ ಆಯುಕ್ತರ ಗಮನಕ್ಕೆ ತಂದಿದ್ದು, ತಾಂತ್ರಿಕ ಸಮಸ್ಯೆಯನ್ನು ಕೂಡಲೇ ಬಗೆಹರಿಸುವುದಾಗಿ ಹಾಗೂ ಸಾರ್ವಜನಿಕರು ಈ ಬಗ್ಗೆ ಯಾವುದೇ ಆತಂಕ ಪಡುವುದು ಬೇಡವೆಂದು ತಿಳಿಸಿರುತ್ತಾರೆ.

ಅನರ್ಹ ಪಡಿತರ ಚೀಟಿದಾರರ ಬಗ್ಗೆ, ಜಿಲ್ಲೆಯ ಎಲ್ಲಾ ತಾಲೂಕಿನ ಆಹಾರ ಶಿರಸ್ತೇದಾರರು ಮತ್ತು ಆಹಾರ ನಿರೀಕ್ಷಕರು ಪರಿಶೀಲನೆ ನಡೆಸುತ್ತಿದ್ದು, ಈ ವೇಳೆ ಸಾರ್ವಜನಿಕರು ತಾವಾಗಿಯೇ ಬಿ.ಪಿ.ಎಲ್ ಪಡಿತರ ಚೀಟಿ ಪಡೆಯಲು ಅನರ್ಹತೆ ಹೊಂದಿದ್ದಲ್ಲಿ ಸ್ವತಃ/ ತಾವಾಗಿಯೇ ಪಡಿತರ ಚೀಟಿಯನ್ನು ಸೆರೆಂಡರ್ ಮಾಡಬೇಕು. ಈ ಬಗ್ಗೆ ಆಹಾರ ಶಾಖೆಗೆ ಪರಿಶೀಲನೆಗೆ ಒಳಪಡಿಸಲು ತಿಳಿಸಿರುವ ಪಡಿತರ ಚೀಟಿದಾರರಿಗೆ ಅಕ್ಟೋಬರ್ ತಿಂಗಳಲ್ಲಿ ಪಡಿತರವನ್ನು ನೀಡಲು ಈಗಾಗಲೇ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!